Skip to main content
ವಿಡಿಯೋ
1/3
general

ಸಮೀಕ್ಷಾ ವರದಿ: ಹಿಂದುಳಿದ ವರ್ಗಗಳ ಆಯೋಗದಿಂದ ಮಹತ್ವದ ಮಾಹಿತಿ ಬಿಡುಗಡೆ..!!

By Pavitra Ganapathi Baradavalli
ಸಮೀಕ್ಷಾ ವರದಿ: ಹಿಂದುಳಿದ ವರ್ಗಗಳ ಆಯೋಗದಿಂದ ಮಹತ್ವದ ಮಾಹಿತಿ ಬಿಡುಗಡೆ..!!

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು (KSCBC) ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 31, 2025ರವರೆಗೆ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಸಮೀಕ್ಷೆ) ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು (KSCBC) ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 31, 2025ರವರೆಗೆ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಸಮೀಕ್ಷೆ) ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.

ರಾಜ್ಯದ ಒಟ್ಟು 6.85 ಕೋಟಿ ಅಂದಾಜು ಜನಸಂಖ್ಯೆ ಪೈಕಿ, ಈವರೆಗೆ 6.13 ಕೋಟಿ ಜನರ ಸಮೀಕ್ಷೆ ಪೂರ್ಣಗೊಂಡಿದೆ.ಇದನ್ನೂ ಓದಿ: ಭೀಮ್‌ ಆರ್ಮಿ ಕಾರ್ಯಕರ್ತನ ಕಾರಿ ಬೆಂಕಿ..! RSS vs Bhim Army


ಸಮೀಕ್ಷೆಯಲ್ಲಿ ಒಟ್ಟು 4.22 ಲಕ್ಷ ಕುಟುಂಬಗಳು ಮಾಹಿತಿ ನೀಡಲು ನಿರಾಕರಿಸಿದ್ದರೆ, 34.49 ಲಕ್ಷ ಮನೆಗಳು ಖಾಲಿ ಅಥವಾ ಬೀಗ ಹಾಕಿರುವುದು ಕಂಡುಬಂದಿದೆ. ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದವರು ಮತ್ತು ಮಾಹಿತಿ ನೀಡಲು ನಿರಾಕರಿಸಿದವರು ತಮ್ಮ ವಿವರಗಳನ್ನು ಆನ್ಲೈನ್ ಮೂಲಕ ನಮೂದಿಸಲು ಆಯೋಗವು ಮತ್ತೊಂದು ಅವಕಾಶ ನೀಡಿದೆ.ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ರಾಜ್ಯದ ಜನರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ..!!

ಸಾರ್ವಜನಿಕರು ನವೆಂಬರ್ 10, 2025ರವರೆಗೆ https://kscbcselfdeclaration.karnataka.gov.in ವೆಬ್ಸೈಟ್ ಮೂಲಕ ಸ್ವಯಂ ಘೋಷಣೆ ಪೂರ್ಣಗೊಳಿಸಬಹುದಾಗಿದೆ. ರಾಜ್ಯದ ಕಲ್ಯಾಣ ಯೋಜನೆಗಳಿಗೆ ಸಮರ್ಪಕ ಮಾಹಿತಿ ಅಗತ್ಯವಿರುವುದರಿಂದ, ಪ್ರತಿಯೊಬ್ಬ ನಾಗರಿಕರು ಸಹಕರಿಸುವಂತೆ ಆಯೋಗ ಮನವಿ ಮಾಡಿದೆ.SWORNOF Women's Kanjivaram Soft Silk Banarasi Sarees With Unstiched Blouse Piece