ಕನ್ನಡ ಭಾಷೆಯನ್ನು ನುಡಿವ ಎಲ್ಲರೂ ಒಂದುಗೂಡಿದ ಸಂಭ್ರಮದ ಪ್ರತೀಕ ಕನ್ನಡ ರಾಜ್ಯೋತ್ಸವ. ಇಂದು ಕನ್ನಡವನ್ನು ಪಸರಿಸುವ, ಕನ್ನಡದ ಭಾಷೆ ಮತ್ತದರ ಸುಶ್ರಾವ್ಯ ಭಾಷಾಲಹರಿಯನ್ನು ನೆನೆಯುವ ದಿನ. ಈ ಸಲುವಾಗಿ, ರಾಜ್ಯದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ಅಧಿಕೃತ ರಜಾದಿನಗಳ ವೇಳಾಪಟ್ಟಿ ಪ್ರಕಾರ, ನವೆಂಬರ್ 1 ರಂದು ರಾಜ್ಯದ ಎಲ್ಲಾ ಬ್ಯಾಂಕ್‌ಗಳಿಗೆ ಸಾರ್ವತ್ರಿಕ ರಜೆಯೆಂದು ಘೋಷಿಸಲಾಗಿದೆ.
1956 ರಲ್ಲಿ ಕರ್ನಾಟಕ ರಾಜ್ಯ ರಚನೆಗೊಂಡ ನೆನಪು ಹಾಗೂ ದಕ್ಷಿಣ ಭಾರತದಲ್ಲಿ ಕನ್ನಡ ಮಾತನಾಡುವ ರಾಜ್ಯಗಳನ್ನು ವಿಲೀನಗೊಳಿಸಿ, ರಾಜ್ಯ ಪುನರ್ವಿಗಂಡಣಾ ಕಾಯ್ದೆಯಡಿ ಕರ್ನಾಟಕ ಏಕೀಕರಣಗೊಂಡ ಸ್ಮರಣಾರ್ಥ ಈ ದಿನ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಕನ್ನಡಿಗರ ಏಕತೆ, ಈ ನಾಡಿನ ಪಾರಂಪರಿಕತೆ ಹಾಗೂ ವೈಭೋಗದ ಸಂಸ್ಕೃತಿಯ ಸ್ಮರಣಿಕೆಯಾಗಿದೆ. Price Action Trading : Technical Analysis Simplified! by Sunil Gurjar (Chartmojo) - Chart Patterns | Candlestick Patterns | Breakout Patterns & Lot More ! Paperback – 1 January 2021
ಮೈಸೂರು ರಾಜ್ಯವಾಗಿದ್ದ ಕರುನಾಡು ಕರ್ನಾಟಕವಾಗಿ ಸ್ಥಾಪಿತಗೊಂಡ ದಿನ ಕನ್ನಡ ರಾಜ್ಯೋತ್ಸವ. 1973 ರವರೆಗೂ, ಮೈಸೂರು ರಾಜ್ಯವೆಂದು ಕರೆಯಲಾಗುತ್ತಿದ್ದ ಕನ್ನಡ ನಾಡನ್ನು ಕರ್ನಾಟಕ ಎಂದು ಹೆಸರಿಸಿದ ದಿನವೂ ಇಂದೇ ಆಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಈ ದಿನವನ್ನು ಸಾರ್ವಜನಿಕ ರಜಾದಿನವನ್ನಾಗಿ ಘೋಷಿಸಿದೆ. ಇದರ ಸಂಭ್ರಮಾಚರಣೆಯೊಟ್ಟಿಗೆ, ರಾಜ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ವಲಯಗಳಲ್ಲಿ ನಾಡಿಗೆ ಸೇವೆ ಸಲ್ಲಿಸಿದ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗುತ್ತದೆ. ಇದನ್ನೂ ಓದಿ: Violation of Service Rules: ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾದ ನಾಲ್ವರು ಶಿಕ್ಷಕರಿಗೆ ಷೋಕಾಸ್ ನೋಟಿಸ್!