Skip to main content
ವಿಡಿಯೋ
1/3
politics

ತೆಲಂಗಾಣ - ರೆಡ್ಡಿ ಸಂಪುಟದ ಮೊದಲ ಮುಸ್ಲಿಂ ಸಚಿವರಾಗಿ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಅಜರುದ್ದೀನ್‌

By Shravanthi R
ತೆಲಂಗಾಣ - ರೆಡ್ಡಿ ಸಂಪುಟದ ಮೊದಲ ಮುಸ್ಲಿಂ ಸಚಿವರಾಗಿ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಅಜರುದ್ದೀನ್‌

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ಕಾಂಗ್ರೆಸ್‌ ಮುಖಂಡ ಮೊಹಮ್ಮದ್‌ ಅಜರುದ್ದೀನ್‌, ತೆಲಂಗಾಣ ಸರ್ಕಾರದಲ್ಲಿ ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಹೈದರಾಬಾದ್‌: ಇಂದು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ತೆಲಂಗಾಣ ರಾಜ್ಯಪಾಲರಾದ ಜಿಷ್ಣು ದೇವ್‌ ವರ್ಮಾ ಅವರು ಮೊಹಮ್ಮದ್‌ ಅಜರುದ್ದೀನ್‌ ಅವರಿಗೆ ಪ್ರಮಾಣ ವಚನವನ್ನು ಬೋಧಿಸಿದರು. ಈ ಮೂಲಕ ಅವರು, ರೇವಂತ್‌ ರೆಡ್ಡಿಯವರು ಆಡಳಿತ ಸರ್ಕಾರದಲ್ಲಿ ಸಚಿವರಾದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮೊದಲ ಸಚಿವರೆನಿಸಿದ್ದಾರೆ ಎನ್ನಲಾಗಿದೆ. 

ಜುಬಿಲಿ ಹಿಲ್ಸ್ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ ಎನ್ನಲಾಗಿದೆ. ಇಲ್ಲಿ ಉಪ ಚುನಾವಣೆ ನಡೆಯಲಿರುವ ಕಾರಣದಿಂದಾಗಿ ಅಜರುದ್ದೀನ್ ಅವರನ್ನು ಸಂಪುಟಕ್ಕೆ ನೇಮಕ ಮಾಡಲಾಗಿದೆ ಎನ್ನಲಾಗಿದೆ. Stock Investing Mastermind Beginners Handbook to Winning the Stock Market | Learn Fundamental Analysis Investing Strategies | Especially for Beginners, Students, Indian Retail Investor | ZebraLearn Hardcover – 1 January 2022

2023 ರ ಚುನಾವಣೆಯಲ್ಲಿ ಜುಬಿಲಿ ಹಿಲ್ಸ್  ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು ಎನ್ನಲಾಗಿದೆ. ಈ ವರ್ಷದ ಜೂನ್‌ನಲ್ಲಿ, ಬಿಆರ್‌ಎಸ್ ಶಾಸಕ ಮಾಗಂಟಿ ಗೋಪಿನಾಥ್ ಅವರು ಹೃದಯಾಘಾತದಿಂದಾಗಿ ಮೃತಪಟ್ಟಿದ್ದರಿಂದ ಈ ಕ್ಷೇತ್ರವು ತೆರವುವಾಗಿತ್ತು. ತೆಲಂಗಾಣ ಸರ್ಕಾರವು ಮೊಹಮ್ಮದ್‌ ಅಜರುದ್ದೀನ್‌ ಅವರನ್ನು ಆಗಸ್ಟ್‌ ಕೊನೆಯ ವಾರದಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿ ನಾಮನಿರ್ದೇಶನ ಮಾಡಿತ್ತು. ಇದನ್ನೂ ಓದಿ: ಕಟ್ಟಡದ ನವೀಕರಣ ವೇಳೆ ಅನಾಹುತ - ಕಾರ್ಮಿಕನ ಸಾ**ವು, ಮೂವರಿಗೆ ಗಾಯ!