Skip to main content
ವಿಡಿಯೋ
1/3
general

ಕಸದ ಗಾಡಿ ಬಂದರೂ ಕಸ ನೀಡದ ಮಹಿಳೆಗೆ ಕ್ಲಾಸ್: ಬೊಮ್ಮನಹಳ್ಳಿಯಲ್ಲಿ ಜಿಬಿಎ ಸಿಬ್ಬಂದಿಯಿಂದ ಜಾಗೃತಿ

By Pavitra Ganapathi Baradavalli
ಕಸದ ಗಾಡಿ ಬಂದರೂ ಕಸ ನೀಡದ ಮಹಿಳೆಗೆ ಕ್ಲಾಸ್: ಬೊಮ್ಮನಹಳ್ಳಿಯಲ್ಲಿ ಜಿಬಿಎ ಸಿಬ್ಬಂದಿಯಿಂದ ಜಾಗೃತಿ

ಕಸ ಸಂಗ್ರಹಣಾ ವಾಹನ (ಕಸದ ಗಾಡಿ) ಮನೆ ಬಾಗಿಲಿಗೆ ಬಂದರೂ ಕಸ ಹಾಕಲು ನಿರಾಕರಿಸಿದ ಮಹಿಳೆಯೊಬ್ಬರಿಗೆ ಬೊಮ್ಮನಹಳ್ಳಿ ವಲಯದ ಘನತ್ಯಾಜ್ಯ ನಿರ್ವಹಣೆ (GBM - Solid Waste Management) ಸಿಬ್ಬಂದಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಬೆಂಗಳೂರು: ಕಸ ಸಂಗ್ರಹಣಾ ವಾಹನ (ಕಸದ ಗಾಡಿ) ಮನೆ ಬಾಗಿಲಿಗೆ ಬಂದರೂ ಕಸ ಹಾಕಲು ನಿರಾಕರಿಸಿದ ಮಹಿಳೆಯೊಬ್ಬರಿಗೆ ಬೊಮ್ಮನಹಳ್ಳಿ ವಲಯದ ಘನತ್ಯಾಜ್ಯ ನಿರ್ವಹಣೆ (GBM - Solid Waste Management) ಸಿಬ್ಬಂದಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.ಇದನ್ನೂ ಓದಿ: 😭 ಭಾವನಾತ್ಮಕ ವಿಜಯ: ಆಸ್ಟ್ರೇಲಿಯಾ ವಿರುದ್ಧ ಗೆದ್ದ ಬಳಿಕ ಕಣ್ಣೀರಿಟ್ಟ ಶತಕ ಸುಂದರಿ(127*) ಜೆಮಿಮಾ, ಹರ್ಮನ್‌ಪ್ರೀತ್!

ಪ್ರತಿದಿನ ಕಸದ ಗಾಡಿ ಮನೆ ಮುಂದೆ ಬಂದರೂ ಯಾಕೆ ಕಸ ಹಾಕುತ್ತಿಲ್ಲ ಎಂದು ಜಿಬಿಎ ಸಿಬ್ಬಂದಿ ಮಹಿಳೆಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಮಹಿಳೆ, ನಾನು ಕಸವನ್ನು ರಸ್ತೆಯಲ್ಲೇ ಬಿಸಾಕುತ್ತೇನೆ ಎಂದು ಅಸಡ್ಡೆಯಿಂದ ಹೇಳಿದ್ದಾರೆ. ಇದರಿಂದ ಕೆರಳಿದ ಸಿಬ್ಬಂದಿ ಆಕೆಗೆ ತೀವ್ರವಾಗಿ ಬುದ್ಧಿ ಹೇಳಿದರು.ಇದನ್ನೂ ಓದಿ: ಮಹಿಳೆಗೆ ಕಿರುಕುಳ ಆರೋಪ: ಪ್ರೊ. ಬಿ.ಸಿ. ಮೈಲಾರಪ್ಪ ಬಂಧನ..!!

ಇಂತಹ ನಿರ್ಲಕ್ಷ್ಯದ ವರ್ತನೆಯನ್ನು ತಡೆಯಲು, ಜಿಬಿಎ ಸಿಬ್ಬಂದಿ ವಿದ್ಯಾರ್ಥಿಗಳೊಂದಿಗೆ ಬೊಮ್ಮನಹಳ್ಳಿಯ ಪ್ರತಿ ರಸ್ತೆಗೆ ತೆರಳಿ ಸಾರ್ವಜನಿಕರಲ್ಲಿ ಕಸ ವಿಲೇವಾರಿ ಬಗ್ಗೆ ಅರಿವು ಮೂಡಿಸಿದರು. ವಿದ್ಯಾರ್ಥಿಗಳನ್ನು ಜೊತೆಯಲ್ಲಿ ಕರೆತಂದು, ಮನೆ ಕಸವನ್ನು ಕಡ್ಡಾಯವಾಗಿ ಕಸದ ಗಾಡಿಗೇ ಹಾಕುವಂತೆ ಸ್ಥಳೀಯರಿಗೆ ಸೂಚನೆ ನೀಡಲಾಯಿತು.SGF11 Women's Kanjivaram Pure Soft Silk Saree With Unstitched Blouse Piece