ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ರೀಟ್ ಮೂಲಕ ಮತ್ತೊಮ್ಮೆ ಜಾಗತಿಕ ಗೊಂದಲ ಮತ್ತು ಸಂಚಲನವನ್ನು ಮೂಡಿಸಿದ್ದಾರೆ. 30 ವರ್ಷದಿಂದ ಸ್ಥಗಿತಗೊಂಡಿದ್ದ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಯನ್ನು ತಕ್ಷಣದಿಂದಲೇ ಪುನರಾರಂಭಿಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ ರಷ್ಯಾ ಹಾಗೂ ಚೀನಾಗೆ ಎಚ್ಚರಿಕೆ ಮೂಲಕ ತಿರುಗೇಟು ನೀಡಿದ್ದಾರೆ.
"ಯುನೈಟೆಡ್ ಸ್ಟೇಟ್ಸ್ ಯಾವುದೇ ಇತರ ದೇಶಗಳಿಗಿಂತ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ. ನನ್ನ ಅಧಿಕಾರಾವಧಿಯಲ್ಲಿ ಅಸ್ತಿತ್ವದಲ್ಲಿರುವ ಶಸ್ತ್ರಾಸ್ತ್ರಗಳ ಸಂಪೂರ್ಣ ನವೀಕರಣ ಮಾಡಲಾಗುವುದು. ರಷ್ಯಾ ಎರಡನೇ ಸ್ಥಾನದಲ್ಲಿದೆ, ಮತ್ತು ಚೀನಾ ಮೂರನೇ ಸ್ಥಾನದಲ್ಲಿದೆ, ಮುಂದಿನ 5 ವರ್ಷಗಳಲ್ಲಿ ಸಹ ಅಷ್ಟೇ ಇರುತ್ತದೆ. ಇತರ ದೇಶಗಳ ಪರೀಕ್ಷಾ ಕಾರ್ಯಕ್ರಮಗಳಿಂದಾಗಿ, ನಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಸಮಾನ ಆಧಾರದ ಮೇಲೆ ಪರೀಕ್ಷಿಸಲು ಪ್ರಾರಂಭಿಸಲು ನಾನು ಯುದ್ಧ ಇಲಾಖೆಗೆ ಸೂಚಿಸಿದ್ದೇನೆ. ಆ ಪ್ರಕ್ರಿಯೆಯು ತಕ್ಷಣವೇ ಪ್ರಾರಂಭವಾಗುತ್ತದೆ. ಈ ವಿಷಯವನ್ನು ನಿಮ್ಮ ಗಮನಕ್ಕೆ ತರಲು ಧನ್ಯವಾದಗಳು!" ಎಂದಿದ್ದಾರೆ. Alvami Women Anarkali Kurta and Pant Set With Dupatta
ಇದರಿಂದ ದೇಶದ ಪರಮಾಣು ಪ್ರತಿಸ್ಪರ್ಧಿಗಳೊಂದಿಗಿನ ಸಂಬಂಧ ಹದಗೆಡುವ ಭೀತಿ ಉಂಟಾಗಿದ್ದು, ಇತಿಹಾಸದಲ್ಲಿ ಅಪರೂಪ ಎನ್ನುವಂತಹ ನಿರ್ಧಾರ ತೆಗೆದುಕೊಂಡಿದ್ದಾರೆ. 1992 ರಲ್ಲಿ ಸ್ಥಗಿತಗೊಳಿಸಲಾಗಿದ್ದ ಪರಮಾಣು ಶಾಸ್ತ್ರಾಸ್ತ್ರ ಪರೀಕ್ಷೆಯನ್ನು ಮತ್ತೆ ಜಾರಿಗೆ ಬರುವಂತೆ ಅವರು ಸೂಚಿಸಿದ್ದಾರೆ. ಈ ಮೂಲಕ, ಬಲಾಢ್ಯ ದೇಶಗಳಾದ ರಷ್ಯಾ ಮತ್ತು ಚೀನಾಗೆ ಸೆಡ್ಡು ಹೊಡೆಯುವ ಮಹತ್ವದ ನಿರ್ಧಾರ ಘೋಷಿಸಿದ್ದಾರೆ. ನ್ಯೂಕ್ಲಿಯರ್ ವೆಪನ್ಸ್ ನಿಂದ ಜಾಗತಿಕ ಅಶಾಂತಿ ಹಾಗೂ ಪ್ರಲೋಭನೆಗೆ ಸಾಧ್ಯತೆ ಹೆಚ್ಚಾಗಿರುವ ಮಧ್ಯೆ, ಅವರ ಈ ನಿರ್ಧಾರ ಸ್ವತಃ ರಿಪಬ್ಲಿಕನ್ ಪಾರ್ಟಿಯ ಸದಸ್ಯರಿಗೂ ಶಾಕ್ ನೀಡುವಂತಿದೆ.
30 ವರ್ಷಗಳ ನಂತರ ಕೈಗೊಂಡಿರುವ ಈ ನಿರ್ಧಾರದಿಂದ, ಜಾಗತಿಕ ಮಟ್ಟದಲ್ಲಿ ಇದರ ನಿಯಂತ್ರಣಕ್ಕೆ ನಡೆಸುತ್ತಿರುವ ಪ್ರಯತ್ನಕ್ಕೆ ಅಡ್ಡಿಯಾಗಬಹುದೆಂದು ಹೇಳಲಾಗುತ್ತಿದೆ. ಪರಮಾಣು ಶಸ್ತ್ರಾಸ್ತ್ರಗಳ ಹೊಂದಿರುವ ರಾಷ್ಟ್ರಗಳ ನಡುವಿನ ಸಂಬಂಧವನ್ನು ಇದು ಹದಗೆಡಿಸುತ್ತದೆ. ದಕ್ಷಿಣ ಕೊರಿಯ ಪ್ರವಾಸದಲ್ಲಿರುವ ಡೊನಾಲ್ಡ್ ಟ್ರಂಪ್ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ನಡೆಸಿದ ಸಭೆಯ ಕೆಲವೇ ಗಂಟೆಗಳ ನಂತರದಲ್ಲಿ ಈ ಘೋಷಣೆ ಹೊರಬಿದ್ದಿದೆ. ಈ ಮಾಹಿತಿಯನ್ನು ಕುರಿತು ಯುದ್ಧ ಇಲಾಖೆ ಪೆಂಟಗನ್ ಇನ್ನು ಅಧಿಕೃತತೆಯನ್ನು ನೀಡಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಬಂಡಿಪುರ, ನಾಗರಹೊಳೆ ಸಫಾರಿ: ಪ್ರಾಣಿಗಳ ಉಪಟಳ ಹೆಚ್ಚಳ; ಸಫಾರಿ ನಿಯಂತ್ರಣಕ್ಕೆ ಆದೇಶ!