ರಾಜ್ಯದ ವನ್ಯಜೀವಿ ಪ್ರವಾಸಿ ಪ್ರದೇಶಗಳಾದ ಬಂಡಿಪುರ, ನಾಗರಹೊಳೆಯಲ್ಲಿನ ಸಫಾರಿ ಟ್ರಿಪ್ ಕಡಿತಗೊಳಿಸಲು ಆದೇಶಿಸಲಾಗಿದೆ. ಈ ಹುಲಿ ಸಂರಕ್ಷಿತ ಪ್ರದೇಶವನ್ನು ವೀಕ್ಷಿಸಲು ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದ್ದು, ಈ ಬಗ್ಗೆ ಸಫಾರಿಯ ಟ್ರಿಪ್ ಸಂಖ್ಯೆ ಕೂಡ ಹೆಚ್ಚಿಸಲಾಗಿದ್ದು, ರಾತ್ರಿ 6ರ ನಂತರ ಕಾಡಿನಲ್ಲಿ ಸಫಾರಿ ವಾಹನಗಳು ಸಂಚರಿಸುತ್ತಿವೆ. ಇದು ಪ್ರಾಣಿಗಳ ಉಪಟಳ ಹಾಗೂ ಜನನಿವಾಸಿಗಳಿಗೆ ತೊಂದರೆಯುಂಟಾಗಿದೆ ಎಂದು ಆಗ್ರಹಿಸಿ, ರೈತ ಸಂಘಟನೆಗಳು ಸಫಾರಿ ನಿಲ್ಲಿಸುವಂತೆ ಮನವಿ ಮಾಡಿವೆ ಎನ್ನಲಾಗಿದೆ.
ಈ ಸಂಬಂಧ, ಅರಣ್ಯ ಮತ್ತು ಪರಿಸರ ಸಚಿವರಾದ ಈಶ್ವರ್. ಬಿ ಖಂಡ್ರೆ ಅವರು, ಸಫಾರಿ ವಾಹನಗಳಿಂದ ಉಂಟಾದ ಅತಿಯಾದ ಬೆಳಕು, ಶಬ್ದದಿಂದ ವನ್ಯಜೀವಿಗಳಿಗೆ ತೊಂದರೆ ನೀಡುತ್ತವೆ ಎಂಬ ರೈತರ ದೂರುಗಳ ಹಿನ್ನೆಲೆಯಲ್ಲಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಅಭಯಾರಣ್ಯಗಳಲ್ಲಿ ಸಫಾರಿ ಪ್ರವಾಸಗಳನ್ನು ತಕ್ಷಣ ಕಡಿತಗೊಳಿಸಲು ನಿರ್ದೇಶಿಸಿ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. LONDON BELLY Women dress | jumpsuits for women stylish | black white floral print | geometric pattern | snake print V-neckline | blue floral | black maroon sequin jumpsuits casual formal
ಪ್ರವಾಸಿಗರ ಸಫಾರಿ ವೀಕ್ಷಣೆ ಹಾಗೂ ಸಫಾರಿ ಟ್ರಿಪ್ ಸಂಖ್ಯೆ ಹೆಚ್ಚಾಗಿದ್ದು, ವಾಹನದ ಬೆಳಕು ಮತ್ತು ಶಬ್ದದಿಂದ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಉಪಟಳ ನೀಡುತ್ತಿದೆ ಎಂದು ವಿವಿಧ ರೈತ ಸಂಘಟನೆಗಳು ಆರೋಪಿಸಿವೆ. ಇದಕ್ಕೆ ಸಂಬಂಧಿಸಿದಂತೆ ಸಫಾರಿ ನಿಲ್ಲಿಸುವಂತೆ ಮನವಿ ಮಾಡಲಾಗಿದೆ ವನ್ಯಜೀವಿ ಹಾಗೂ ಪರಿಸರ ಆಸಕ್ತರಿಗೆ ಸಫಾರಿ ಮತ್ತು ಕಾಡಿನ ಬಗ್ಗೆ ಶಿಕ್ಷಣವು ಆದ ಹಾಗೂ ಹಲವರಿಗೆ ಜೀವನೋಪಾಯವೂ ಆಗಿರುವ ನಿಟ್ಟಿನಲ್ಲಿ, ಗುರುವಾರ ಸಂಜೆ ಟ್ರಿಪನ್ನು ಕಡಿತಗೊಳಿಸಲು ಸೂಚಿಸಲಾಗಿದೆ. ಪ್ರಸ್ತುತ ಸಫಾರಿ ಟ್ರಿಪ್ ಸಮಯವು ಬೆಳಗ್ಗೆ 6 ರಿಂದ ಸಂಜೆ 6:00 ತನಕ ನಾಲ್ಕು ಸಫಾರಿ ಟ್ರಿಪ್ ಗಳನ್ನು ನಡೆಸಲಾಗುತ್ತದೆ. ಕತ್ತಲಾಗುವ ವೇಳೆಗೆ ಕೊನೆಯ ಸಫಾರಿ ಮರಳುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಮಹಿಳಾ ಕ್ರಿಕೆಟ್ ವಿಶ್ವಕಪ್ 2025: ಭಾರತ vs ಆಸ್ಟ್ರೇಲಿಯಾ - ಇಂದು ಸೆಮಿಫೈನಲ್ ಹಣಾಹಣಿ!