ಬಿಹಾರದಲ್ಲಿ ಚುನಾವಣೆಗೂ ಮೊದಲೇ ರಕ್ತಪಾತದ ಪ್ರಕರಣಗಳು ದಾಖಲಾಗುತ್ತಿವೆ. ಚುನಾವಣೆಗೆ ಇನ್ನೇನು ಆರು ದಿನಗಳು ಬಾಕಿಯಿವೆ. ಈ ಮಧ್ಯೆಯೇ ನಿಗೂಢ ರೀತಿಯಲ್ಲಿ, ಅಲ್ಲಿನ ಜನ ಸುರಾಜ್ ಪಕ್ಷದ (ಜೆಎಸ್‌ಪಿ) ದುಲಾರ್‌ಚಂದ್ ಯಾದವ್ ಎನ್ನುವವರ ಹತ್ಯೆಯಾಗಿರುವುದಾಗಿ ವರದಿಯಾಗಿದೆ. ಈ ನಿಟ್ಟಿನಲ್ಲಿ, ಈ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಅನಂತ್ ಸಿಂಗ್ ಸೇರಿದಂತೆ, ಐವರ ವಿರುದ್ದ ಎಫ್‌ಐಆರ್ ದಾಖಲಾಗಿದೆ ಎನ್ನಲಾಗಿದೆ.
ಈ ಕ್ಷೇತ್ರದಲ್ಲಿ JDU ಅಭ್ಯರ್ಥಿಯಾಗಿ ಅನಂತ್ ಸಿಂಗ್ ಹಾಗೂ ವೀಣಾದೇವಿ RJD ಅಭ್ಯರ್ಥಿಯಾಗಿದ್ದಾರೆ. ತನಿಖೆ ನಡೆಸಲಾಗುತ್ತಿರುವ ಉದ್ದೇಶದಿಂದ, ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪಾಟ್ನಾದ ಮೊಕಾಮಾ ಪ್ರದೇಶದಲ್ಲಿ, ಜನ್ ಸುರಾಜ್ ಪಕ್ಷದ ಅಭ್ಯರ್ಥಿ ಪಿಯೂಷ್ ಪ್ರಿಯದರ್ಶಿ ಪರ ಪ್ರಚಾರ ಮಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ಮೃತದೇಹವನ್ನು ಪೋಲಿಸರಿಗೆ ಹಸ್ತಾಂತರಿಸದ ಕಾರಣ ಸಾವಿನ ನಿಖರ ಕಾರಣ ತಿಳಿದುಬಂದಿಲ್ಲ ಎನ್ನಲಾಗಿದೆ. 51 Trading Strategies: Backtested Swing, Intraday, Positional, Scalping & Option Trading Strategies | Advanced Strategies for F&O and Cash Market ... your Trades with 51 Time tested Strategies Hardcover – 1 January 2024
75 ವರ್ಷದ ಅವರು, ಬುಲೆಟ್ ತಗುಲಿದ ಗಾಯದಿಂದ ಸತ್ತಿದ್ದಾರೋ ಅಥವಾ ಆಕಸ್ಮಿಕ ಸಾವೋ ಎಂದು ಶವ ಪಡೆದ ನಂತರ ಹೇಳಲಾಗುವುದೆಂದು ಪೋಲಿಸರಿಂದ ಮಾಹತಿ ನೀಡಲಾಗಿದೆ. ಈ ಹತ್ಯೆಯ ಹಿಂದೆ ಅಭ್ಯರ್ಥಿ ಅನಂತ್ ಸಿಂಗ್ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಅನಂತ್ ಸಿಂಗ್ ಸೇರಿದಂತೆ ಐವರು ಆರೋಪಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ತೆಲಂಗಾಣ - ರೆಡ್ಡಿ ಸಂಪುಟದ ಮೊದಲ ಮುಸ್ಲಿಂ ಸಚಿವರಾಗಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್