Skip to main content
ವಿಡಿಯೋ
1/3
general

Violation of Service Rules: ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾದ ನಾಲ್ವರು ಶಿಕ್ಷಕರಿಗೆ ಷೋಕಾಸ್‌ ನೋಟಿಸ್‌!

By Shravanthi R
Violation of Service Rules: ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾದ ನಾಲ್ವರು ಶಿಕ್ಷಕರಿಗೆ ಷೋಕಾಸ್‌ ನೋಟಿಸ್‌!

ಕರ್ನಾಟಕ ನಾಗರೀಕ ಸೇವೆಗಳ ನಿಯಮ ಉಲ್ಲಂಘನೆ ಭಾಗವಾಗಿ, ಹಾಗೂ ದಲಿತ ಸೇನೆ ಮುಖಂಡರು ನೀಡಿರುವ ದೂರಿನನ್ವಯ ಬೀದರ್‌ ಜಿಲ್ಲೆಯ ನಾಲ್ವರು ಸರ್ಕಾರಿ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಷೋಕಾಸ್‌ ನೋಟಿಸ್‌ ನೀಡಲಾಗಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ಬಹುವಾಗಿ ಸದ್ದು ಮಾಡಿರುವ ಸುದ್ದಿ. ರಾಜಕೀಯ ಪಾಳಯದಲ್ಲಿಯೂ ಸಚಿವರ ನಡುವೆ ಭುಗಿಲೆದ್ದ ಈ ಬೆಳವಣಿಗೆಗೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾಗಿರುವ ಹಿನ್ನಲೆಯಲ್ಲಿ ನಾಲ್ವರು ಸರ್ಕಾರಿ ಶಿಕ್ಷಕರಿಗೆ ಸೂಕ್ತ ಕಾರಣ ಸೂಚಿಸುವ (ಷೋಕಾಸ್‌) ನೋಟಿಸ್‌ ನೀಡಿದೆ. 

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸರ್ಕಾರಿ ಶಿಕ್ಷಕರಾದ ಮಹಾದೇವ್ ಚಿಟ್ಗೆರೆ, ಶಾಲಿವಾನ್, ಪ್ರಕಾಶ್ ಬರ್ದಾಪುರೆ, ಸತೀಶ್ ಎಂಬುವವರು ಅ.7 ಮತ್ತು ಅ.13 ರಂದು ಔರಾದ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಪಥಸಂಚಲನದಲ್ಲಿ ಭಾಗಿಯಾಗಿದ್ದರು. ಈ ಹಿನ್ನೆಲೆ ದಲಿತ ಸೇನೆ ಮುಖಂಡರು ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಅ.27 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಇದರ ಬೆನ್ನಲ್ಲೇ, ಶಿಕ್ಷಣಾಧಿಕಾರಿಗಳಿಂದ ನಾಲ್ವರು ಶಿಕ್ಷಕರಿಗೆ ನೋಟಿಸ್‌ ನೀಡಲಾಗಿದೆ ಎಂದು ತಿಳಿದುಬಂದಿದೆ.

ಸರ್ಕಾರಿ ನೌಕರರು ರಾಜಕೀಯ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗುವಂತಿಲ್ಲ ಎನ್ನಲಾಗಿದೆ. ಸರ್ಕಾರದ ಸೇವಾ ನಿಬಂಧನೆಗೆ ವಿರುದ್ದವಾಗಿ, ನಾಲ್ವರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಪಥಸಂಚಲನದಲ್ಲಿ ಭಾಗಿಯಾಗಿರುವ ವಿಡಿಯೋ ಹಾಗೂ ಫೋಟೋ ವೈರಲ್‌ ಆಗಿದೆ. ಈ ಬಗ್ಗೆ ಕಚೇರಿಗೆ ಖುದ್ದಾಗಿ ಬಂದು, ಹೇಳಿಕೆ ನೀಡದಿದ್ದ ಪಕ್ಷದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸೂಚಿಸಿ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. 51 Trading Strategies: Backtested Swing, Intraday, Positional, Scalping & Option Trading Strategies | Advanced Strategies for F&O and Cash Market ... your Trades with 51 Time tested Strategies Hardcover – 1 January 2024

ಈ ಬಗ್ಗೆ ತನಿಖೆ ಹಾಗೂ ಪರಿಶೀಲನೆ ನಡೆಸುತ್ತಿರುವ ಮಧ್ಯೆ, ಕರ್ನಾಟಕ ನಾಗರಿಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 ರ ಅಡಿಯಲ್ಲಿ ಏಕಪಕ್ಷೀಯ ಶಿಸ್ತು ಕ್ರಮಕ್ಕೆ ಕಾರಣವಾಗಬಹುದು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಇದಲ್ಲದೇ, ಸರ್ಕಾರಿ ನೌಕರರು ತಮ್ಮ ಹುದ್ದೆಗೆ ಸೂಕ್ತವಾದ ನಡವಳಿಕೆಯನ್ನು ಕಾಪಾಡಿಕೊಳ್ಳುವುದನ್ನು ಕಡ್ಡಾಯಗೊಳಿಸುವ ಸುಧಾರಿತ ಕರ್ನಾಟಕ ನಾಗರಿಕ ಸೇವೆಗಳ (ನಡವಳಿಕೆ) ನಿಯಮಗಳು, 2021 ರ ನಿಯಮ 3 ಅನ್ನು ಉಲ್ಲಂಘಿಸಿದ್ದಾರೆ ಅವರ ಕ್ರಮಗಳು ಸಾರ್ವಜನಿಕ ಸೇವಕರಿಂದ ನಿರೀಕ್ಷಿಸುವ ಮಾನದಂಡಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣಕ್ಕೆ ಬಿಜೆಪಿಯ ಆಂತರಿಕ ಕಲಹವೇ ಕಾರಣ - ಡಿಸಿಎಂ ಡಿ.ಕೆ ಶಿವಕುಮಾರ್‌ ಹೇಳಿಕೆ!