Skip to main content
ವಿಡಿಯೋ
1/3
politics

ಧರ್ಮಸ್ಥಳ ಪ್ರಕರಣಕ್ಕೆ ಬಿಜೆಪಿಯ ಆಂತರಿಕ ಕಲಹವೇ ಕಾರಣ - ಡಿಸಿಎಂ ಡಿ.ಕೆ ಶಿವಕುಮಾರ್‌ ಹೇಳಿಕೆ!

By Shravanthi R
 ಧರ್ಮಸ್ಥಳ ಪ್ರಕರಣಕ್ಕೆ ಬಿಜೆಪಿಯ ಆಂತರಿಕ ಕಲಹವೇ ಕಾರಣ - ಡಿಸಿಎಂ ಡಿ.ಕೆ ಶಿವಕುಮಾರ್‌ ಹೇಳಿಕೆ!

ಬೆಂಗಳೂರಿನ ವಿಧಾನಸೌಧದ ಬಳಿ ಮಾಧ್ಯಮದವರಿಗೆ ಉತ್ತರಿಸುತ್ತಾ ಮಾತನಾಡಿದ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್‌ ಅವರು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿಯನ್ನು ದೂರಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ಗುರುವಾರ, ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್‌ ಅವರು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಹೇಳಿಕೆಯೊಂದನ್ನು ನೀಡಿದ್ದಾರೆ. ಧರ್ಮಸ್ಥಳ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಕೆ ಬಗ್ಗೆ ಉತ್ತರಿಸಿದ ಅವರು, “ಈ ವಿಚಾರವಾಗಿ ವ್ಯಕ್ತಿ, ಕುಟುಂಬ ಹಾಗೂ ಸಂಸ್ಥೆಗೆ ಹಾನಿಯುಂಟಾಗಿದೆ. ಧರ್ಮಸ್ಥಳ ಪ್ರಕರಣಕ್ಕೆ ಬಿಜೆಪಿ ನಾಯಕರ ಆಂತರಿಕ ಕಲಹವೇ ಕಾರಣ ಎಂಬ ಹೇಳಿಕೆಗೆ ನಾನು ಈಗಲೂ ಬದ್ದನಾಗಿದ್ದೇನೆ.” ಎಂದರು.

ಎಸ್‌ಐಟಿ ವರದಿಯಲ್ಲಿ ಏನಿದೆ ಎಂಬುದು ತಿಳಿದಿಲ್ಲ ಎಂದ ಅವರು, ಶೀಘ್ರದಲ್ಲೇ ವರದಿ ಸಲ್ಲಿಕೆಯಾಗಬೇಕೆನ್ನುವ ಗೃಹಸಚಿವರ ಹೇಳಿಕೆಯನ್ನು ಗಮನಿಸಿದ್ದೇನೆ. ನ್ಯಾಯ, ಧರ್ಮ ಉಳಿಯಬೇಕೆಂದೇ ನಮ್ಮ ಅಭಿಲಾಷೆ. ಮಾತು ಬಿಡದ ಮಂಜುನಾಥ, ಕಾಸು ಬಿಡದ ತಿಮ್ಮಪ್ಪ, ತಿರುಪತಿಯಲ್ಲಿ ಕಾಸಿನ ಹರಕೆ ಹಾಗೂ ಧರ್ಮಸ್ಥಳದಲ್ಲಿ ಮಾತಿನ ಹರಕೆ ಕಟ್ಟಿಕೊಂಡರೆ ಬಿಡುವಂತಿಲ್ಲ ಎಂದಿದ್ದಾರೆ. The Money Guide: 7+ DIY Financial Tools, 14 Chapters & 4+ Checklists to Master Taxes, Investments & Lifestyle | Personal Finance Strategies by Anushka Rathod | Zebra Learn Books Hardcover – 20 May 2024

ಸಚಿವ ಸಂಪುಟ ಪುನರ್‌ ರಚನೆ ಬಗ್ಗೆ, ಹೈಕಮಾಂಡ್‌ಗೆ ಸಚಿವರ ಮೂರು ತಿಂಗಳ ವರದಿ ಸಲ್ಲಿಕೆಯಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, “ಈ ಬಗ್ಗೆ ನನಗೆ ಮಾಹಿತಿ ತಿಳಿದುಬಂದಿಲ್ಲ. ನಿಯಮಿತವಾಗಿ ಹೈಕಮಾಂಡ್‌ಗೆ ವರದಿ ಹೋಗುತ್ತಿರುತ್ತದೆ. ನನ್ನ ಹಾಗೂ ಶಾಸಕರ ಬಗ್ಗೆಯೂ ಸಮೀಕ್ಷೆ ನಡೆಯುತ್ತದೆ. ಚಟುವಟಿಕೆಗಳು ಏನಿದೆ ಎಂದು ಪ್ರತಿ ತಿಂಗಳು ವರದಿ ಕಳುಹಿಸುತ್ತಿರುತ್ತೇವೆ” ಎಂದರು. ಇದನ್ನೂ ಓದಿ: 2020ರ ದೆಹಲಿ ಸಿಎಎ ದಂಗೆ ಪೂರ್ವಯೋಜಿತ ಷಡ್ಯಂತ್ರ ಎಂದು ಬಹಿರಂಗ! ಪೊಲೀಸರಿಗೆ ಸಿಕ್ಕ ಸಾಕ್ಷ್ಯಗಳೇನು?