Skip to main content
ವಿಡಿಯೋ
1/3
politics

ಶಾಸಕರಿಗೆ ಸಿಂಗಲ್, ಡಬಲ್ ಮಂಚ ಸೇರಿ 750 ಪೀಠೋಪಕರಣ; ಟೆಂಡರ್ ಇಲ್ಲದೇ ₹5.5 ಕೋಟಿ ವೆಚ್ಚ!

By Pavitra Ganapathi Baradavalli
ಶಾಸಕರಿಗೆ ಸಿಂಗಲ್, ಡಬಲ್ ಮಂಚ ಸೇರಿ 750 ಪೀಠೋಪಕರಣ; ಟೆಂಡರ್ ಇಲ್ಲದೇ ₹5.5 ಕೋಟಿ ವೆಚ್ಚ!

ರಾಜ್ಯದ ಶಾಸಕರ ವಸತಿ ನಿಲಯಗಳು ಮತ್ತು ಕಚೇರಿಗಳಿಗಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳನ್ನು ಟೆಂಡರ್ ಪ್ರಕ್ರಿಯೆ ಅನುಸರಿಸದೆ ಖರೀದಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಬೆಂಗಳೂರು: ರಾಜ್ಯದ ಶಾಸಕರ ವಸತಿ ನಿಲಯಗಳು ಮತ್ತು ಕಚೇರಿಗಳಿಗಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳನ್ನು ಟೆಂಡರ್ ಪ್ರಕ್ರಿಯೆ ಅನುಸರಿಸದೆ ಖರೀದಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.ಇದನ್ನೂ ಓದಿ: ಕಡ್ಡಾಯ ರಜೆ ಕೊಡಿ - ವೋಟ್ ಹಾಕಲಿ - DCM ಡಿ.ಕೆ‌.ಶಿವಕುಮಾರ್ ..!

ಶಾಸಕರಿಗೆ ಸಿಂಗಲ್ ಮತ್ತು ಡಬಲ್ ಮಂಚಗಳು (ಬೆಡ್ಗಳು) ಸೇರಿದಂತೆ ಒಟ್ಟು 750 ಪೀಠೋಪಕರಣಗಳ ಖರೀದಿಗೆ ಸುಮಾರು 5.5 ಕೋಟಿ ರೂಪಾಯಿಗಳಷ್ಟು ವೆಚ್ಚ ಮಾಡಲಾಗಿದೆ ಎಂದು ವರದಿಯಾಗಿದೆ. ಖರೀದಿಯು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯಿದೆ (KTPP Act) ನಿಯಮಗಳನ್ನು ಉಲ್ಲಂಘಿಸಿದೆ ಎಂದು ಹೇಳಲಾಗಿದೆ.ಇದನ್ನೂ ಓದಿ: ಒಳ ಮೀಸಲಾತಿ ನಿರ್ಣಯಕ್ಕೆ ಆಕ್ಷೇಪ: ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ ಹೈಕೋರ್ಟ್‌

ಕೇಂದ್ರ ಸರ್ಕಾರದ ಜಿಇಎಂ (GeM) ಪೋರ್ಟಲ್ ಅಥವಾ ಕಡ್ಡಾಯ ಟೆಂಡರ್ ಕರೆಯುವ ಪ್ರಕ್ರಿಯೆಗಳನ್ನು ಪಾಲಿಸದೆ, ನೇರವಾಗಿ ಪೀಠೋಪಕರಣಗಳನ್ನು ಖರೀದಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಸರ್ಕಾರದ ಕ್ರಮವು ಸಾರ್ವಜನಿಕ ಹಣದ ದುರುಪಯೋಗ ಮತ್ತು ಪಾರದರ್ಶಕತೆಯ ಕೊರತೆಯನ್ನು ಎತ್ತಿ ತೋರಿಸಿದೆ.ಇದನ್ನೂ ಓದಿ: ಕಲ್ಯಾಣ ಕರ್ನಾಟಕದಲ್ಲಿ ಶಕ್ತಿ ಯೋಜನೆ ಪ್ರಯೋಜನ ಶೂನ್ಯ: ಪ್ರಿಯಾಂಕ್ ಖರ್ಗೆ ವಿರುದ್ಧ ಆರ್. ಅಶೋಕ್ ವಾಗ್ದಾಳಿ!

ವಿರೋಧ ಪಕ್ಷಗಳು ಖರೀದಿಯ ಬಗ್ಗೆ ತನಿಖೆಗೆ ಒತ್ತಾಯಿಸಿವೆ. ಹಣಕಾಸು ಇಲಾಖೆ ಅಧಿಕಾರಿಗಳು ಕುರಿತು ಶೀಘ್ರವೇ ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ.SGF11 Women's Kanjivaram Pure Soft Silk Saree With Unstitched Blouse Piece