ಮಹಿಳಾ ಕ್ರಿಕೆಟ್ ಉತ್ಸುಕರಿಗೆ ಇಂದಿನ ಪಂದ್ಯವನ್ನು ನಿರೀಕ್ಷಿಸಲಾಗುತ್ತಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮಹಿಳಾ ಏಕದಿನ ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ, ಭಾರತ ತಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಏಳು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಆಥಿತೇಯ ಆಸ್ಟ್ರೇಲಿಯಾಕ್ಕೆ ಸವಾಲಾಗಿ ಇಂದು ಹರ್ಮನ್ ಪ್ರೀತ್ ಕೌರ್ ಸಾರಥ್ಯದಲ್ಲಿ ಇಂದು ಭಾರತವು ಕ್ರಿಕೆಟ್ ಪಂದ್ಯದಲ್ಲಿ ಸೆಣಸಾಡಲಿದೆ.
ನವಿ ಮುಂಬೈನ ಡಾ. ಡಿ.ವೈ. ಪಟೇಲ್ ಸ್ಪೋರ್ಟ್ಸ್ ಅಕಾಡೆಮಿ, ಇಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದೆ. ಚೊಚ್ಚಲ ವಿಶ್ವಕಪ್ ಎತ್ತಿಹಿಡಿಯುವ ಭರವಸೆ ಮೂಡಿಸಿರುವ ಭಾರತ ತಂಡವು, ಫೈನಲ್ ತಲುಪುವುದನ್ನು ನಿರೀಕ್ಷಿಸಲಾಗಿದೆ. ಎಂಟು ವರ್ಷಗಳ ಹಿಂದೆ ಇದೇ ಸಂದರ್ಭದಲ್ಲಿ ಭಾರತವು ಆಸ್ಟ್ರೇಲಿಯಾವನ್ನೇ ಎದುರಿಸಿತ್ತು ಎನ್ನಲಾಗಿದೆ. ಪ್ರಸಕ್ತ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಉಭಯ ತಂಡಗಳು ನಾಲ್ಕರ ಘಟಕ್ಕೆ ತಲುಪಿವೆ. KLOSIA Women Embroidery Straight Kurta and Pant Set with Dupataa
ಅಲೀಸಾ ಹೀಲಿ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತದ ಹರ್ಮನ್ ಪ್ರೀತ್ ಕೌರ್ ನಾಯಕತ್ವಗಳ ನಡುವೆ ಪಂದ್ಯ ಜಿದ್ದಾಜಿದ್ದಿ ನಡೆಯಲಿದ್ದು, ಬಲಾಢ್ಯ ತೋರಲಿದೆ. ತಂಡದ ಆಟಗಾರರು ತಮ್ಮ ಸಾಮರ್ಥ್ಯ ಹಾಗೂ ಅನುಭವವನ್ನು ಪಣಕ್ಕಿಡುವ ಸಾಧ್ಯತೆ ಹೆಚ್ಚಾಗಿದೆ. ಈ ಪಂದ್ಯದಲ್ಲಿ ವಿಜಯಶಾಲಿಯಾದ ತಂಡವು ದಕ್ಷಿಣ ಆಫ್ರಿಕಾವನ್ನು ಫೈನಲ್‌ನಲ್ಲಿ ಎದುರಿಸಲಿದೆ. ಇದನ್ನೂ ಓದಿ: ತೆರಿಗೆ ವಂಚನೆ, ನಿಯಮ ಉಲ್ಲಂಘನೆ: ಬೆಂಗಳೂರಿನಲ್ಲಿ RTO ಅಧಿಕಾರಿಗಳ ವಿಶೇಷ ಕಾರ್ಯಾಚರಣೆ!