Skip to main content
ವಿಡಿಯೋ
1/3
general

ರಾಮ್ ಜೀ ಗ್ಯಾಂಗ್ ಬಲೆಗೆ: ಕಳ್ಳತನವಾದ ನಿರ್ಮಾಪಕ ರವಿ ಗೌಡರ ಹಾರ್ಡ್ ಡಿಸ್ಕ್ ವಶ, ಓರ್ವನ ಬಂಧನ..!!

By Pavitra Ganapathi Baradavalli
ರಾಮ್ ಜೀ ಗ್ಯಾಂಗ್ ಬಲೆಗೆ: ಕಳ್ಳತನವಾದ ನಿರ್ಮಾಪಕ ರವಿ ಗೌಡರ ಹಾರ್ಡ್ ಡಿಸ್ಕ್ ವಶ, ಓರ್ವನ ಬಂಧನ..!!

ವಿಜಯನಗರ ಕಾಫಿ ಡೇ ಮುಂಭಾಗ ಕಾರ್ ಗ್ಲಾಸ್ ಹೊಡೆದು ಕಳ್ಳತನವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ರವಿ ಗೌಡ ಅವರು ಇಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಬೆಂಗಳೂರು: ವಿಜಯನಗರ ಕಾಫಿ ಡೇ ಮುಂಭಾಗ ಕಾರ್ ಗ್ಲಾಸ್ ಹೊಡೆದು ಕಳ್ಳತನವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ರವಿ ಗೌಡ ಅವರು ಇಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಸಿನಿಮಾ ಬಿಡುಗಡೆಯ ಪ್ರಚಾರ ಕಾರ್ಯಗಳಲ್ಲಿ ನಿರತರಾಗಿದ್ದ ಕಾರಣ ಈವರೆಗೆ ಮಾತನಾಡಲು ಸಾಧ್ಯವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: ಸಿಲಿಕಾನ್ ಸಿಟಿ ಗುಂಡಿ ವಿಡಿಯೋ ಸಂಚಲನ: ಸಿಎಂ ಡೆಡ್‌ಲೈನ್ ನಡುವೆಯೂ ರಸ್ತೆ ಗುಂಡಿಗಳದ್ದೇ ಆಧಿಪತ್ಯ!

ನನ್ನ ಕಾರಿನ ಹಿಂಬದಿ ಗ್ಲಾಸ್ ಹೊಡೆದು, ಬ್ಯಾಗ್ನಲ್ಲಿದ್ದ ನಗದು, ಟ್ಯಾಬ್ ಮತ್ತು ಪ್ರಮುಖವಾಗಿ VFX ಗೆ ಸಂಬಂಧಿಸಿದ ಇಂಪಾರ್ಟೆಂಟ್ ಫೈಲ್ಸ್ಇರುವ ಹಾರ್ಡ್ ಡಿಸ್ಕ್ ಕಳುವಾಗಿತ್ತು, ಎಂದು ಗೌಡರು ತಿಳಿಸಿದ್ದಾರೆ. ಕಳ್ಳತನವಾದ ಕೂಡಲೇ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ಇದನ್ನೂ ಓದಿ: ಇಸ್ರೋದಿಂದ ಮತ್ತೊಂದು ಯಶಸ್ವಿ ಹೆಜ್ಜೆ: ಇಂದು ಸಂಜೆ ಬಾಹುಬಲಿ LVM3 ರಾಕೆಟ್ CMS-03 ಉಡಾವಣೆ..!!

ತಕ್ಷಣ ಸ್ಪಂದಿಸಿದ ಎಸಿಪಿ ಚಂದನ್ ನೇತೃತ್ವದ ಪೊಲೀಸ್ ಇಲಾಖೆಯು, ಕೃತ್ಯ ಎಸಗಿದ ವ್ಯಕ್ತಿಯನ್ನು ಶೀಘ್ರದಲ್ಲಿಯೇ ಪತ್ತೆ ಹಚ್ಚಿದೆ. ಆತ ತಮಿಳುನಾಡಿನ ರಾಮ್ ಜೀ ಗ್ಯಾಂಗ್‌ಗೆ ಸೇರಿದವನು ಎಂದು ತಿಳಿದುಬಂದಿದೆ. ಕಳ್ಳತನವಾಗಿದ್ದ ಎಲ್ಲಾ ವಸ್ತುಗಳು ವಾಪಸ್ ಸಿಕ್ಕಿವೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಿನಿಮಾದ ಬಿಡುಗಡೆಗೆ ಯಾವುದೇ ತೊಂದರೆಯಿಲ್ಲ, ಎಂದು ರವಿ ಗೌಡರು ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದಾರೆ.SWORNOF Women's Kanjivaram Soft Silk Banarasi Sarees With Unstiched Blouse Piece