‘ಬಿಗ್ ಬಾಸ್' ಮನೆಯಲ್ಲಿ ಪ್ರೀತಿ-ಪ್ರಣಯ ಸಾಮಾನ್ಯ ಸಂಗತಿ. ಆದರೂ, ಇಲ್ಲಿ ಶುರುವಾದ ಪ್ರೇಮ ಸಂಬಂಧಗಳು ಮದುವೆಯ ಹಂತ ತಲುಪಿದ ಉದಾಹರಣೆಗಳು ಕಡಿಮೆ. ಇಂತಹ ಸಂಬಂಧಗಳನ್ನು ಹೆಚ್ಚಾಗಿ ಪ್ರೇಕ್ಷಕರ ಗಮನ ಸೆಳೆಯಲು ಬಳಸಿಕೊಳ್ಳಲಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ರಾಶಿಕಾ ಶೆಟ್ಟಿ ಮತ್ತು ಸೂರಜ್ ಅವರ ಆಪ್ತತೆ ಕೂಡ ಇದೇ ಸಾಲಿಗೆ ಸೇರಿದ್ದು ಎಂಬ ಚರ್ಚೆಗಳು ನಡೆಯುತ್ತಿವೆ.
ಇದೀಗ ಸೂರಜ್, ರಾಶಿಕಾಗೆ ಪ್ರಪೋಸ್ ಮಾಡಿದ್ದಾರೆ. ರಾಶಿಕಾ ಅವರು ‘ಬಿಗ್ ಬಾಸ್' ಮನೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗಮನ ಸೆಳೆಯಲು ವಿಫಲರಾಗಿದ್ದರು. ಹೀಗಾಗಿ, ಅವರು ಲವ್ ಟ್ರ್ಯಾಕ್ ಅನ್ನು ಆಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ. ವೈಲ್ಡ್ ಕಾರ್ಡ್ ಮೂಲಕ ಮನೆಗೆ ಪ್ರವೇಶಿಸಿದ ಸೂರಜ್ ಸಿಂಗ್ ಜೊತೆ ರಾಶಿಕಾ ಆಪ್ತತೆಯನ್ನು ಬೆಳೆಸಿಕೊಂಡರು.Titan Maritime Analog Green Dial Men's Watch NM1830KL02/NN1830KL02/NP1830KL02
ಸೂರಜ್ ಅವರನ್ನು ಕಂಡ ತಕ್ಷಣವೇ ರಾಶಿಕಾ ಅವರಿಗೆ ಇಷ್ಟವಾಗಿದ್ದರು. ದಿನಕಳೆದಂತೆ ರಾಶಿಕಾ ಮತ್ತು ಸೂರಜ್ ನಡುವಿನ ಆಪ್ತತೆ ಮತ್ತಷ್ಟು ಹೆಚ್ಚಾಯಿತು. ಮನೆಯಲ್ಲಿ ಜೋರಾಗಿ ಜಗಳ ನಡೆಯುತ್ತಿದ್ದಾಗಲೂ, ರಾಶಿಕಾ ಮತ್ತು ಸೂರಜ್ ತಮ್ಮದೇ ಆದ ಪ್ರಪಂಚದಲ್ಲಿ ಮುಳುಗಿ ಹೋಗಿದ್ದರು. ಈ ಸಂದರ್ಭದಲ್ಲೇ ಸೂರಜ್, ರಾಶಿಕಾಗೆ ನೇರವಾಗಿ ‘ಐ ಲವ್ ಯೂ' ಎಂದು ಪ್ರಪೋಸ್ ಮಾಡಿದರು.
ಸೂರಜ್ ಅವರ ಪ್ರಪೋಸಲ್ ಕೇಳಿ ರಾಶಿಕಾ ದಿಗ್ಭ್ರಮೆಗೊಂಡರು. ತನಗೆ ಅಂತಹ ಆಸಕ್ತಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಸೂರಜ್ ಪ್ರಪೋಸ್ ಮಾಡಿದ ತಕ್ಷಣ ರಾಶಿಕಾ ಒಪ್ಪಿಕೊಳ್ಳುತ್ತಾರೆ ಎಂಬುದು ಹಲವರ ನಿರೀಕ್ಷೆಯಾಗಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ಇದರೊಂದಿಗೆ ಸೂರಜ್ ಜೊತೆಗಿನ ಆಪ್ತತೆ ಕೇವಲ ಒಂದು ಆಟದ ತಂತ್ರ ಎಂಬುದನ್ನು ರಾಶಿಕಾ ಸ್ಪಷ್ಟಪಡಿಸಿದಂತಾಗಿದೆ.ನನ್ನ ಮತ್ತೆ ಬಿಗ್‌ಬಾಸ್ ನಡುವೆ ಯಾರೂ ಬರಬೇಡಿ...ಮನೆ ಮಂದಿಗೆ ಖಡಕ್ ವಾರ್ನಿಂಗ್ ಕೊಟ್ಟ ರಕ್ಷಿತಾ!
ಕಳೆದ ವಾರಕ್ಕೆ ಹೋಲಿಸಿದರೆ, ಈ ವಾರ ರಾಶಿಕಾ ಆಟದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಇದು ಅವರ ಆಟಕ್ಕೆ ಸಹಕಾರಿಯಾಗುವ ಸಾಧ್ಯತೆ ಇದೆ. ಇನ್ನು ನಟ ಸೂರಜ್ ಅವರು ಆರಂಭದಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದರು. ಆದರೆ, ಇತ್ತೀಚೆಗೆ ಪ್ರೀತಿ-ಪ್ರೇಮದ ವಿಚಾರಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
ರಾಶಿಕಾ ಪ್ರಪೋಸಲ್ ಒಪ್ಪಿಕೊಳ್ಳದ ಕಾರಣ, ಸೂರಜ್ ತಮ್ಮ ಆಟದ ಮೇಲೆ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ. ಹೆಚ್ಚಿನ ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.