ಬೆಂಗಳೂರು: ನಗರದಲ್ಲಿ ನೂರಾರು ಕಟ್ಟಡಗಳ ನವೀಕರಣ ಕಾರ್ಯ ಸದ್ದಿಲ್ಲದೇ ಸಾಗುತ್ತಿರುತ್ತದೆ. ಮಹದೇವಪುರದಲ್ಲಿ ಮಾತ್ರ ಬಿಲ್ಡಿಂಗ್ ರಿನೊವೇಶನ್ ವೇಳೆ ಸೆಂಟ್ರಿಂಗ್ ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಯೂಸೂಫ್ ಶರೀಫ್ ಮೃತ ಕಾರ್ಮಿಕ ಆಗಿದ್ದಾನೆ.
ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇಂದು ಸಂಜೆ 5.30 ರ ಸುಮಾರಿಗೆ ಘಟನೆ ನಡೆದಿದೆ. ಘಟನೆ ವೇಳೆ ಕಟ್ಟಡ ಪಕ್ಕದಲ್ಲಿ ಟೀ ಕುಡಿಯುತ್ತಿದ್ದ ಗಂಡ ಹೆಂಡತಿ ಸೇರಿದಂತೆ ಮೂವರಿಗೆ ಗಾಯವಾಗಿದೆ. ಗಾಯಾಳು ಆಕಾಶ್ ಹಾಗೂ ತನುಜಾ ಎಂದು ಗುರುತಿಸಲಾಗಿದೆ.
ಕಳೆದ ಒಂದು ವರ್ಷದ ಹಿಂದೆ ಆಕಾಶ್ ಹಾಗೂ ತನುಜಾ ಮದುವೆಯಾಗಿತ್ತು. ಇಂದು ಸಂಜೆ 5.30 ಕ್ಕೆ ಟೀ ಕುಡಿಯಲು ಬಂದಿದ್ದ ಗಂಡ ಹೆಂಡತಿಗೆ ಈ ದುರ್ಘತಿ ಒದಗಿ ಬಂದಿದೆ. ಈ ದಂಪತಿಗಳು ಚಬ್ಬಿ ಚಾಯ್ ನಲ್ಲಿ ಟೀ ಕುಡಿಯಲು ಬಂದಿದ್ದರು. ಈ ವೇಳೆ ರಿನೋವೇಷನ್ ಗೆ ಹಾಕಿದ್ದ ಮರಗಳು ಏಕಾಏಕಿ ಕುಸಿದಿದೆ. Trading Candlestick Patterns Book : Maximize Your Profits using Candlestick Charts in Stock Market | Technical Analysis Book Paperback – 26 October 2024
ಕಾರ್ಮಿಕ ಯೂಸೂಫ್ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಟೀ ಕುಡಿಯುತ್ತಿದ್ದ ತನುಜಾಗೆ ಬೆನ್ನು ಮೂಳೆ ಮುರಿದಿದ್ದು ಆಕಾಶ್ ಗೆ ಕೈ ಗಾಯವಾಗಿದೆ. ಇಬ್ಬರಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಯೂಸೂಫ್ ಶರೀಫ್ ಮೃತದೇಹವನ್ನ ಬೋರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇದನ್ನೂ ಓದಿ: ಆಡಿಷನ್ ಹೆಸರಲ್ಲಿ ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ ವ್ಯಕ್ತಿಯ ಹ**ತ್ಯೆ