ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಇತ್ತೀಚಿಗೆ ಮಾಡಿದ ಪೋಸ್ಟ್ ವಿವಾದಕ್ಕೊಳಗಾಗಿದೆ. ಕೇರಳದ ವಯನಾಡು ಜಿಲ್ಲೆಯನ್ನು ಪ್ರವಾಸಿ ತಾಣವೆಂದು ಸೂಚಿಸುವ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಕ್ಕಾಗಿ ರಾಜಕೀಯ ವಿವಾದ ಸೃಷ್ಟಿಯಾಗಿದೆ. ಈ ವಿಚಾರವು, ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ವಿಪಕ್ಷ ನಾಯಕ ಆರ್. ಅಶೋಕ್ ಅವರು ತೀವ್ರ ಖಂಡಿಸಿದ್ದಾರೆ.
ಅಕ್ಟೋಬರ್ 28 ರಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‌ಟಿಡಿಸಿ) ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ನಲ್ಲಿ ಮಂಜಿನ ಹೊದಿಕೆಯ ಸುಂದರ ವಯನಾಡು ಎಂದು ಉಲ್ಲೇಖಿಸಿದಕ್ಕೆ ಸಂಬಂಧಿಸಿದಂತೆ, ಈ ಪ್ರಚಾರವು ಕೇರಳದ ಪ್ರವಾಸೋದ್ಯಮವನ್ನು ಉತ್ತೇಜಿಸುವಂತಿದೆ. ಈ ಮೂಲಕ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರತಿನಿಧಿಸುತ್ತಿರುವ ಈ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದ್ಯತೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. Alvami Women's Anarkali Kurta and Pant Set with Dupatta
ಅವರು ವಯನಾಡಿನ ಜಿಲ್ಲಾಧಿಕಾರಿಯಂತೆ ಹಾಗೂ ದೇಣಿಗೆ ಸಂಗ್ರಹಕಾರರಂತೆ ವರ್ತಿಸುತ್ತಿರುವುದು ಕರ್ನಾಟಕ ಎಷ್ಟು ಕಾಲದವರೆಗೆ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿ, ಆರ್ ಅಶೋಕ್ ತಮ್ಮ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕರ್ನಾಟಕಕ್ಕಿಂತಲೂ ನಿಮಗೆ ಕೇರಳದ ವಯನಾಡು ಸೇವಾಕೇಂದ್ರವಾಗಿದೆಯೇ? ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿಯಿಂದ ರೈತರು ಕಂಗೆಟ್ಟಿದ್ದು, ಇನ್ನೂ ಪರಿಹಾರ ನೀಡಿಲ್ಲ. ಕರ್ನಾಟಕಕ್ಕೆ ಆದ್ಯತೆ ನೀಡುವ ಬದಲು ನೀವು ಕೇರಳದ ವಯನಾಡಿಗೆ ಆದ್ಯತೆ ನೀಡಿದ್ದೀರಿ ಎಂದು ಅವರು ಟೀಕಿಸಿದ್ದಾರೆ. ಇದನ್ನೂ ಓದಿ: ಟ್ರಂಪ್ ನಿರ್ಧಾರದಿಂದ ಜಾಗತಿಕ ಶಾಕ್: 30 ವರ್ಷಗಳ ನಂತರ ಪರಮಾಣು ಪರೀಕ್ಷೆ ಪುನರಾರಂಭ ಘೋಷಣೆ!