Skip to main content
ವಿಡಿಯೋ
1/3
cinema

ದರ್ಶನ್‌ ಭವಿಷ್ಯಕ್ಕೆ ನಿರ್ಣಾಯಕ ದಿನ..ಇಂದು ಚಾರ್ಜ್‌ ಫ್ರೇಮ್ ವಿಚಾರಣೆ..!

By Ram Chethan
ದರ್ಶನ್‌ ಭವಿಷ್ಯಕ್ಕೆ ನಿರ್ಣಾಯಕ ದಿನ..ಇಂದು ಚಾರ್ಜ್‌ ಫ್ರೇಮ್ ವಿಚಾರಣೆ..!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳಿಗೆ ಇಂದು ನ್ಯಾಯಾಲಯದಲ್ಲಿ ದೋಷಾರೋಪ ನಿಗದಿ ನಡೆಯಲಿದೆ. ಐಪಿಸಿ 302, 364, 202 ಅಡಿ ದಾಖಲಾಗಿರುವ ಪ್ರಕರಣದಲ್ಲಿ ತಾಂತ್ರಿಕ ಸಾಕ್ಷ್ಯಗಳು ಮುಖ್ಯವಾಗಲಿದ್ದು, ಇದು ದರ್ಶನ್ ಅವರ ವೃತ್ತಿ ಮತ್ತು ಭವಿಷ್ಯದತ್ತ ಮಹತ್ತ್ವದ ತಿರುವು ಕೊಡಬಹುದು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ 17 ಮಂದಿ ಆರೋಪಿಗಳಿಗೆ ಇಂದು ನಿರ್ಣಾಯಕ ದಿನವಾಗಿದೆ. ಈ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ದರ್ಶನ್‌ಗೆ, ಇಂದು ಕೋರ್ಟ್‌ನಲ್ಲಿ ದೋಷಾರೋಪ ನಿಗದಿಯಾಗಲಿದ್ದು, ಇದು ಅವರ ಭವಿಷ್ಯಕ್ಕೆ ದೊಡ್ಡ ತಿರುವು ನೀಡುವ ಸಾಧ್ಯತೆ ಇದೆ.

ಕೊಲೆ ಪ್ರಕರಣದ ಕುರಿತು ಇಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಎಲ್ಲ 17 ಆರೋಪಿಗಳ ಮೇಲೆ ದಾಖಲಾಗಿರುವ ಸೆಕ್ಷನ್‌ಗಳ ಅನ್ವಯ ದೋಷಾರೋಪಗಳನ್ನು ನಿರ್ಧರಿಸಲಾಗುತ್ತದೆ. ಈ ಪ್ರಕರಣದಲ್ಲಿ ತಾಂತ್ರಿಕ ಸಾಕ್ಷ್ಯಗಳು ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಹೇಳಲಾಗುತ್ತಿದೆ.Titan Maritime Analog Green Dial Men's Watch NM1830KL02/NN1830KL02/NP1830KL02

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಎಲ್ಲ 17 ಮಂದಿ ಇಂದು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಅವರನ್ನು ನ್ಯಾಯಾಲಯಕ್ಕೆ ಕರೆತರಲು ಸೂಚಿಸಲಾಗಿದೆ.

ಈ ಪ್ರಕರಣವು ದರ್ಶನ್ ಅವರ ವೃತ್ತಿಜೀವನಕ್ಕೆ ದೊಡ್ಡ ಕಪ್ಪು ಚುಕ್ಕೆಯಾಗಿದೆ. ಸದ್ಯದ ಮಾಹಿತಿ ಪ್ರಕಾರ, ಕೊಲೆ ಕೇಸ್‌ಗೆ ಸಂಬಂಧಿಸಿದ ತಾಂತ್ರಿಕ ಸಾಕ್ಷ್ಯಗಳೇ ದರ್ಶನ್ ಅವರ ಭವಿಷ್ಯವನ್ನು ನಿರ್ಧರಿಸಲಿವೆ ಎಂದು ಹೇಳಲಾಗುತ್ತಿದೆ. ಪೊಲೀಸರು ಸಂಗ್ರಹಿಸಿರುವ ತಾಂತ್ರಿಕ ಪುರಾವೆಗಳು ಅವರಿಗೆ ಮುಳುವಾಗುವ ಸಾಧ್ಯತೆ ಇದೆ.ಬಿಗ್ ಬಾಸ್‌ ಲವ್‌ ಟ್ವಿಸ್ಟ್‌..ಸೂರಜ್‌ ‘ಐ ಲವ್ ಯೂ’ಗೆ ರಾಶಿಕಾ ನೋ!

ಸಿಸಿಹೆಚ್ 64ನೇ ಕೋರ್ಟ್‌ನಲ್ಲಿ ಇಂದು ಆರೋಪ ನಿಗದಿ (ಚಾರ್ಜಸ್ ಫ್ರೇಮ್) ಪ್ರಕ್ರಿಯೆ ನಡೆಯಲಿದೆ. ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳು ಕಡ್ಡಾಯವಾಗಿ ಹಾಜರಿರಬೇಕು. ಆರೋಪಿಗಳ ಹಾಜರಾತಿ ಪಡೆದ ನಂತರವೇ ಈ ಪ್ರಕ್ರಿಯೆ ಆರಂಭವಾಗಲಿದೆ.

ಪ್ರಕ್ರಿಯೆ ವೇಳೆ, ಆರೋಪಿಗಳ ಹೆಸರುಗಳನ್ನು ಕೂಗಿದಾಗ ಅವರು ಕಟಕಟೆಗೆ ಬರಬೇಕಾಗುತ್ತದೆ. ನಿಮ್ಮ ಮೇಲೆ ಐಪಿಸಿ ಸೆಕ್ಷನ್ 302 (ಕೊಲೆ), 364 (ಅಪಹರಣ), ಮತ್ತು 202 (ಸಾಕ್ಷ್ಯ ನಾಶ) ಅಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನು ನೀವು ಒಪ್ಪಿಕೊಳ್ಳುತ್ತೀರಾ ಅಥವಾ ಅಲ್ಲಗಳೆಯುತ್ತೀರಾ ಎಂದು ನ್ಯಾಯಾಧೀಶರು ಪ್ರಶ್ನಿಸಲಿದ್ದಾರೆ.

ಈ ಪ್ರಶ್ನೆಗಳಿಗೆ ಆರೋಪಿಗಳು ಪ್ರತಿಕ್ರಿಯೆ ನೀಡಬೇಕಿದ್ದು, ನ್ಯಾಯಾಧೀಶರು ಎಲ್ಲ 17 ಆರೋಪಿಗಳಿಗೂ ಅವರ ಮೇಲೆ ದಾಖಲಾಗಿರುವ ಸೆಕ್ಷನ್‌ಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ದೋಷಾರೋಪ ನಿಗದಿಯಾದ ಬಳಿಕ ನ್ಯಾಯಾಲಯವು ವಿಚಾರಣೆಗೆ ದಿನಾಂಕವನ್ನು ನಿಗದಿಪಡಿಸಲಿದೆ. ಇಂದು ಮಧ್ಯಾಹ್ನ ಮೂರು ಗಂಟೆಗೆ ಚಾರ್ಜಸ್ ಫ್ರೇಮ್ ವಿಚಾರಣೆ ನಡೆಯಲಿದೆ.