Skip to main content
ವಿಡಿಯೋ
1/3
general

ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿ: ರಿಯಾಲಿಟಿ ಶೋ ಡ್ಯಾನ್ಸರ್ ಸುಧೀಂದ್ರ ದುರಂತ ಸಾ**ವು!

By Shravanthi R
ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿ: ರಿಯಾಲಿಟಿ ಶೋ ಡ್ಯಾನ್ಸರ್ ಸುಧೀಂದ್ರ ದುರಂತ ಸಾ**ವು!

ರಸ್ತೆ ಮಧ್ಯೆ ಕಾರು ಕೆಟ್ಟು ನಿಂತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಕ್ಯಾಂಟರ್‌ ಡಿಕ್ಕಿ ಹೊಡೆದಿದೆ. ತೀವ್ರ ರಕ್ತಸ್ರಾವದಿಂದ ಡ್ಯಾನ್ಸರ್‌ ಸುಧೀಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ವರದಿಯಾಗಿದೆ.

ನೆಲಮಂಗಲದ ತ್ಯಾಮಗೊಂಡ್ಲು ನಿವಾಸಿ, ಸುಧೀಂದ್ರ ಡ್ಯಾನ್ಸರ್‌ ಸೋಮವಾರವಷ್ಟೇ ತಮ್ಮ ಹೊಸ ಕಾರು ಖರೀದಿಸಿದ್ದರು. ಇಂದು ತಮ್ಮ ಕಾರು ರಸ್ತೆ ಮಧ್ಯೆ ಕೆಟ್ಟು ನಿಂತಿದ್ದ ವೇಳೆ ಕ್ಯಾಂಟರ್ ವಾಹನವೊಂದು ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ, ಅವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಾಬಸ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪೆಮ್ಮನಹಳ್ಳಿ ಬಳಿ ನಡೆದಿದೆ.

ಸುಧೀಂದ್ರ ಅವರು ಪ್ರಯಾಣಿಸುತ್ತಿದ್ದ ಮಾರುತಿ ಸುಜುಕಿ ಎಕೋ ಕಾರು ರಸ್ತೆಯಲ್ಲಿ ಕೆಟ್ಟು ನಿಂತಿತ್ತು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕ್ಯಾಂಟರ್, ನಿಂತಿದ್ದ ಕಾರಿಗೆ ತೀವ್ರ ರಭಸದಿಂದ ಡಿಕ್ಕಿ ಹೊಡೆದಿದೆ. ಇದರಿಂದಾಗಿ, ಗುದ್ದಿದ ವೇಗದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಸುದ್ದಿ ತಿಳಿದುಬಂದಿದೆ.

ಒಂದು ದಿನದ ಹಿಂದಷ್ಟೇ ಹೊಸ ಕಾರು ಖರೀದಿ!

ದುರ್ದೈವದ ಸಂಗತಿಯೆಂದರೆ, ಸುಧೀಂದ್ರ ಅವರು ಸೋಮವಾರವಷ್ಟೇ ಈ ಹೊಸ ಕಾರು ಡೆಲಿವರಿ ಪಡೆದಿದ್ದರು ಎನ್ನಲಾಗಿದೆ. ಇಂದು ಕಾರು ಕೆಟ್ಟು ನಿಂತ ಕಾರಣದಿಂದ ಪರಿಶೀಲಿಸುವ ವೇಳೆ ಆದ ಈ ಭೀಕರ ಅಪಘಾತದಿಂದಾಗಿ ಅವರ ಜೀವನವೇ ಅಂತ್ಯಗೊಂಡಿದೆ. Warren Buffett and the Interpretation of Financial Statements Paperback – 6 January 2011

ಅವರು ಝೀ ಕನ್ನಡದ ಡಾನ್ಸ್‌ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಜನಪ್ರಿಯತೆ ಗಳಿಸಿದ್ದರು. ಡ್ಯಾನ್ಸ್ ಕ್ಲಾಸ್‌ಗಳು, ಫ್ಲವರ್ ಡೆಕೋರೇಷನ್ ಮತ್ತು ಇವೆಂಟ್ ಮ್ಯಾನೇಜ್‌ಮೆಂಟ್ ನಡೆಸಿ ಜೀವನ ಸಾಗಿಸುತ್ತಿದ್ದರು. ಅನೇಕ ಯುವಕ-ಯುವತಿಯರಿಗೆ ಮತ್ತು ಮಕ್ಕಳಿಗೆ ನೃತ್ಯ ತರಬೇತಿಯನ್ನು ನೀಡುವ ಮೂಲಕ ಕಲಾವಿದರಾಗಿ ಗುರುತಿಸಿಕೊಂಡಿದ್ದರು ಎಂದು ಮಾಹಿತಿ ಒದಗಿಬಂದಿದೆ. ಇದನ್ನೂ ಓದಿ: ಕರ್ನಾಟಕ ಚಲನಚಿತ್ರ ಪ್ರಶಸ್ತಿ ಪ್ರದಾನ - ಪ್ರಮುಖ ಸಿನಿಮಾ ತಾರೆಯರ ಭಾಗಿ; ಇಲ್ಲಿದೆ ಕಾರ್ಯಕ್ರಮದ ಹೈಲೈಟ್ಸ್‌