Skip to main content
ವಿಡಿಯೋ
1/3
general

ದಾವಣಗೆರೆಯ ಎಸ್‌ಪಿ ಕಚೇರಿ ಎದುರು ವ್ಯಕ್ತಿ ಆತ್ಮಹ**ತ್ಯೆಗೆ ಯತ್ನ: ಪೊಲೀಸರೇ ಕಾರಣ ಎಂದ ಕುಟುಂಬಸ್ಥರು - ಏನಿದು ಪ್ರಕರಣ?!

By Shravanthi R
ದಾವಣಗೆರೆಯ ಎಸ್‌ಪಿ ಕಚೇರಿ ಎದುರು ವ್ಯಕ್ತಿ ಆತ್ಮಹ**ತ್ಯೆಗೆ ಯತ್ನ: ಪೊಲೀಸರೇ ಕಾರಣ ಎಂದ ಕುಟುಂಬಸ್ಥರು - ಏನಿದು ಪ್ರಕರಣ?!

ಜಿಎಂಸಿ ಫರ್ಟಿಲೈಸರ್ಸ್‌ ಮಾಲೀಕ ಶಿವಲಿಂಗಯ್ಯ ಎಂಬುವವರು, ದಾವಣಗೆರೆ ಜಿಲ್ಲಾ ಎಸ್ಪಿ ಕಚೇರಿ ಆವರಣದ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಷ ಸೇವನೆ ಮಾಡಿ, ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿದ್ದಾರೆ ಎಂದು ಮಾಹಿತಿ ತಿಳಿಸಲಾಗಿದೆ.

ದಾವಣಗೆರೆ: ವಂಚನೆ ಪ್ರಕರಣವೊಂದರಲ್ಲಿ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಹಾಗೂ ಸಹಕರಿಸಿಲ್ಲ ಎಂದು ಆರೋಪಿಸಿ, ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕಚೇರಿ ಎದುರೇ ಖಾಸಗಿ ಸಂಸ್ಥೆಯ ಮಾಲೀಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಪ್ರಕರಣದ ಹಿನ್ನೆಲೆ: ಶಿವಲಿಂಗಯ್ಯ ಅವರು ತಮ್ಮ ಸಂಸ್ಥೆಗೆ ರೈತರಿಂದ ಬೆಳೆ ಖರೀದಿಸಿದ್ದರು. ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಪರಿಚಯಸ್ಥರು ಬ್ಯಾಂಕ್‌ನಿಂದ 55 ಕೋಟಿ ರೂ. ಹಣವನ್ನು ವಂಚಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ರೈತರನ್ನು ಎದುರು ಹಾಕಿಕೊಳ್ಳಲಾಗದೇ, ಉತ್ತರಿಸಲಾಗದೇ ಈ ನಿರ್ಣಯ ಕೈಗೊಂಡಿದ್ದಾರೆ ಎನ್ನಲಾಗಿದೆ. ವಂಚನೆ ಕುರಿತು 2022 ರಲ್ಲಿ ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. The Intelligent Investor : The Definitive Book on Value Investing (Third Edition) Paperback – 22 October 2024

ಈ ಬಗ್ಗೆ ಪೋಲಿಸರು ಕಠಿಣ ಕ್ರಮ ಕೈಗೊಳ್ಳುವಲ್ಲಿ ಸಹಕರಿಸಲಿಲ್ಲ ಎಂದು ಆರೋಪಿಸಲಾಗಿದೆ ಎನ್ನಲಾಗಿದೆ. ವಂಚನೆ ಪ್ರಕರಣದ ಕುರಿತು ಪೊಲೀಸರು ಸರಿಯಾದ ತನಿಖೆ ನಡೆಸಿಲ್ಲ ಮತ್ತು ನಮಗೆ ನ್ಯಾಯ ಒದಗಿಸಲು ಮುಂದಾಗಿಲ್ಲದ, ಹಾಗೂ ರೈತರಿಂದ ಹಣ ಹಿಂಪಡೆವ ಒತ್ತಾಯ ಕೇಳಿಬಂದ ಕಾರಣ ತೀವ್ರವಾಗಿ ಮನನೊಂದು ಅವರು ಎಸ್ಪಿ ಕಚೇರಿ ಎದುರು ವಿಷ ಸೇವಿಸಿದ್ದಾರೆ ಎಂದು ತಿಳಿಸಲಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ, ಅವರು ಚಿಕಿತ್ಸೆಗೆ ಒಳಗಾಗಿದ್ದು, ಆತ್ಮಹತ್ಯೆಗೆ ಯತ್ನಿಸಿದ ಬೆನ್ನಲ್ಲೇ, ಸ್ಥಳದಲ್ಲಿದ್ದ ಪೊಲೀಸರು ಶಿವಲಿಂಗಯ್ಯ ಅವರನ್ನು, ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಕುಟುಂಬಸ್ಥರ ಆಕ್ರೋಶ -

ಆಸ್ಪತ್ರೆಯಲ್ಲಿ ಶಿವಲಿಂಗಯ್ಯ ಮನೆಯವರು, "ನಮಗೆ ನ್ಯಾಯ ಸಿಗುವಲ್ಲಿ ಪೊಲೀಸರೇ ವಿಳಂಬ ಮಾಡಿದ್ದಾರೆ. ಪೊಲೀಸರೇ ಈ ಆತ್ಮಹತ್ಯೆ ಪ್ರಯತ್ನಕ್ಕೆ ಕಾರಣ," ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕಬ್ಬು ದರ ನಿಗದಿ ರೈತ ಹೋರಾಟ ತೀವ್ರ: ವಿಜಯಪುರ, ಬೆಳಗಾವಿಯಲ್ಲಿ ಪ್ರತಿಭಟನೆ; ಗೃಹ ಸಚಿವ ಪರಮೇಶ್ವರ್ ಏನಂತಾರೆ?!