Skip to main content
ವಿಡಿಯೋ
1/3
general

ಕಬ್ಬು ದರ ನಿಗದಿ ರೈತ ಹೋರಾಟ ತೀವ್ರ: ವಿಜಯಪುರ, ಬೆಳಗಾವಿಯಲ್ಲಿ ಪ್ರತಿಭಟನೆ; ಗೃಹ ಸಚಿವ ಪರಮೇಶ್ವರ್ ಏನಂತಾರೆ?!

By Shravanthi R
ಕಬ್ಬು ದರ ನಿಗದಿ ರೈತ ಹೋರಾಟ ತೀವ್ರ: ವಿಜಯಪುರ, ಬೆಳಗಾವಿಯಲ್ಲಿ ಪ್ರತಿಭಟನೆ; ಗೃಹ ಸಚಿವ ಪರಮೇಶ್ವರ್ ಏನಂತಾರೆ?!

ರಾಜ್ಯದಲ್ಲಿ ಕಬ್ಬು ಬೆಳೆದರ ನಿಗದಿಪಡಿಸಿದ ಸರ್ಕಾರದ ವಿರುದ್ದ ಹೋರಾಟಕ್ಕೆ ಮುಂದಾಗಿರುವ ರೈತರು, ಕಳೆದ ಐದು ದಿನಗಳಿಂದ ಸತತ ಹೋರಾಟ, ಸತ್ಯಾಗ್ರಹ ಹಾಗೂ ಅಹೋರಾತ್ರಿ ಧರಣಿ ನಡೆಸಿರುವುದು ತೀವ್ರಗೊಂಡಿದೆ. ಇನ್ನೊಂದೆಡೆ, ಹೋರಾಟಕ್ಕೆ ಬಿಜೆಪಿ ನಾಯಕರ ಬೆಂಬಲವೂ ದೊರೆತಿದೆ.

ರಾಜ್ಯದಲ್ಲಿ ಕಬ್ಬು ಬೆಳೆಗಾರರ ಆಕ್ರೋಶಕ್ಕೆ ಸರ್ಕಾರ ತಡಬಡಿಸಿದೆ. ಕಬ್ಬಿನ ಬೆಲೆ ನಿಗದಿ ಕುರಿತು ರಾಜ್ಯ ಸರ್ಕಾರದ ವಿರುದ್ಧ ರೈತರು ದಂಗೆಗೆದ್ದಿದ್ದಾರೆ. ಅವರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿ ಟನ್‌ ಕಬ್ಬಿಗೆ ₹3,500 ದರ ನಿಗದಿ ಮಾಡುವಂತೆ, ಆಗ್ರಹಿಸಿ ಕಳೆದ ಕೆಲ ದಿನಗಳಿಂದ ಹೋರಾಟ ನಡೆಸಿದ್ದಾರೆ. ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ರೈತರು ಬೃಹತ್ ಪ್ರತಿಭಟನೆಗಳನ್ನು ಕೈಗೊಂಡಿದ್ದಾರೆ.

ಬೆಳಗಾವಿ ಮತ್ತು ಚಿಕ್ಕೋಡಿ ಪ್ರತಿಭಟನೆ: ಬೆಳಗಾವಿ ಮತ್ತು ಚಿಕ್ಕೋಡಿ ಭಾಗಗಳಲ್ಲಿಯೂ ಪ್ರತಿಭಟನೆಗಳು ತೀವ್ರಗೊಂಡಿದ್ದು, ಹುಕ್ಕೇರಿ ಮತ್ತು ಅಥಣಿ ಪಟ್ಟಣಗಳಲ್ಲಿ ಬಂದ್‌ಗೆ ಕರೆ ನೀಡಲಾಗಿದೆ ಎನ್ನಲಾಗಿದೆ. 51 Trading Strategies: Backtested Swing, Intraday, Positional, Scalping & Option Trading Strategies | Advanced Strategies for F&O and Cash Market ... your Trades with 51 Time tested Strategies Hardcover – 1 January 2024

ರಾಜ್ಯ ರೈತ ಸಂಘಟನೆ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ವಿಜಯಪುರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಅಲ್ಲಿನ ಗಾಂಧಿ ಚೌಕದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರೈತರು ರ್ಯಾಲಿ ನಡೆಸಿ, ತಮ್ಮ ಬೇಡಿಕೆಗಳನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ, ಸ್ಥಳದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನೂ ಹಮ್ಮಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಗೃಹ ಸಚಿವರ ಮಧ್ಯಪ್ರವೇಶ -

ರೈತರ ಹೋರಾಟದ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಕಬ್ಬು ಬೆಳೆಗಾರರ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಸಚಿವರೊಂದಿಗೆ ಮಾತುಕತೆ: "ಈಗಾಗಲೇ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರೊಂದಿಗೆ ಮಾತನಾಡಲಾಗಿದೆ. ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಆಲಿಸಿ, ಅವರ ಆದ್ಯತೆ ಮೇಲೆ ಬಗೆಹರಿಸಲು ಅವರಿಗೆ ಸೂಚನೆ ನೀಡಲಾಗಿದೆ," ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಹೋರಾಟಕ್ಕೆ ಬಿಜೆಪಿಗರ ಬೆಂಬಲ -

ರೈತರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಅವರು ಭರವಸೆ ನೀಡಿರುವ ಮಧ್ಯೆ, ಬಿಜೆಪಿ ನಾಯಕ ಬಿ. ವೈ ವಿಜಯೇಂದ್ರ ಇದಕ್ಕೆ ಸೆಡ್ಡು ಹೊಡೆದು ನಿಂತು, ಅನ್ನದಾತರ ಪರವಾಗಿ ನಿಂತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಸಿನಿಮಾದಿಂದ ಸಮಾಜಕ್ಕೆ ಬೆಳಕು ಚೆಲ್ಲಬೇಕು: ನಟ ದರ್ಶನ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರಾ ಸಿಎಂ ಸಿದ್ದರಾಮಯ್ಯ?!