ಬೆಂಗಳೂರು - ನಗರದಲ್ಲಿ ಸ್ವಚ್ಛತೆ ಕಾಪಾಡಬೇಕು, ಹಸಿ ಕಸ - ಒಣ ಕಸ ಪ್ರತ್ಯೇಕ ಮಾಡಬೇಕು. ನಿಮ್ಮ ಮನೆ ಕಸವನ್ನ ರಸ್ತೆಗಳಲ್ಲಿ ಬಿಸಾಕಿದರೆ ಮತ್ತೆ ನಿಮ್ಮ ಮನೆ ಮುಂದೆನೇ ಕಸ ಸುರಿದು ದಂಡ ಹಾಕುತ್ತಿವಿ!. ಹೀಗಂತ ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ಹೊಸ ಕ್ರಮ ಜಾರಿ ಗೊಳಿಸಿದೆ.
ಹೌದು, ನಮ್ಮ ಮನೆಗೆ ಕಸ ಬೇಡ, ಬೇರೆ ಅವರ ಮನೆ ಸಮೀಪ ಕಸ ಸುರಿಯುತ್ತೀವಿ ಎನ್ನುವವರಿಗೆ ಇದು ಸರಿಯಾದ ಕ್ರಮವಾಗಿದೆ. ಆದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರವೇ ತಪ್ಪು ಮಾಡಿದರೆ ಕ್ರಮವೇನು.?! ಹೀಗಂತ ಜನರು ಪ್ರಶ್ನೆ ಮಾಡುತ್ತಿದ್ದಾರೆ.
ನಗರದಲ್ಲಿ ಶೇ. 50 ರಷ್ಟು ಜನರು ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗುವವರು. ಶಿಫ್ಟ್ ಆಧರಿಸಿ ಕೆಲಸ ಮಾಡಲಾಗುತ್ತದೆ ಸಾಮಾನ್ಯವಾಗಿ ಫಸ್ಟ್ , ಜನರಲ್ , ಸೆಕೆಂಡ್ ಶಿಫ್ಟ್ ಹಾಗೂ ನೈಟ್ ಶಿಫ್ಟ್ ಮಾಡುತ್ತಾರೆ. KLOSIA Women's Rayon Printed Anarkali Kurta and Pant with Dupatta Set
ಹೀಗಿರುವಾಗ ಕಸವನ್ನ ಕಸದ ವಾಹನ ಬಂದ ಸಮಯದಲ್ಲಿ ಬಿಸಾಡಬೇಕು ಎಂದರೆ ಹೇಗೆ ? ಹೌದು ಕಸದ ವಾಹನ ಬರುವ ಸಮಯ ನಿಗದಿಯಾಗಿಲ್ಲ. ಮನೆ ಮುಂದೆ ಕಸದ ವಾಹನ ಬಂದಾಗ ವಿಜ್ಯೂಯಲ್ ಹಾಕಿ - ಗಂಟೆ ಶಬ್ದ ಮಾಡುತ್ತಾರೆ. ಇದನ್ನ ಗುರುತು ಇರಿಸಿಕೊಂಡು ಕಸವನ್ನ ನಿಮಿಷಗಳ ಅಂತರದಲ್ಲಿ ಹೋಗಿ ವಿಲೇವಾರಿ ಮಾಡಬೇಕು. ವಿಚಿತ್ರವೆಂದರೆ ನಿತ್ಯ ಬೆಳಿಗ್ಗೆ 10 ಗಂಟೆಯೊಳಗೆ ಈ ವಾಹನ ನಗರದ ಎಲ್ಲ ಮನೆಗಳ ಮುಂದೆ ಒಂದು ರೌಂಡ್ ಮುಗಿಸಿ ಬಿಟ್ಟಿರುತ್ತದೆ.
ಹೀಗಿರುವಾಗ ಬೆಳಿಗ್ಗೆಯೇ ಕೆಲಸಕ್ಕೆ ಹೋದವರು ಏನು ಮಾಡಬೇಕು, ಕಸವನ್ನ ಎಲ್ಲಿ ಇಡಬೇಕು, ಕಸ ವಿಲೇವಾರಿಗೆ ವಾಹನ ಬರದಿದ್ದರೆ ಏನು ಮಾಡುವುದು. ಮನೆ ಮುಂದೆ ಕಸದ ಬುಟ್ಟಿ ಇಟ್ಟರೆ ಅದನ್ನ ಕಸದ ವಾಹನಕ್ಕೆ ಶಿಪ್ಟ್ ಮಾಡಲು ಆಗಲ್ಲ ಅಂತಾರೆ ಪೌರ ಕಾರ್ಮಿಕರು. ಹಾಗೇ ಮನೆ ಮುಂದೆ ಇಟ್ಟಾಗ ಆಹಾರಕ್ಕಾಗಿ ಬೀದಿ ನಾಯಿ ಎಳೆದು ರಂಕಲು ಆಗುವ ಸಾಧ್ಯತೆಯೂ ದಟ್ಟವಾಗಿದೆ. ಇಂದು ಘೋಷಣೆಯಾಗುತ್ತಾ ಜಿಬಿಎ ಗೆ ಚುನಾವಣೆ?
ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬಿಬಿಎಂಪಿ ಇದ್ದ ಸಮಯದಲ್ಲೂ ಕಸದ ಸೆಸ್ ಪಡೆಯುತ್ತದೆ. ಆಸ್ತಿ ತೆರಿಗೆ ಸಂಗ್ರಹಣೆ ವೇಳೆ ಕಸದ ತೆರಿಗೆ ಅವರ ಬೊಕ್ಕಸ ಸೇರುತ್ತದೆ. ಕಸಕ್ಕೂ ಟ್ಯಾಕ್ಸ್ ಕಟ್ಟಿ ಈಗ ಅದಕ್ಕೂ ನಿಯಮ ತಪ್ಪಿದರೆ ಮನೆ ಮುಂದೆ ಕಸದ ರಾಶಿ ಫೈನಲ್ ಆಗಿ ದಂಡ ಕಟ್ಟುವಂತ ದುಸ್ಥಿತಿ ಎದುರಾಗಿದೆ. ಮನೆ ಕಸ ಏನು ಮಾಡಬೇಕು. ನಿಮಗೆ ಕಸ ಹಾಕಲು ರಜಾ ಹಾಕಿ ಮನೆಯಲ್ಲಿ ಕೂರಬೇಕು. ಕೆಲಸ ಇಲ್ಲದೆ ಬಾಡಿಗೆ, ಜೀವನದ ಕಡೆಗೆ ನಿಮಗೆ ಕಸದ ಟ್ಯಾಕ್ಸ್ ಕಟ್ಟಲು ಹಣ ಬೇಕಲ್ವ.ಕೇರಳದ ಕಣ್ಣೂರ್ ಪಯ್ಯಂಬಲಂ ಬೀಚ್‌ನಲ್ಲಿ ಕರ್ನಾಟಕ ಮೂಲದ 3 ಮೆಡಿಕಲ್ ವಿದ್ಯಾರ್ಥಿಗಳ ಸಾ*ವು
ಎಲ್ಲದಕ್ಕೂ ಹಣ ಹಣ ಎನ್ನುವ ಸರ್ಕಾರ ಸೌಲಭ್ಯ ಒದಗಿಸಲು ಹಾಕಲು ಕಸದ ಸಮಸ್ಯೆ ಬಗೆಹರಿಸಲು ಸುಲಭ ಮಾರ್ಗ ಮಾತ್ರ ಹುಡುಕಿಲ್ಲ ಎನ್ನುವುದಂತೂ ನಿಜ. ಹಾಗೇ ಈ ರೀತಿ ಕಸದ ವಿಲೇವಾರಿಯಲ್ಲಿ ಸಮಸ್ಯೆ ಇದ್ದರೇನು ಕೆಲ ಅಧಿಕಾರಿಗಳ, ಜನಪ್ರತಿನಿಧಿಗಳ ಜೇಬು ತುಂಬುತ್ತದೆ ಎನ್ನುವುದು ಅಷ್ಟೇ ಸತ್ಯ. ಒಂದೊಮ್ಮೆ ಇದು ಸುಳ್ಳಾದರೆ ಬೆಂಗಳೂರು ಸಚಿವರು, ಶಾಸಕರು, ಅಧಿಕಾರಿಗಳು ಕಸದ ಸಮಸ್ಯೆ ಬಗೆಹರಿಸಿ ಇಲ್ಲ ಜನರಿಗೆ ತೊಂದರೆ ಕೊಡುವುದಾದರೂ ನಿಲ್ಲಿಸಿ.