ಬೆಂಗಳೂರು:ಮಹಿಳೆಯೊಬ್ಬರಿಗೆ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿ ಮತ್ತು ಕಿರುಕುಳ ನೀಡಿದ ಗಂಭೀರ ಆರೋಪದ ಮೇಲೆ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಸಚಿವರಾಗಿದ್ದ ಪ್ರೊ. ಬಿ.ಸಿ. ಮೈಲಾರಪ್ಪ ಅವರನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ PFI ಸಂಘಟನೆ ಭಾಗಿ: NIA ಚಾರ್ಜ್‌ಶೀಟ್ ಸಲ್ಲಿಕೆ!
ನಗರದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರಲ್ಲಿ ಕುಲಸಚಿವರಾಗಿ ಸೇವೆ ಸಲ್ಲಿಸಿದ್ದ ಮೈಲಾರಪ್ಪ ವಿರುದ್ಧ ಕಿರುಕುಳದ ದೂರು ದಾಖಲಾಗಿತ್ತು. ಮಹಿಳೆಯೊಬ್ಬರಿಗೆ ಲೈಂಗಿಕ ಸಹಕಾರ ನೀಡುವಂತೆ ನಿರಂತರವಾಗಿ ಕರೆ ಮಾಡಿ ಒತ್ತಾಯಿಸಿದ್ದು, ಅಲ್ಲದೆ ಅವರ ಮನೆ ಬಳಿ ತೆರಳಿ ಬಾಗಿಲು ತೆರೆಯುವಂತೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಹೆತ್ತ ತಾಯಿಯನ್ನೇ ಮುಗಿಸಿದ ಅಪ್ರಾಪ್ತೆ, ಬೆಂಗಳೂರಲ್ಲಿ ನಡೀತು ಭೀಕರ ಮರ್ಡರ್..!!
ಪ್ರೊ. ಮೈಲಾರಪ್ಪ ಅವರ ಈ ವರ್ತನೆಯಿಂದ ನೊಂದ ಮಹಿಳೆಯು ಬಸವೇಶ್ವರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಮಾಜಿ ಕುಲಸಚಿವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.SGF11 Women's Kanjivaram Pure Soft Silk Saree With Unstitched Blouse Piece