Skip to main content
ವಿಡಿಯೋ
1/3
cinema

ರೇಣುಕಾಸ್ವಾಮಿ ಕೊಲೆ ಪ್ರಕರಣ: ನವೆಂಬರ್ 3ರಂದು ದರ್ಶನ್ ಸೇರಿದಂತೆ ಎಲ್ಲರ ವಿರುದ್ಧ ದೋಷಾರೋಪ ನಿಗದಿ!

By Ram Chethan
ರೇಣುಕಾಸ್ವಾಮಿ ಕೊಲೆ ಪ್ರಕರಣ: ನವೆಂಬರ್ 3ರಂದು ದರ್ಶನ್ ಸೇರಿದಂತೆ ಎಲ್ಲರ ವಿರುದ್ಧ ದೋಷಾರೋಪ ನಿಗದಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿಗೆ ದಿನಾಂಕ ನಿಶ್ಚಯವಾಗಿದೆ. ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯವು ನವೆಂಬರ್ 3ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ದೋಷಾರೋಪ ನಿಗದಿಪಡಿಸಲು ತೀರ್ಮಾನಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ವಿರುದ್ಧ ನವೆಂಬರ್ 3 ರಂದು ದೋಷಾರೋಪ ನಿಗದಿಪಡಿಸಲು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯವು ನಿರ್ಧರಿಸಿದೆ.

ಇಂದು ಆರೋಪಿಗಳಾದ ಪವಿತ್ರಾ ಗೌಡ ಮತ್ತು ನಟ ದರ್ಶನ್ ವಿಡಿಯೋ ಕಾನ್ಫರೆನ್ಸ್ ಮೂಲಕ 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಲಯವು ವಿಚಾರಣೆ ನಡೆಸಿ, ಮುಂದಿನ ಕ್ರಮಕ್ಕಾಗಿ ದಿನಾಂಕ ನಿಗದಿಪಡಿಸಿತು.Titan Maritime Analog Green Dial Men's Watch NM1830KL02/NN1830KL02/NP1830KL02

ನವೆಂಬರ್ 3 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕವೇ ದೋಷಾರೋಪ ನಿಗದಿ ಮಾಡಲು ನ್ಯಾಯಾಲಯ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ನವೆಂಬರ್ 3ಕ್ಕೆ ಮುಂದೂಡಲಾಗಿದೆ.ಇದನ್ನು ಓದಿ:ದರ್ಶನ್‌ ಭವಿಷ್ಯಕ್ಕೆ ನಿರ್ಣಾಯಕ ದಿನ..ಇಂದು ಚಾರ್ಜ್‌ ಫ್ರೇಮ್ ವಿಚಾರಣೆ..!

ನವೆಂಬರ್ 3ರಂದು ನಡೆಯಲಿರುವ ವಿಚಾರಣೆಯ ವೇಳೆ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಉಳಿದ ಆರೋಪಿಗಳ ವಿರುದ್ಧ ಅಧಿಕೃತವಾಗಿ ದೋಷಾರೋಪ ನಿಗದಿ ಆಗಲಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿರುವ ಈ ವಿಚಾರಣೆ ಪ್ರಕರಣದ ಮುಂದಿನ ಹಂತದಲ್ಲಿ ನಿರ್ಣಾಯಕವಾಗುವ ಸಾಧ್ಯತೆ ಇದೆ. ಹೀಗಾಗಿ, ಎಲ್ಲರ ಗಮನವೂ ಈಗ ನವೆಂಬರ್ 3ರಂದು ನಡೆಯಲಿರುವ ಈ ಮಹತ್ವದ ವಿಚಾರಣೆಯತ್ತ ನೆಟ್ಟಿದೆ.