ಕಾಂಗ್ರೆಸ್ ನಾಯಕ ಮತ್ತು ಮಹಾಘಟಬಂಧನ್‌ನ ಪ್ರಮುಖ ಪ್ರಚಾರಕ ರಾಹುಲ್ ಗಾಂಧಿ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮೇಲೆ ಹೊಸ ವಾಗ್ದಾಳಿಯನ್ನು ನಡೆಸಿದ್ದು, ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮತ್ತು ಯುವಕರ ಭವಿಷ್ಯದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
ರಾಹುಲ್ ಗಾಂಧಿ ಅವರು, ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ದೊಡ್ಡ ಪ್ರಮಾಣದ ಕಾರ್ಖಾನೆಗಳು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ವಿಫಲರಾಗಿದ್ದಾರೆ. ಇದರ ಪರಿಣಾಮವಾಗಿ, ಬಿಹಾರದ ಯುವಕರು ಮತ್ತು ವಿದ್ಯಾವಂತರು ಇತರ ರಾಜ್ಯಗಳಿಗೆ ವಲಸೆ ಹೋಗಲು ಮತ್ತು ಕಡಿಮೆ ವೇತನದ ಕಾರ್ಮಿಕರಾಗಿ ಕೆಲಸ ಮಾಡಲು ಒತ್ತಾಯಿಸಲ್ಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.Miraggio Rosalind Tote Handbag for Women with Detachable Sling Strap & Top Handles | Fits upto 13" Laptop | Tote Bags for Women For Office Use, Work
ಅವರು ನಿತೀಶ್ ಕುಮಾರ್ ಅವರ ಸುದೀರ್ಘ ಆಡಳಿತವನ್ನು ಟೀಕಿಸಿ, ಬಿಹಾರದ ಯುವಕರ ಭವಿಷ್ಯವನ್ನು ಉಜ್ವಲಗೊಳಿಸುವ ಬದಲು, ರಾಜ್ಯದ ಯುವಶಕ್ತಿಯನ್ನು ಕಾರ್ಮಿಕರನ್ನಾಗಿ ಮಾಡಲಾಗಿದೆ. ಈ ಸರ್ಕಾರವು ಯುವಕರಿಗೆ ಉದ್ಯೋಗ ನೀಡುವ ಬದಲು, ಅವರನ್ನು 'ಕೂಲಿಗಳನ್ನಾಗಿ' ಪರಿವರ್ತಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದನ್ನು ಓದಿ: ಹಿರಿಯ ನಾಗರಿಕರ ಖಾತೆಗೆ ವಂಚನೆ - ಡಿಜಿಟಲ್ ದೋಖಾ ಹೆಚ್ಚಾಗಿದ್ಯಾಕೆ ಗೊತ್ತಾ ?!.
ಇದು ಬಿಹಾರ ಚುನಾವಣೆಯ ಪ್ರಮುಖ ವಿಷಯವಾದ ಉದ್ಯೋಗ ಮತ್ತು ವಲಸೆ ಸಮಸ್ಯೆಯನ್ನು ಕೇಂದ್ರೀಕರಿಸಿ, ಆಡಳಿತಾರೂಢ NDA ಮೈತ್ರಿಕೂಟದ ವಿರುದ್ಧ ಮಹಾಘಟಬಂಧನ್ ನಡೆಸಿದ ತೀವ್ರ ವಾಗ್ದಾಳಿಯಾಗಿದೆ. ರಾಹುಲ್ ಗಾಂಧಿಯವರ ಈ ಹೇಳಿಕೆಯು ನಿರುದ್ಯೋಗ ಮತ್ತು ಅಭಿವೃದ್ಧಿ ಕುಂಠಿತದ ವಿಷಯವನ್ನು ಮತ್ತಷ್ಟು ಮುನ್ನೆಡೆಗೆ ತಂದಿದೆ.ಇದನ್ನು ಓದಿ: ಮಂಡ್ಯ ಡಿಸಿ ಕಚೇರಿ ಎದುರೇ ಬೆಂಕಿ ಹಚ್ಚಿಕೊಂಡ ರೈತ ಆತ್ಮಹ**ತ್ಯೆಗೆ ಯತ್ನ: ಭೂ ಸಮಸ್ಯೆ ಪರಿಹಾರವಾಗದಕ್ಕೆ ಮನನೊಂದು ಕೃತ್ಯ!