ಕಾಶಿಯು ತನ್ನ ರಾಜಕೀಯ ಮಹತ್ವವನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಇನ್ನೊಂದು ಕಡೆ ಧಾರ್ಮಿಕವಾಗಿ ಕಾಶಿಯು ಬೌದ್ಧ ಧರ್ಮವನ್ನು ಸ್ವಾಗತಿಸಿತ್ತು. ಅದು ಮೌರ್ಯರ ಕಾಲವಾದ್ದರಿಂದ ಕಾಶಿಯಲ್ಲಿ ಬೌದ್ಧ ಧರ್ಮ ಪ್ರಚಲಿತಕ್ಕೆ ಬಂತು.
ಆದರೆ ಬ್ರಾಹ್ಮಣ ಮತಕ್ಕಿದ್ದ ಸರ್ವೋಚ್ಛ ಸ್ಥಾನ ಹಾಗೆಯೇ ಇತ್ತು. ಕಾಶಿಯನ್ನಾಳುತ್ತಿದ್ದ ಶುಂಗ ವಂಶಸ್ಥರು ಬ್ರಾಹ್ಮಣ ಧರ್ಮಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ಆದರೆ ಸಾ.ಯು. 1ನೇ ಶತಮಾನದ ಸಮಯದಲ್ಲಿ ಮಧ್ಯ ಏಷ್ಯಾದಿಂದ ಬಂದ ಕುಶಾನರು ವಾರಣಾಸಿಯನ್ನು ವಶಪಡಿಸಿಕೊಂಡು ಅದನ್ನು ಆಳಲು ಆರಂಭಿಸಿದರು. Women's Cotton Embroidery Anarkali Kurti and Pant with Dupatta Set
ಕುಶಾನರ ದೊರೆ ಕನಿಷ್ಕನು ಬೌದ್ಧ ಧರ್ಮದ ಮಹಾನ್ ಪೋಷಕ ಎನಿಸಿಕೊಂಡಿದ್ದ. ಅಶೋಕನ ನಂತರ ಬೌದ್ಧ ಭಿಕ್ಷುಗಳನ್ನು ವಿದೇಶಗಳಿಗೆ ಪ್ರಚಾರಕ್ಕೆಂದು ಕಳಿಸಿದ್ದು ಕನಿಷ್ಕನೇ. ಆದರೆ ಬೌದ್ಧ ಧರ್ಮದ ಬೆಳವಣಿಗೆಯಿಂದ ಕಾಶಿಯಲ್ಲಿ ಹಿಂದೂ ಧರ್ಮ ಅವನತಿಯತ್ತ ಸಾಗುತ್ತಿರುವುದು ಕಂಡು ಬರುತ್ತಿತ್ತು. ಅದಕ್ಕೆ ಅನುಕೂಲಕರವೆಂಬಂತೆ, ಗುಪ್ತರ ಕಾಲದಲ್ಲಿ ಪುರಾಣಗಳನ್ನು ರಚಿಸುವ ಕೆಲಸಗಳು ಆರಂಭವಾದವು. ಇದನ್ನು ಓದಿ: ಸಿಲಿಕಾನ್ ಸಿಟಿ ಗುಂಡಿ ವಿಡಿಯೋ ಸಂಚಲನ: ಸಿಎಂ ಡೆಡ್‌ಲೈನ್ ನಡುವೆಯೂ ರಸ್ತೆ ಗುಂಡಿಗಳದ್ದೇ ಆಧಿಪತ್ಯ!
ಈ ಕೆಲಸಗಳು ವಿಗ್ರಹಾರಾಧಕರಾದ ಹಿಂದೂಗಳಿಗೆ ಪುನರುಜ್ಜೀವನ ಕಲ್ಪಿಸಿದಂತಾಯಿತು. ಗುಪ್ತರ ಆ ಕಾಲದಲ್ಲಿ ಮಂದಿರಗಳನದನು ನಿರ್ಮಿಸುವುದು ಹಾಗು ಕಲೆ ಹಾಗೂ ವಾಸ್ತುಶಿಲ್ಪಗಳಿಗೆ ಉತ್ತೇಜನೆ ನೀಡುವ ಕಾರ್ಯಗಳು ಆರಂಭವಾದವು. ಇವೆಲ್ಲದರ ಲಾಭವನ್ನು ಕಾಶಿ ನಗರ ಪಡೆದುಕೊಂಡಿತು. ಹೀಗೆ ಕಾಶಿಯು ಪ್ರತಿ ಪೀಳಿಗೆಗೆ ಒಂದಲ್ಲ ಒಂದು ರೀತಿ ಉಪಯುಕ್ತವಾದ ಸ್ಥಳವಾಗಿ ಮಾರ್ಪಟ್ಟಿತು.ಇದನ್ನು ಓದಿ: ಇಸ್ರೋದಿಂದ ಮತ್ತೊಂದು ಯಶಸ್ವಿ ಹೆಜ್ಜೆ: ಇಂದು ಸಂಜೆ ಬಾಹುಬಲಿ LVM3 ರಾಕೆಟ್ CMS-03 ಉಡಾವಣೆ..!!