ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಸಂಬಂಧದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇವರಿಬ್ಬರು ಒಟ್ಟಿಗೆ ವಾಸವಾಗಿದ್ದರೂ, ಅವರು ವಿವಾಹವಾಗಿದ್ದರೇ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡಿತ್ತು. ಇದಕ್ಕೆ ಯಾವುದೇ ಸ್ಪಷ್ಟ ಸಾಕ್ಷ್ಯಗಳು ಲಭ್ಯವಿರಲಿಲ್ಲ. ಆದರೆ, ಇತ್ತೀಚೆಗೆ ವೈರಲ್ ಆಗಿರುವ ಕೆಲವು ಚಿತ್ರಗಳು ಹೊಸ ಸಂಚಲನಕ್ಕೆ ಕಾರಣವಾಗಿವೆ.Titan Maritime Analog Green Dial Men's Watch NM1830KL02/NN1830KL02/NP1830KL02
ಈ ಹೊಸ ಫೋಟೋಗಳಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ದಂಪತಿಗಳಂತೆ ಕಾಣಿಸಿಕೊಂಡಿದ್ದಾರೆ. 'ದರ್ಶನ್ ಪವಿತ್ರಾ ಮ್ಯಾರೇಜ್ ಫೋಟೋಸ್' ಎಂಬ ಶೀರ್ಷಿಕೆಯೊಂದಿಗೆ ಹರಿದಾಡುತ್ತಿರುವ ರೀಲ್ಸ್ ವಿಡಿಯೋ ಒಂದರಲ್ಲಿ, ಪವಿತ್ರಾ ಕುತ್ತಿಗೆಗೆ ಅರಿಶಿನ ದಾರ ಕಟ್ಟಿಕೊಂಡಿರುವುದು ಕಂಡುಬಂದಿದೆ.ರೇಣುಕಾಸ್ವಾಮಿ ಕೊಲೆ ಪ್ರಕರಣ: ನವೆಂಬರ್ 3ರಂದು ದರ್ಶನ್ ಸೇರಿದಂತೆ ಎಲ್ಲರ ವಿರುದ್ಧ ದೋಷಾರೋಪ ನಿಗದಿ!
ವಿವಾಹದ ಉಡುಪಿನಲ್ಲಿ ದರ್ಶನ್ ಮತ್ತು ಪವಿತ್ರಾ ಕಾಣಿಸಿಕೊಂಡಿರುವ ಈ ಚಿತ್ರಗಳು ಸುಮಾರು ಹತ್ತು ವರ್ಷಗಳ ಹಿಂದಿನವು ಎನ್ನಲಾಗಿದೆ. ಈ ಸಂದರ್ಭದಲ್ಲಿ ದರ್ಶನ್ ಅವರಿಗೆ ಅಪಘಾತವಾಗಿ ಕೈಗೆ ಗಾಯವಾಗಿತ್ತು. ಆ ಸಮಯದಲ್ಲಿ ಪವಿತ್ರಾ ಗೌಡ ದರ್ಶನ್‌ಗೆ ಊಟ ಮಾಡಿಸುತ್ತಿರುವ ದೃಶ್ಯಗಳು ಸಹ ವೈರಲ್ ಆಗಿವೆ.