Skip to main content
ವಿಡಿಯೋ
1/3
general

ಆಕ್ರಮಣಗಳನ್ನು ಎದುರಿಸಿ ಮತ್ತೆ ತಲೆ ಎತ್ತಿದ ಕಾಶಿ ನಗರ..!

By Sushmitha R
ಆಕ್ರಮಣಗಳನ್ನು ಎದುರಿಸಿ ಮತ್ತೆ ತಲೆ ಎತ್ತಿದ ಕಾಶಿ ನಗರ..!

ಮೊಘಲ್‌ನಾಯಕರ ಆಕ್ರಮಣವನ್ನು ಎದುರಿಸಿಯೂ, ಮತ್ತೆ ಮತ್ತೆ ಎದ್ದು ನಿಂತಿದೆ ಕಾಶಿ ನಗರ. ಯಾರೆಲ್ಲಾ ಕಾಶಿ ನಗರವನ್ನು ಮುತ್ತಿಗೆ ಹಾಕಿದರು.? ಯಾರೆಲ್ಲಾ ಅದನ್ನು ಪುನರ್‌ನಿರ್ಮಿಸಲು ಶ್ರಮ ವಹಿಸಿದರು.? ಇಲ್ಲಿದೆ ಸಂಪೂರ್ಣ ಮಾಹಿತಿ.

ಮೊಘಲರು ಭಾರತದ ಮಂದಿರಗಳ ನಾಶದ ಪಣವನ್ನು ತೊಟ್ಟು ಬಂದವರೇ ಮೊಘಲರು. ಅವರ ಕಾಲದಲ್ಲೇ ನಮ್ಮ ಅನೇಕ ಮಂದಿರಗಳು ನೆಲಕ್ಕೆ ಉರುಳಿದವು, ನಮ್ಮ ದೇವಸ್ಥಾನಗಳ ಸಂಪತ್ತನ್ನು ದೋಚಲಾಯಿತು, ಹಿಂದೂ ಧರ್ಮದ ಸಾಮಾನ್ಯ ಜನರ ಮೇಲೆ ದೌರ್ಜನ್ಯ ಎಸಗಲಾಯಿತು, ಹೆಣ್ಣು ಮಕ್ಕಳನ್ನು ಹೊತ್ತೊಯ್ಯಲಾಯಿತು. ಆದರೆ ಮತ್ತೆ ಜನರು ಒಂದಾದರು, ದೇವಸ್ಥಾನಗಳು ನಿರ್ಮಾಣಗೊಂಡವು. ನಮ್ಮ ಸಂಸ್ಕೃತಿಯನ್ನು ನಮ್ಮ ಸಾಹಿತಿಗಳು ಪುನರ್‌ನಿರ್ಮಿಸಿದರು.

ಅಕ್ಬರ ಮೊಘಲರ ಬಾದಶಾಹನಾಗಿದ್ದ ಕಾಲ, ರಾಜಾ ತೋದರಮಲ್ಲನ ಸಹಾಯದೊಂದಿಗೆ ಕ್ರಿ.ಶ. 1580 ರಲ್ಲಿ ಭವ್ಯವಾದ ಕಾಶಿ ಮಂದಿರವನ್ನು ನಿರ್ಮಿಸಲಾಯಿತು. ಆದರೆ 1669 ರಲ್ಲಿ ಮತಾಂಧ ಔರಂಗಜೇಬನು ಕಾಶಿ ನಗರದ ಮೇಲೆ ಮಾಡಿದ ಮಾರಣಾಂತಿಕ ಹಲ್ಲೆಯಿಂದಾಗಿ ಕಾಶಿ ಮಂದಿರ ದ್ವಂಸವಾಯಿತು.GoSriKi Women's Georgette Anarkali Kurta Set with Dupatta | Elegant Pink Ethnic Dress | Flared Long Kurti for Festive

ಹಿಂದೂ ಧರ್ಮವನ್ನು ದೇವಸ್ಥಾನಗಳನ್ನು ಕೆಡವುದರಿಂದ ನಾಶಗೊಳಿಸಲು ಆಗುವುದಿಲ್ಲ ಎಂದರಿತ ಔರಂಗಜೇಬ ಅಲ್ಲಿನ ನಗರಗಳ ಹೆಸರನ್ನು ಬದಲಾಯಿಸಲು ನಿರ್ಧಾರ ಮಾಡಿದನು. ಅದಕ್ಕಾಗಿ ವಾರಣಾಸಿಗೆ ಮುಹಮ್ಮದಾಬಾದ್‌ಹಾಗೇ ಮಥುರಾಗೆ ಇಸ್ಲಮಾಬಾದ್‌ಎಂಬ ಹೆಸರಿಡಲು ಪ್ರಯತ್ನಿಸಿದನು, ಆದರೆ ಅದೂ ಕೂಡ ವಿಫಲಗೊಂಡಿತು.

ನಂತರ ದೇಶದಲ್ಲಿ ಮರಾಠರು ತಮ್ಮ ಅಸ್ತಿತ್ವವನ್ನು ಸ್ಥಾಪಿಸಿಕೊಂಡು ಬಂದ ಸಮಯದಲ್ಲಿ, ಪೇಶ್ವೆಗಳು ಹಾಗು ಸಾಮಂತರು ಮೊಘಲರಿಂದ, ಅವಧ್‌ನ ನವಾಬರಿಂದ ಹಾಗೇ ಈಸ್ಟ್‌ಇಂಡಿಯಾ ಕಂಪನಿಯಿಂದ ಹಿಂದೂ ಪವಿತ್ರ ಕ್ಷೇತ್ರಗಳನ್ನು ಹಿಂಪಡೆಯುವ ಪ್ರಯತ್ನಗಳು ಅನೇಕ ಬಾರಿ ನಡೆದವು, ಆದರೆ ಪೂರ್ಣ ಯಶಸ್ಸು ಅವರಿಗೆ ಸಿಗಲಿಲ್ಲ.ಇದನ್ನು ಓದಿ: ಕಾಂಗ್ರೆಸ್ ಬಿಹಾರದ ಅಭಿವೃದ್ಧಿಯನ್ನು ಸ್ಥಗಿತಗೊಳಿಸಿದೆ: ಯೋಗಿ ಆದಿತ್ಯನಾಥ್..!

ಔರಂಗಜೇಬನ ಆಕ್ರಮಣದ ಒಂದು ಶತಮಾನದ ನಂತರ ಅಹಲ್ಯಾಬಾಯಿ ಹೋಳ್ಕರ್‌ ಕಾಶಿ ಮಂದಿರವನ್ನು ಪುನಃ ನಿರ್ಮಿಸಿದರು. ನಂತರ ಪಂಜಾಬ್‌ನ ಸಿಖ್‌ಮಹಾರಾಜ ರಣಜಿತ್‌ ಸಿಂಹನು ಅಹಲ್ಯಾಬಾಯಿ ಕಟ್ಟಿಸಿದ ಕಾಶಿ ಮಂದಿರದ ಗೋಪುರಗಳಿಗೆ ಚಿನ್ನದ ಹೊದಿಕೆಯನ್ನ ಹೊದಿಸಿದರು, ಜೊತೆಗೆ ಅಪಾರವಾದ ದೇಣಿಗೆಯನ್ನ ನೀಡಿದ್ದಾರು.

ರಾಜಾ ರಣಜಿತ್‌ ಸಿಂಘ್‌ ಮಂದಿರಗಳಿಗೆ ಎಷ್ಟು ಪ್ರಾಮುಖ್ಯತೆ ಕೊಟ್ಟಿದ್ದರು ಎಂದರೆ,1797ರಲ್ಲಿ ಶಾ ಜಮನ್‌ ದುರ್ರಾನಿಯನ್ನ ಸೊಲಿಸಿ, 800 ವರ್ಷಗಳ ಹಿಂದೆ ಘಜ್ನಿ ಕದ್ದುಕೊಂಡು ಹೋಗಿದ್ದ ಗುಜರಾತ್‌ ಸೋಮನಾಥ ಮಂದಿರದ ಮುಖ್ಯ ದ್ವಾರಗಳನ್ನು ಹಿಂದಿರುಗಿಸುವಂತೆ ಆಜ್ಞಾಪಿಸಿ ಅದನ್ನು ವಾಪಾಸ್‌ ಭಾರತಕ್ಕೆ ಬರುವಂತೆ ಮಾಡಿದರು. ಇದನ್ನು ಓದಿ: ಇಂದಿರಾ ಗಾಂಧಿ ಹತ್ಯೆ ನಡೆಯುವ ಆ ಕೊನೆಯ 24 ಗಂಟೆಯ ರಹಸ್ಯ..! Indira Gandhi

ಹೀಗೆ ಕಾಶಿ ಹಾಗೂ ಭಾರತದ ಅನೇಕ ದೇವಾಲಯಗಳ ಮೇಲೆ ತಲೆಮಾರುಗಳ ಕಾಲ, ಶತಮಾನಗಳ ಕಾಲ ಪದೇ ಪದೇ ದಾಳಿಗಳು ನಡೆದರೂ ಎನು ಆಗಿಲ್ಲವೆಂಬಂತೆ ಮತ್ತೆ ಆ ದೇವಾಲಯಗಳು ತಲೆ ಎತ್ತಿ ನಿಂತಿವೆ. ಇದು ಈ ದೇಶದ ಮಣ್ಣಿನ ಶಕ್ತಿ, ಇಲ್ಲಿನ ಜನರ ಭಾವನೆಗಳ ಕೈಗನ್ನಡಿ.

ನಾವು ಭಾರತೀಯರಾಗಿದ್ದು 1950 ರಲ್ಲಿ ಭಾರತ ಗಣರಾಜ್ಯವಾದಾಗಲಲ್ಲ. ಅಂದು ನಮ್ಮತನವನ್ನ ಉಳಿಸಿಕೊಂಡಾಗಿನಿಂದ. ಕಾಶಿ ಮಂದಿರದ ಮೇಲೆ ಶತಮಾನಗಳ ಕಾಲ ದಾಳಿಗಳು ನಡೆದಷ್ಟೂ, ಕಾಶಿ ನಗರವನ್ನ ನೆಲಸಮ ಮಾಡಲು ಪ್ರಯತ್ನಿಸಿದಷ್ಟೂ ಹಿಂದೂಗಳ ಮನಸ್ಸಿನಲ್ಲಿ ಅದನ್ನು ಪುನಃ ಸ್ಥಾಪಿಸುವ ಕಿಚ್ಚು ಹೆಚ್ಚಾಗುತ್ತಿತ್ತು. ಆದರೆ ಸ್ವತಂತ್ರ ಭಾರತದಲ್ಲಿ ನೆಲೆಸಿರುವ ನಮ್ಮನ್ನು ಕಳೆದ ಆ ಘಟನೆಗಳನ್ನು ಹಾಗೆ ಕೆಲವು ಸಂದರ್ಭಗಳು, ಕೆಲವು ವ್ಯಕ್ತಿತ್ವಗಳು ಮಾಡುತ್ತಿವೆ.ಇದನ್ನು ಓದಿ: ಕನ್ನಡ ರಾಜ್ಯೋತ್ಸವ 2025: ರಾಜ್ಯದಲ್ಲಿ ಬ್ಯಾಂಕ್‌ಗಳಿಗೆ ರಜೆಯಿರಲಿದೆಯೇ?