ಚಿತ್ರದುರ್ಗಾ ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ, ನಟ ದರ್ಶನ್ ಜೈಲು ಸೇರಿ 81ದಿನಗಳು ಪೂರ್ಣಗೊಳ್ಳುತ್ತಿದೆ. ಜೈಲು ಪಾಲಾದ ಅವರನ್ನು ಒಳಗೊಂಡಂತೆ ಇಂದು ಇನ್ನಿತರ ಆರೋಪಿಗಳನ್ನು ಬೆಂಗಳೂರಿನ ಸತ್ರ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರುಪಡಿಸಲಾಗಿದೆ. ಸತತ ಎರಡೂವರೆ ತಿಂಗಳಿಂದ ಸೂರ್ಯನ ದರ್ಶನವೇ ಪಡೆದಿರದ ಅವರು, ಇಂದು ಬಿಗಿ ಭದ್ರತೆಯ ನಡುವೆಯೇ ಅವರನ್ನು ಕೋರ್ಟ್‌ಗೆ ಹಾಜರು ಪಡಿಸಲಾಗಿದೆ.
ಇಂದು ದೋಷಾರೋಪ ನಿಗದಿಪಡಿಸಲಿದ್ದು, ನ್ಯಾಯಾಧೀಶರು ಆರೋಪಗಳನ್ನು ಓದಿ ಹೇಳಲಿದ್ದಾರೆ. ವಾದ- ಪ್ರತಿವಾದಗಳು ನಡೆಯಲಿದ್ದು, ಆರೋಪಿಗಳು ಒಪ್ಪಿಕೊಂಡಿದ್ದೇ ಆದಲ್ಲಿ, ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಿದೆ. ಆರೋಪ ನಿರಾಕರಿಸುವ ಸಾಧ್ಯತೆ ಹೆಚ್ಚಿದ್ದು, ನ್ಯಾಯಲಯದ ನಡೆಗಾಗಿ ಕಾಯ್ದಿರಿಸಲಾಗಿದೆ. ತನಿಖೆ ನಡೆಸಿರುವ ಪೋಲಿಸರು ಕೋರ್ಟ್‌ಗೆ ಚಾರ್ಚ್‌ಶೀಟ್ ಸಲ್ಲಿಸಿದ್ದು, ಇಂದು ದೋಷಾರೋಪಗಳ ಕುರಿತು ನ್ಯಾಯಾಧೀಶರು ಪ್ರಶ್ನಿಸಲಿದ್ದಾರೆ. The Subtle Art of Intraday Trading: A Complete Handbook on How to Make Quick Profit from Day Trading in Stocks (English) Paperback – 25 March 2024
ಶಿಕ್ಷೆ ಪ್ರಕಟವಾಗುವ ಸನ್ನಿಹಿತದಲ್ಲಿ ಪ್ರಕರಣದ ಹಂತವು ನಿರ್ಣಾಯಕ ಘಟ್ಟ ತಲುಪಿದೆ. ದರ್ಶನ್ ಹಾಗೂ ಇನ್ನುಳಿದ ಆರೋಪಿಗಳಿಗೆ ಇಂದು ಪ್ರಮುಖ ದಿನವಾಗಿದ್ದು, ತಪ್ಪೊಪ್ಪಿಕೊಂಡರೆ ಶಿಕ್ಷೆ ಘೋಷಣೆಯಾಗಲಿದ್ದು, ಒಂದು ವೇಳೆ ಆರೋಪವನ್ನು ಸುಳ್ಳೆಂದು ನಿರಾಕರಿಸಿದಲ್ಲಿ, ವಿಚಾರಣೆ ಮುಂದುವರೆಯಲಿದೆ. ಕೋರ್ಟ್‌ನತ್ತ ಸಾಗಿರುವ ಆರೋಪಿಗಳು ಇನ್ನೇನು ವಿಚಾರಣೆಗೆ ಮುಂದಾಗಲಿದ್ದಾರೆ ಎಂಬ ಮಾಹಿತಿ ತಿಳಿಸಲಾಗಿದೆ.
ವಿಚಾರಣೆ ನ. 10ಕ್ಕೆ ಮುಂದೂಡಿದ ಕೋರ್ಟ್ -
ಪ್ರಕರಣದ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದ 64ನೇ ಸಿಸಿಎಚ್ ಕೋರ್ಟ್, ಅಂದೇ ಚಾರ್ಚ್ ಫ್ರೇಮ್ ಆಗಲಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ - ದರ್ಶನ್ ಗ್ಯಾಂಗ್ ಭವಿಷ್ಯ