Skip to main content
ವಿಡಿಯೋ
1/3
crime

ಬೆಂಗಳೂರಿನಲ್ಲಿ ನಡೀತು ಹೃದಯವಿದ್ರಾವಕ ಘಟನೆ: ಕೆರೆ ನೀರಿನಲ್ಲಿ ಮುಳುಗಿ ಅಣ್ಣ-ತಮ್ಮ ದುರ್ಮರಣ!

By Pavitra Ganapathi Baradavalli
ಬೆಂಗಳೂರಿನಲ್ಲಿ ನಡೀತು ಹೃದಯವಿದ್ರಾವಕ ಘಟನೆ: ಕೆರೆ ನೀರಿನಲ್ಲಿ ಮುಳುಗಿ ಅಣ್ಣ-ತಮ್ಮ ದುರ್ಮರಣ!

ನಗರದ ಹೊರವಲಯದಲ್ಲಿ ನಡೆದ ಒಂದು ಹೃದಯವಿದ್ರಾವಕ ಘಟನೆಯಲ್ಲಿ, ಕೆರೆ ಬಳಿ ಆಟವಾಡಲು ಹೋಗಿದ್ದ ಅಣ್ಣ ಮತ್ತು ತಮ್ಮ ದುರ್ಮರಣಕ್ಕೀಡಾಗಿದ್ದಾರೆ. ಬೆಂಗಳೂರಿನ ವಿಶ್ವೇಶ್ವರ ಲೇಔಟ್‌ನ ಕೆರೆಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು 10 ವರ್ಷದ ಜಗನಾಥ್ ಮತ್ತು 6 ವರ್ಷದ ಸಂಜಯ್ ಎಂದು ಗುರುತಿಸಲಾಗಿದೆ.

ಬೆಂಗಳೂರು:ನಗರದ ಹೊರವಲಯದಲ್ಲಿ ನಡೆದ ಒಂದು ಹೃದಯವಿದ್ರಾವಕ ಘಟನೆಯಲ್ಲಿ, ಕೆರೆ ಬಳಿ ಆಟವಾಡಲು ಹೋಗಿದ್ದ ಅಣ್ಣ ಮತ್ತು ತಮ್ಮ ದುರ್ಮರಣಕ್ಕೀಡಾಗಿದ್ದಾರೆ. ಬೆಂಗಳೂರಿನ ವಿಶ್ವೇಶ್ವರ ಲೇಔಟ್‌ನ ಕೆರೆಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು 10 ವರ್ಷದ ಜಗನಾಥ್ ಮತ್ತು 6 ವರ್ಷದ ಸಂಜಯ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಗೃಹಿಣಿ ಪೂಜಾ ಅನುಮಾನಾಸ್ಪದ ಸಾವು; ಪತಿ, ಮಾವ ಬಂಧನ! ವರದಕ್ಷಿಣೆ ಕಿರುಕುಳ ಆರೋಪ..!!


ಆಟವಾಡುತ್ತಾ ಕೆರೆ ನೀರಿಗಿಳಿದ ಇಬ್ಬರೂ ಆಕಸ್ಮಿಕವಾಗಿ ನೀರಿನಲ್ಲಿ ಜಲಸಮಾಧಿಯಾಗಿದ್ದಾರೆ. ಗಾರೆ ಕೆಲಸ ಮಾಡುತ್ತಿದ್ದ ತಂದೆ ಮತ್ತು ಹೌಸ್‌ ಕೀಪಿಂಗ್‌ ಕೆಲಸ ನಿರ್ವಹಿಸುತ್ತಿದ್ದ ತಾಯಿ, ಸಂಜೆ ವೇಳೆಗೆ ಕೆಲಸ ಮುಗಿಸಿ ಮನೆಗೆ ಬಂದಿದ್ದಾರೆ. ಆದರೆ, ನಿನ್ನೆ ಸಂಜೆ ಆಟವಾಡಲು ಹೊರಗೆ ಹೋಗಿದ್ದ ಮಕ್ಕಳು ಮನೆಗೆ ವಾಪಸ್ ಬಂದಿರಲಿಲ್ಲ
.ಇದನ್ನೂ ಓದಿ: ಪ್ರಣಾಳಿಕೆಯಲ್ಲಿ ಏನಿದೆ ಎಂದು ನಿತೀಶ್‌ಗೆ ತಿಳಿದಿಲ್ಲ: ತೇಜಸ್ವಿ ಯಾದವ್‌ ಅಣಕ..!

ಅಣ್ಣ-ತಮ್ಮ ಇಬ್ಬರೂ ನೀರಿನಲ್ಲಿ ಮುಳುಗುತ್ತಿರುವುದನ್ನು ನೋಡಿದ ಇನ್ನೊಬ್ಬ ಬಾಲಕ ಓಡಿ ಬಂದು ತಕ್ಷಣ ಪೋಷಕರಿಗೆ ತಿಳಿಸಿದ್ದಾನೆ. ನಂತರ ನಡೆದ ಶೋಧ ಕಾರ್ಯದಲ್ಲಿ ಇಬ್ಬರೂ ಮಕ್ಕಳ ಮೃತದೇಹಗಳು ದೊರಕಿವೆ. ಈ ಘಟನೆಯಿಂದ ಪೋಷಕರು ಮತ್ತು ಸ್ಥಳೀಯರ ಆಕ್ರಂದನ ಮುಗಿಲು ಮುಟ್ಟಿದೆ.SGF11 Women's Kanjivaram Pure Soft Silk Saree With Unstitched Blouse Piece