Skip to main content
ವಿಡಿಯೋ
1/3
weather

ರಾಜ್ಯದಲ್ಲಿ ಮತ್ತೆ ವರುಣಾರ್ಭಟ ಶುರು.. ಮೂರು ದಿನ ಯೆಲ್ಲೋ ಅಲರ್ಟ್ ಘೋಷಣೆ!

By Shravanthi R
ರಾಜ್ಯದಲ್ಲಿ ಮತ್ತೆ ವರುಣಾರ್ಭಟ ಶುರು.. ಮೂರು ದಿನ ಯೆಲ್ಲೋ ಅಲರ್ಟ್ ಘೋಷಣೆ!

ಕಳೆದ ಕೆಲವಾರಗಳಿಂದ ರಾಜ್ಯದಾದ್ಯಂತ ಮಳೆಯಾಗುತ್ತಿದ್ದು, ಇದೀಗ ನವೆಂಬರ್ 5ರಿಂದ ಮೂರು ದಿನಗಳ ಕಾಲ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಹಾಗೂ ಕರಾವಳಿ ಭಾಗಗಳಲ್ಲಿ ಹಗುರ ಮತ್ತು ಸಾಧಾರಣ ಮಳೆಯ ಸಾಧ್ಯತೆ ಇದೆ ಎಂದು ತಿಳಿಸಿದೆ.

ಈ ವರ್ಷ ಮಳೆಯು ಎಲ್ಲೆಡೆ ತಂಪರೆದಿದೆ ಹಾಗೂ ತನ್ನ ತಾಂಡವವೂ ತೋರಿದೆ. ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಪ್ರಕಾರ, ನಾಳೆಯಿಂದ ಮೂರು ದಿನಗಳ ಕಾಲ ಮಳೆಯ ಮುಂದುವರಿಕೆಯಾಗಲಿದೆ ಎನ್ನಲಾಗಿದೆ. ಈ ಪೈಕಿ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆಯಾಗಿದ್ದು, ಮೊಂತಾ ಚಂಡಮಾರುತದ ಪ್ರಭಾವ ತೀವ್ರವಾಗಿದೆ. ಕಳೆದ ಕೆಲವಾರಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಇದೀಗ ಮತ್ತೆ ನವೆಂಬರ್‌ 5 ರಿಂದ ಮಳೆ ಹೆಚ್ಚಾಗಲಿದೆ ಎಂದು ವರದಿಯಾಗಿದೆ. 

ಉತ್ತರ ಕರ್ನಾಟಕದ ಜಿಲ್ಲೆಗಳಾದ, ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಬಾಗಲಕೋಟೆ, ವಿಜಯಪುರ, ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಶುರುವಾಗಲಿದೆ ಎಂದು ತಿಳಿಸಿದೆ. ದಕ್ಷಿಣ ಕರ್ನಾಟಕ ಭಾಗದ ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಕೋಲಾರ, ರಾಮನಗರ ಇತರ ಪ್ರದೇಶ ಹಾಗೂ ಜಿಲ್ಲೆಗಳಲ್ಲಿ ಹಗುರ ಹಾಗೂ ಸಾಧಾರಣ ಮಳೆಯಿರಲಿದೆ ಎಂದು ತಿಳಿಸಿದೆ. ಇನ್ನುಳಿದಂತೆ, ಕರಾವಳಿ ಭಾಗದಲ್ಲಿಯೂ ಗುಡುಗು ಸಹಿತ ಮಧ್ಯಮ ಮಳೆಯ ಸಾಧ್ಯತೆಯಿರಲಿದೆ ಎನ್ನಲಾಗಿದೆ.  Tax saving Is Not The Way But The Destination / टैक्स बचत, रास्ता नहीं मंजिल है। : टैक्स बचत से निवृति तक Paperback – 5 July 2021

ನವೆಂಬರ್ 5, 6 ಹಾಗೂ 7 ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಾಧಾರಣ ಹಾಗೂ ಹಗುರ ಮಳೆಯಾಗಲಿದೆ ಎಂದು ತಿಳಿಸಲಾಗಿದೆ. ಭಾನುವಾರ, ಮಳೆಯ ತೀವ್ರತೆ ಕಡಿಮೆಯಾಗಿದ್ದು, ಮೋಡ ಕವಿದ ವಾತಾವರಣವಿದ್ದು, ಮಧ್ಯಂತರ ಬಿಸಿಲು ಹಾಗೂ ಶಾಖವಿತ್ತು. ಎರಡು ದಿನಗಳ ಕಾಲ ಬೆಂಗಳೂರು ಹವಾಮಾನವು ಭಾಗಶಃ ಮೋಡ ಕವಿದಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಡಿಗ್ರಿ ಸೆ. ಮತ್ತು 19 ಡಿಗ್ರಿ ಸೆ. ಎಂದು ವರದಿಯಾಗಿದೆ. ಇದನ್ನೂ ಓದಿ: ಕಸಕ್ಕೂ ತೆರಿಗೆ ಕಟ್ಟಿದ್ದರೂ, ಜಿಬಿಎ ಅವಾಂತರ ಮಾತ್ರ ನಿಲ್ಲಲ್ಲ. ನಿಮ್ಮ ಟೈಮ್ ಗೆ ನಾವು ಕಸ ಹಾಕಲು ಕೆಲಸ ಬಿಟ್ಟು ಕೂರಬೇಕಾ ?!.