ಬೆಂಗಳೂರು:ಲಂಚಾವತಾರ ಪ್ರಕರಣದ ಕುರಿತು ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಪುತ್ರಿಯ ಸಾವಿನ ಸಂಕಟದಲ್ಲಿದ್ದ ತಂದೆಯಿಂದಲೇ ಲಂಚ ಪಡೆದ ಅಮಾನವೀಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ.ಇದನ್ನೂ ಓದಿ: ಆಕ್ರಮಣಗಳನ್ನು ಎದುರಿಸಿ ಮತ್ತೆ ತಲೆ ಎತ್ತಿದ ಕಾಶಿ ನಗರ..!
ತಕ್ಷಣದ ಕ್ರಮವಾಗಿ, ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಒಬ್ಬ ಪೊಲೀಸ್ ಕಾನ್‌ಸ್ಟೆಬಲ್ (PC) ಮತ್ತು ಒಬ್ಬ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (PSI) ಇಬ್ಬರನ್ನೂ ಅಮಾನತುಗೊಳಿಸಲಾಗಿದೆ. ಹಣ ತೆಗೆದುಕೊಂಡಿರುವ ಕುರಿತು ಸಾಬೀತಾಗುತ್ತಲೇ ಇಬ್ಬರನ್ನೂ ಸೇವೆಯಿಂದ ಸಸ್ಪೆಂಡ್ ಸಹ ಮಾಡಲಾಗಿದೆ.ಇದನ್ನೂ ಓದಿ: ಕಾಂಗ್ರೆಸ್ ಬಿಹಾರದ ಅಭಿವೃದ್ಧಿಯನ್ನು ಸ್ಥಗಿತಗೊಳಿಸಿದೆ: ಯೋಗಿ ಆದಿತ್ಯನಾಥ್..!
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಪರಮೇಶ್ವರ್, ಪೊಲೀಸ್ ಇಲಾಖೆಯಲ್ಲಿ ಇಂತಹ ನಡವಳಿಕೆ ಸಹಿಸುವುದಿಲ್ಲ. ಲಂಚ ಪಡೆದಿರುವುದು ದೃಢಪಟ್ಟ ಕಾರಣ ಇಬ್ಬರನ್ನೂ ಅಮಾನತು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಸಾರ್ವಜನಿಕ ಸೇವೆಯಲ್ಲಿನ ಭ್ರಷ್ಟಾಚಾರಕ್ಕೆ ಸರ್ಕಾರ ಸೊಪ್ಪು ಹಾಕುವುದಿಲ್ಲ ಎಂಬ ಖಡಕ್ ಸಂದೇಶವನ್ನು ಗೃಹ ಸಚಿವರು ರವಾನಿಸಿದ್ದಾರೆ.SGF11 Women's Kanjivaram Pure Soft Silk Saree With Unstitched Blouse Piece