Skip to main content
ವಿಡಿಯೋ
1/3
general

ಆಡಿಷನ್‌ ಹೆಸರಲ್ಲಿ ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ ವ್ಯಕ್ತಿಯ ಹ**ತ್ಯೆ

By Shravanthi R
ಆಡಿಷನ್‌ ಹೆಸರಲ್ಲಿ ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ ವ್ಯಕ್ತಿಯ ಹ**ತ್ಯೆ

ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ, ರೋಹಿತ್‌ ಆರ್ಯ ಎಂಬಾತನು, ಆಡಿಷನ್‌ ನಡೆಸುವುದಾಗಿ 17 ಮಕ್ಕಳು ಸೇರಿದಂತೆ 19 ಜನರನ್ನು ಒತ್ತೆಯಾಳಾಗಿರಿಸಿಕೊಂಡಿದ್ದನು. ಮಾಹಿತಿ ಪಡೆದ ಪೋಲಿಸರು ಕಾರ್ಯಾಚರಣೆ ನಡೆಸಿ, ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಮುಂಬೈನಲ್ಲಿ ರೋಹಿತ್‌ ಆರ್ಯ, 50 ವರ್ಷದ ವ್ಯಕ್ತಿಯು, ವೆಬ್‌ ಸೀರೀಸ್‌ ಆಡಿಷನ್‌ ನಡೆಸಿದ ನೆಪದಲ್ಲಿ,  17 ಮಕ್ಕಳು ಸೇರಿದಂತೆ 19 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾಗಿ ಸುದ್ದಿಯಾಗಿದೆ. ಆತನು ಮಾನಸಿಕ ಅಸ್ವಸ್ಥನು ಎಂದು ತಿಳಿಸಲಾಗಿದೆ. ಈ ಬಗ್ಗೆ, ಒಂದು ಗಂಟೆ ಪ್ರಹಸನ ವಿಡಿಯೋವನ್ನು ಬಿಡುಗಡೆ ಮಾಡಿದ್ದನು. “ನಾನು ಕೆಲವರಿಗೆ ಪ್ರಶ್ನೆಗಳನ್ನು ಕೇಳಬೇಕೆಂದಿದ್ದೇನೆ. ಉತ್ತರಗಳನ್ನು ಅಪೇಕ್ಷಿಸಿದ್ದೇನೆ. ನಾನು ಭಯೋತ್ಪಾದಕನಲ್ಲ, ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ.” ಈ ರೀತಿ ತಿಳಿಸಿದ್ದನು ಎನ್ನಲಾಗಿದೆ. 

ಗುರುವಾರ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಪೊವೈ ಪೋಲಿಸ್‌ ಠಾಣೆಗೆ ಬಂದ ಕರೆ ಆಧಾರವಾಗಿ, ವ್ಯಕ್ತಿಯಿದ್ದ ಮಹಾವೀರ್‌ ಕ್ಲಾಸಿಕ್‌ ಬಿಲ್ಡಿಂಗ್‌ನ ಆರ್‌ಎ ಸ್ಟುಡಿಯೋಗೆ ಧಾವಿಸಿದ್ದರು. ಪೋಲಿಸರು ಸಂಧಾನ ನಡೆಸಿದರೂ ವ್ಯಕ್ತಿಯು (ರೋಹಿತ್‌) ಮಕ್ಕಳನ್ನು ಬಿಡಲು ಒಪ್ಪಲಿಲ್ಲ. ಬಳಿಕ, ಮಕ್ಕಳನ್ನು ರಕ್ಷಿಸುವ ಸಲುವಾಗಿ ಬಾತ್‌ರೂಮ್‌ ಮೂಲಕ ಕಟ್ಟಡಕ್ಕೆ ಪ್ರವೇಶಿಸಿ ಆತನಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.  Trading Chart Breakout Pattern & Candlestick Pattern Pocket Study For Beginners Unknown Binding – 1 January 2022

ವೆಬ್‌ ಸಿರೀಸ್‌ಗಾಗಿ ಆಡಿಷನ್‌ಗೆ 100 ಮಂದಿಯನ್ನು ಕರೆಸಿಕೊಂಡಿದ್ದ ಈತನು, 83 ಮಕ್ಕಳನ್ನು ಮನೆಗೆ ಕಳುಹಿಸಿ, 17 ಮಕ್ಕಳು ಹಾಗೂ ಇಬ್ಬರು ವಯಸ್ಕರನ್ನು ತನ್ನ ಬಳಿಯಿರಿಸಿಕೊಂಡಿದ್ದನು ಎನ್ನಲಾಗಿದೆ. ಸಿನಿಮೀಯ ರೀತಿಯಲ್ಲಿ ಅಲ್ಲಿನ ಕ್ಷಿಕ್‌ ರೆಸ್ಪಾನ್ಸ್‌ ಟೀಮ್‌ ಹಾಗೂ ಇತರ ಪೋಲಿಸರು ಕಾರ್ಯಾಚರಣೆ ನಡೆಸಿ, ಎಲ್ಲಾ 8 ರಿಂದ 15 ವರ್ಷದೊಳಗಿನ ಮಕ್ಕಳನ್ನು ಅವರ ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಲಾಗಿದೆ. ಪೋಲಿಸರು ಆತನನ್ನು ಬಂಧಿಸುವ ವೇಳೆ ಗುಂಡೇಟು ತಗುಲಿತ್ತು. ಆನಂತರ, ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವನು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ 2025: ರಾಜ್ಯದಲ್ಲಿ ಬ್ಯಾಂಕ್‌ಗಳಿಗೆ ರಜೆಯಿರಲಿದೆಯೇ?