ಬೆಂಗಳೂರು: ಲೈಟ್ ಆನ್ ಮಾಡುವ ವಿಚಾರವಾಗಿ ನಡೆದ ಕ್ಷುಲ್ಲಕ ಜಗಳ ಕೊಲೆಯಲ್ಲಿ ಪರ್ಯವಸಾನಗೊಂಡಿರುವ ಘಟನೆ ನಗರದ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಕನ್ನಡದ ಹಬ್ಬ...ರಾಜ್ಯೋತ್ಸವ ಆಚರಿಸಿದ ಬಿಗ್ ಬಾಸ್ ಸ್ಪರ್ಧಿಗಳು!
ಡಾಟಾ ಡಿಜಿಟಲ್ ಬ್ಯಾಂಕ್ ಹಾಗೂ ಸಿನಿಮಾಗಳಿಗೆ ಚಿತ್ರೀಕರಣ ಮಾಡುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸೋಮಲಾ ವಂಶಿ (24) ಮೃತಪಟ್ಟ ಯುವಕ. ಆತನ ಸಹ ಕೆಲಸಗಾರ ಭೀಮೇಶ್ ಬಾಬು ಕೊಲೆ ಮಾಡಿದ ಆರೋಪಿ.ಇದನ್ನೂ ಓದಿ: ಪ್ರಶಾಂತ್ ವರ್ಮಾ ಮೇಲೆ ನಿರ್ಮಾಪಕರ ಅಸಮಾಧಾನ .. ಫಿಲ್ಮ್ ಚೇಂಬರ್‌ನಲ್ಲಿ ದೂರು..!
ಮಧ್ಯರಾತ್ರಿ 1:30ರ ಸುಮಾರಿಗೆ ಪ್ರತಿನಿತ್ಯ ಕಂಪನಿಯಲ್ಲೇ ಮಲಗುತ್ತಿದ್ದ ಇಬ್ಬರು ಸಹೋದ್ಯೋಗಿಗಳ ನಡುವೆ ಲೈಟ್ ಆನ್ ಮಾಡುವ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ಜಗಳ ತಾರಕಕ್ಕೇರಿದಾಗ, ಭೀಮೇಶ್ ಬಾಬು ಕೋಪದಲ್ಲಿ ಡಂಬಲ್ಸ್ನಿಂದ ವಂಶಿ ತಲೆಗೆ ಹೊಡೆದಿದ್ದಾನೆ. ಗಂಭೀರ ಗಾಯಗೊಂಡ ವಂಶಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಇದನ್ನೂ ಓದಿ: ಮುಂಬೈ ಸ್ಟುಡಿಯೋ ಒತ್ತೆಯಾಳು ಪ್ರಕರಣ...ನಿರ್ದೇಶಕ ರೋಹಿತ್ ಆರ್ಯ ಗುಂಡೇಟಿಗೆ ಬಲಿ
ಹತ್ಯೆ ನಡೆಸಿದ ನಂತರ ಆರೋಪಿ ಭೀಮೇಶ್ ಬಾಬು ತಾನಾಗಿಯೇ ಗೋವಿಂದರಾಜನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.SWORNOF Women's Kanjivaram Soft Silk Banarasi Sarees With Unstiched Blouse Piece