Skip to main content
ವಿಡಿಯೋ
1/3
crime

ಬಂದೂಕು ಸಮೇತ ನೇರ ಮನೆಗೆ ನುಗ್ಗಿ, ಭೀಕರವಾಗಿ ಕೊ**ಲೆಗೈದು ಹಂತಕರು ಪರಾರಿ!

By Shravanthi R
ಬಂದೂಕು ಸಮೇತ ನೇರ ಮನೆಗೆ ನುಗ್ಗಿ, ಭೀಕರವಾಗಿ ಕೊ**ಲೆಗೈದು ಹಂತಕರು ಪರಾರಿ!

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕಿತ್ತಗಾನಹಳ್ಳಿಯಲ್ಲಿ ಹಾಡಹಗಲಲ್ಲೇ ಮನೆಗೆ ನುಗ್ಗಿ ಕತ್ತು ಕುಯ್ದು ವ್ಯಕ್ತಿಯ ಕೊಲೆಗೈದಿರುವ ಘಟನೆ ನಡೆದಿದೆ. ಮಾರಕಾಸ್ತ್ರಗಳು ಹಾಗೂ ಏರ್ ಗನ್ ಬಳಸಿ ಹಂತಕರು ಬರ್ಬರವಾಗಿ ಹತ್ಯೆಗೈದಿರುವ ವಿಕೃತ ಘಟನೆ ವರದಿಯಾಗಿದೆ.

ತಮಿಳುನಾಡು ಗಡಿಭಾಗದ ಆನೇಕಲ್ ತಾಲೂಕಿನ ಕಿತ್ತಗಾನಹಳ್ಳಿಯಲ್ಲಿ ಹಾಡಹಗಲಲ್ಲೇ ಮನೆಗೆ ನುಗ್ಗಿ ಕತ್ತು ಕೊಯ್ದು ವ್ಯಕ್ತಿಯ ಹತ್ಯೆಗೈದಿರುವ ಘಟನೆ ನಡೆದಿದೆ. ಹರಿತವಾದ ಆಯುಧದಿಂದ ಹಾಗೂ ಏರ್ ಗನ್ ಬಳಸಿ ಹಂತಕರು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. 

ಕೊಲೆಗೈದ ತಕ್ಷಣವೇ, ಸ್ಥಳದಿಂದ ಪರಾರಿಯಾಗಿರುವ ಹಂತಕರು ಉದ್ದೇಶಪೂರಿತವಾಗಿಯೇ ಈ ಕೃತ್ಯ ಎಸಗಿದ್ದಾರೆಯೇ ಎಂದು ತನಿಖೆ ನಡೆಸಲಾಗಿದೆ ಎಂದು ತಿಳಿಸಲಾಗಿದೆ. ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್‌ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕಿತ್ತಗಾನಹಳ್ಳಿಯಲ್ಲಿ ಪ್ರಾವಿಷನ್ ಸ್ಟೋರ್ ಮಾಲೀಕರಾಗಿದ್ದ ಮಾದೇಶ್ (40) ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೊಳಗಾಗಿರುವ ವ್ಯಕ್ತಿ. ಚಾಕುವಿನಿಂದ ಇರಿದು ಕತ್ತು ಕೊಯ್ದ ಹಂತಕರು ಇಂದು ಹಿಂಸಿಸಿ ಕೊಲ್ಲಲ್ಪಟ್ಟಿದಾಗಿರುವುದಾಗಿ ಮಾಹಿತಿ ತಿಳಿಸಲಾಗಿದೆ. ಘಟನಾ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.  The Psychology of Money Paperback – 1 September 2020

ಘಟನೆ ಬಗ್ಗೆ ಪಕ್ಕದ ಮನೆಯ ನಿವಾಸಿ ಇದನ್ನು ನೋಡಿ ಮಾಹಿತಿ ತಿಳಿಸಿದ್ದಾರೆ. ಆರೋಪಿಯನ್ನ ಹಿಡಿಯಲು ಮುಂದಾದ ವೇಳೆ ಬೈಕ್ ಅಡಗಟ್ಟುವಾಗ ಅವರ ಮೇಲೂ ಹಲ್ಲೆ ಮಾಡಿ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಸ್ಥಳದಲ್ಲಿ ಬ್ಯಾಗ್, ಹೆಲ್ಮೆಟ್, ಬಂದೂಕು ಮತ್ತು ಮೆಟಲ್ ಡಿಟೆಕ್ಟರ್, ಟಾರ್ಚ್ ಇತ್ತೆಂದು ತಿಳಿಸಲಾಗಿದೆ. ಮನೆಯಲ್ಲಿ 2 ಲಕ್ಷ ರೂ ನಗದು ಹಣ ಇತ್ತು, ಆದರೆ ಅದನ್ನ ತೆಗೆದುಕೊಂಡು ಹೋಗಿಲ್ಲ ಎನ್ನಲಾಗಿದೆ.

ತಮಿಳುನಾಡಿನ ಡೆಂಕಣಿಕೋಟೆಯ ಬಾರಂದೂರು ನಿವಾಸಿಯಾದ ಮಾದೇಶ್, ಕಳೆದ 15 ವರ್ಷಗಳಿಂದ ಕಾಚನಾಯಕನಹಳ್ಳಿಯಲ್ಲಿ ವಾಸವಿದ್ದರು. ಸಿಗರೇಟ್ ವ್ಯಾಪಾರ ಹಾಗೂ ಪ್ರಾವಿಷನ್ ಸ್ಟೋರ್ ಇಟ್ಟುಕೊಂಡಿದ್ದರು. ಊರಿನಲ್ಲಿ ಜಮೀನು ಮಾರಾಟ ಮಾಡಿ, ಹೊಸ ಮನೆ ಕಟ್ಟುತ್ತಿದ್ದರು ಎನ್ನಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆಗಾಗಿ ಎಸಿಪಿ ಸತೀಶ್‌ ನೇತೃತ್ವದಲ್ಲಿ, ಮೂರು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಜೀವಾವಧಿ ಶಿಕ್ಷೆ - ಮಗನ ಹುಟ್ಟುಹಬ್ಬದಂದೇ ಕೊ**ಲೆಗಾರರಿಗೆ ತಕ್ಕ ಶಾಸ್ತಿ: ನ್ಯಾಯದ ನಿಟ್ಟುಸಿರು ಬಿಟ್ಟ ತಂದೆ!