ಕಾಶಿಯ ಇತಿಹಾಸದಲ್ಲಿ ಧನ್ವಂತರಿಯ ಮೂಲ ಹುಡುಕುತ್ತಾ ಹೋದರೆ, ಪುರಾಣಗಳ ಪ್ರಕಾರ ಸಮುದ್ರ ಮಂಥನದ ಸಂದರ್ಭದಲ್ಲಿ ಉದ್ಭವವಾದ ಧನ್ವಂತರಿ ಮುಂದೆ ದೇವತೆಗಳ ವೈದ್ಯನಾದ ಎಂದು ಉಲ್ಲೇಖವಾಗಿದೆ.
ಈ ಕಥೆ ಮಹಾಭಾರತಕ್ಕೂ ಮುಂಚೆಗಿನ ಘಟನೆಯಾದರೂ ಕೂಡ ಕಾಶಿ ನಗರವನ್ನು ಧನ್ವಂತರಿ ಆಳಿದ್ದಾನೆ ಎಂಬ ದಾಖಲೆ ಪುರಾಣಗಳಲ್ಲಿ ನಮಗೆ ಸಿಗುತ್ತದೆ. ಅಂದರೆ ನಮಗೆ ಸಿಕ್ಕ ದಾಖಲೆಗಳ ಲಾಲಕ್ಕಿಂತ ಧನ್ವಂತರಿಯ ವಿಷಯ ನಮಗೆ ಎಷ್ಟೋ ಹಿಂದಿನ ಕಾಲಕ್ಕೆ ಹೋಲಿಕೆಯಾಗಿದೆ. Portronics Harmonics Klip 4 Retractable Bluetooth Music & Calling Earphone with Long Playtime, Vibration Prompt (Black)
ಕಾಶಿಯನ್ನಾಳಿದ ರಾಜ ವಂಶಗಳು:
ಈ ವಿಚಾರವಾಗಿ ನಮಗೆ ಇತಿಹಾಸದಲ್ಲಿ ದಾಖಲೆಗಳು ಸಿಗುವುದು ಅಸ್ಪಷ್ಟವಾಗಿದ್ದರೂ, ಸಿಕ್ಕ ದಾಖಲೆಗಳ ಪ್ರಕಾರ ಸಾ.ಯು.ಪೂರ್ವ 8 ರಿಂದ 9 ನೇ ಶತಮಾನದ ಅವಧಿಯಲ್ಲಿ ಕಾಶಿಯನ್ನು ಹದಿನಾರು ಪ್ರಮುಖ ಸಾಮ್ರಾಜ್ಯಗಳು ಅತ್ಯಂತ ಶ್ರೇಷ್ಠ ಹಾಗೂ ಬಲಿಷ್ಠ ಸಾಮ್ರಾಜ್ಯಗಳಾಗಿ ಆಳ್ವಿಕೆ ನಡೆಸಿದ್ದವು. ಆ ಹದಿನಾರು ಸಾಮ್ರಾಜ್ಯಗಳನ್ನು ಶೋಡಷ ಮಹಾಜನಪದಗಳು ಎಂದು ಕರೆಯಲಾಗುತ್ತಿತ್ತು.
ಬೌದ್ಧ ಗ್ರಂಥವಾದ ʼಅಂಗುತ್ತರ ನಿಕಾಯʼದಲ್ಲಿ ಆ ಹದಿನಾರು ವಂಶಗಳ ಹೆಸರುಗಳು ಉಲ್ಲೇಖವಾಗಿವೆ. ಕಾಸಿ, ಅಂಗ, ಅಸ್ಸಕ, ಛೇದಿ, ಗಾಂಧಾರ, ಕಾಂಭೋಜ, ಕೋಸಲ, ಮಗಧ, ಮಲ್ಲ, ಮತ್ಸ್ಯ, ಪಾಂಚಾಲ, ವಜ್ಜಿ ಹೀಗೆ ಒಟ್ಟು ಹದಿನಾರು ವಂಶಗಳ ಪಟ್ಟಿಯನ್ನು ಆ ಬೌದ್ಧ ಗ್ರಂಥ ಕೊಡುತ್ತದೆ. ಅವುಗಳಲ್ಲಿ ಕಾಶಿ ಹಾಗೂ ಕಾಶಿಯ ಉತ್ತರದಲ್ಲಿದ್ದ ಕೋಸಲ ಸಾಮ್ರಾಜ್ಯ ಹಾಗೆ ಪೂರ್ವದಲ್ಲಿದ್ದ ಮಗಧ ಸಾಮ್ರಾಜ್ಯಗಳು ಅತ್ಯಂತ ಬಲಿಷ್ಠವಾಗಿದ್ದವು ಹಾಗೂ ಇವೆರಡೂ ಪರಸ್ಪರ ವಿರೋಧಿಗಳಾಗಿದ್ದವು ಎನ್ನಲಾಗಿದೆ.ಇದನ್ನು ಓದಿ: ಪ್ರಧಾನಿ ಮೋದಿ ಬಿಹಾರ ಚುನಾವಣಾ ಪ್ರಚಾರಕ್ಕೆ ಭೇಟಿ..!
ಇನ್ನು ಈ ವಿಷಯದ ಬಗ್ಗೆ ನಮಗೆ ಅನೇಕ ಜಾತಕ ಕಥೆಗಳು ಸಿಗುತ್ತವೆ. ಈ ಜಾತಕ ಕಥೆಗಳ ಪ್ರಕಾರ ಈ ಮೂರೂ ಬಲಿಷ್ಠ ಸಾಮ್ರಾಜ್ಯಗಳಲ್ಲಿ ಕಾಶಿಯು ಪ್ರಮುಖ ಸ್ಥಾನಮಾನವನ್ನು ಪಡೆದಿತ್ತು. ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಮಿಕ್ಕೆಲ್ಲಾ ಸಾಮ್ರಾಜ್ಯಗಳಿಗಿಂತ ಮುಂದಿತ್ತು.
ಜಾತಕ ಕಥೆಗಳ ಪ್ರಕಾರ, ಈ ಮೂರೂ ವಂಶಗಳು ಪರಸ್ಪರ ಅಧಿಕಾರಕ್ಕಾಗಿ ಹೊಡೆದಾಡುತ್ತಿದ್ದವು. ಪರಸ್ಪರ ಪೈಪೋಟಿ, ಆಕ್ರಮಣಗಳು ನಡೆಯುತ್ತಿದ್ದವು, ಒಂದು ಕಾಲದಲ್ಲಿ ಕಾಶಿ ಮಗಧವನ್ನು ಸೋಲಿಸಿದರೆ, ಇನ್ನೊಮ್ಮೆ ಕೋಸಲ ಕಾಶಿಯನ್ನು ಸೋಲಿಸುತ್ತಿತ್ತು. ಹೀಗೆ ಶ್ರೀಮಂತ ಕಾಶಿ ಸಂಸ್ಥಾನವನ್ನು ಅನೇಕ ರಾಜಮನೆತನಗಳು ಆಳಿ ಆಳಿದಿರುವುದನ್ನು ಇತಿಹಾಸ ಹಾಗೂ ಪುರಾಣಗಳು ಉದಾಹರಣೆ ಸಮೇತ ವಿವರಿಸುತ್ತವೆ.ಇದನ್ನು ಓದಿ: ನೈಜೀರಿಯಾದಲ್ಲಿ ಕಾರ್ಯಾಚರಣೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಎಚ್ಚರಿಕೆ!