ಬೆಂಗಳೂರು: 2018 ರಲ್ಲಿ ನಡೆಸಿದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ವಿಶೇಷತೆಯನ್ನು ಗಳಿಸಿಕೊಂಡಿದೆ. ಕ್ಷುಲ್ಲಕ ಕಾರಣಕ್ಕೆ ಕೊಂದ ಕೊಲೆಗಡುಕರಿಗೆ ನ್ಯಾಯಾಲಯವು ಮೃತನ ಹುಟ್ಟುಹಬ್ಬ ದಿವಸವೇ ಕಠಿಣ ಶಿಕ್ಷೆ ವಿಧಿಸಿ ನ್ಯಾಯ ಒದಗಿಸಿದೆ. ಸಿದ್ಧಾರ್ಥ ಎಂಬಾತನನ್ನು ಹತ್ಯೆಗೈದ ಇಬ್ಬರು ಅಪರಾಧಿಗಳಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ವಿಶೇಷವೆಂದರೆ, ಹತ್ಯೆಯಾದ ಆತನ ಹುಟ್ಟುಹಬ್ಬದ ದಿನವೇ ನ್ಯಾಯಾಲಯ ಈ ತೀರ್ಪು ನೀಡಿದೆ. ಈ ಮೂಲಕ ಮೃತನ ತಂದೆ ನ್ಯಾಯಕ್ಕೆ ಸಂದ ಜಯವಿದು ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಅಕ್ಟೋಬರ್ 24 ರಂದು, CCH 59ನೇ ಕೋರ್ಟ್ ಈ ತೀರ್ಪು ಪ್ರಕಟಿಸಿದೆ. ಹಂತಕ ಆರೋಪಿಗಳಾದ ಗಿರೀಶ್ ಮತ್ತು ಮಹೇಶ್ ಅವರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಪ್ರಕರಣದ ಹಿನ್ನಲೆಯನ್ನು ನೋಡುವುದಾದರೆ, 2018 ರ ಜುಲೈನಲ್ಲಿ ಪಾಟ್ನಾ ಮೂಲದ ಸಿದ್ಧಾರ್ಥನನ್ನು ಬೆಂಗಳೂರಿನಲ್ಲಿ ಕೊಲೆ ಮಾಡಲಾಗಿತ್ತು. ಬೈಕ್ ಟಚ್ ಆದ ಒಂದು ಕ್ಷುಲ್ಲಕ ವಿಚಾರವೇ ವಿಕೋಪಕ್ಕೆ ತಿರುಗಿ ಗಲಾಟೆಯಾಗಿತ್ತು. ಈ ವೇಳೆ, ಆರೋಪಿಗಳು ಸಿದ್ಧಾರ್ಥನ ತಲೆ ಭಾಗಕ್ಕೆ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿ: ರಿಯಾಲಿಟಿ ಶೋ ಡ್ಯಾನ್ಸರ್ ಸುಧೀಂದ್ರ ದುರಂತ ಸಾ**ವು!
ಪ್ರಕರಣದ ಕುರಿತ ತನಿಖೆ ಹಾಗೂ ವಿಚಾರಣೆಗೆ ಸಂಬಂಧಿಸಿದಂತೆ, ಮೈಕೋ ಲೇಔಟ್ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿಗಳಾದ ಗಿರೀಶ್ ಹಾಗೂ ಮಹೇಶ್‌ನನ್ನು ಬಂಧಿಸಿದ್ದರು. ಪೊಲೀಸರು ಸಮರ್ಪಕವಾಗಿ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು ಎನ್ನಲಾಗಿದೆ. ಈ ಬೆಳವಣಿಗೆ ನಂತರ, ಹತ್ಯೆಯಾದ ಸಿದ್ದಾರ್ಥ್‌ನ ತಂದೆಯ ಪ್ರತಿಕ್ರಿಯೆ ನೀಡಿದ್ದು, ಇದು ಆತನ ಆತ್ಮಕ್ಕೆ ಹಾಗೂ ಅವನಿಗಾದ ಅನ್ಯಾಯಕ್ಕೆ ಸಂದ ಸತ್ಕಾರ ಎಂದು ಹಂಚಿಕೊಂಡಿದ್ದಾರೆ. Futures & Options Blueprint: Beginner’s Guide to Derivatives | 15+ Option Trading Strategies, Calls, Puts, Option Chain, Greeks, Payoff Charts & Open Interest Explained | Zebra Learn Books Hardcover – 28 February 2023
ನ್ಯಾಯಾಲಯದ ತೀರ್ಪಿನ ನಂತರ ಪ್ರತಿಕ್ರಿಯಿಸಿದ ಮೃತನ ತಂದೆ ಕೌಶಲೇಂದ್ರ ಪಾಂಡೆ, "ಮಗನಿಗೆ ನ್ಯಾಯ ಸಿಕ್ಕಿದೆ. ಕೊಲೆಗಾರರಿಗೆ ತಕ್ಕ ಶಾಸ್ತಿಯಾಗಿದೆ," ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಮಗನ ಸಾವಿನ ನೋವಿಗೆ ಈಗ ಉತ್ತರ ಸಿಕ್ಕಿದ್ದು, ಈ ನಿರಾಳತೆಯ ಸಂತೋಷದಿಂದ ಅವರ ಕಣ್ಣುಗಳು ಒದ್ದೆಯಾಗಿದ್ದವು. ಈ ಸಂಬಂಧ ಪೋಲಿಸರ ತಂಡಕ್ಕೆ ಹಾಗೂ ನ್ಯಾಯಾಲಯಕ್ಕೆ ಧನ್ಯವಾದ ತಿಳಿಸಿದ್ದಾರೆ ಮತ್ತು ಸಂತೋಷದಿಂದ ಮನೆಗೆ ಲೈಟಿಂಗ್ ಹಾಕಿ ಸಂಭ್ರಮಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮಂಡ್ಯ ಡಿಸಿ ಕಚೇರಿ ಎದುರೇ ಬೆಂಕಿ ಹಚ್ಚಿಕೊಂಡ ರೈತ ಆತ್ಮಹ**ತ್ಯೆಗೆ ಯತ್ನ: ಭೂ ಸಮಸ್ಯೆ ಪರಿಹಾರವಾಗದಕ್ಕೆ ಮನನೊಂದು ಕೃತ್ಯ!