Skip to main content
ವಿಡಿಯೋ
1/2
general

ಮಾಂಗಲ್ಯ ಸರಕ್ಕಾಗಿ ವೃದ್ಧೆಯ ಕೊ*ಲೆ – ಪರಿಚಿತ ವ್ಯಕ್ತಿಯ ಕೈವಾಡ ಶಂಕೆ

By Vinutha U
ಮಾಂಗಲ್ಯ ಸರಕ್ಕಾಗಿ ವೃದ್ಧೆಯ ಕೊ*ಲೆ – ಪರಿಚಿತ ವ್ಯಕ್ತಿಯ ಕೈವಾಡ ಶಂಕೆ

ಸಂಜೆ ಸಾಕಷ್ಟು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಬಾರದ ಕಾರಣ, ಸಂಜೆ ಸುಮಾರು 5.30ಕ್ಕೆ ಅಶ್ವತ್ಥ ನಾರಾಯಣ್ ಅವರು ತಮ್ಮ ಮನೆಯ ಬಾಡಿಗೆದಾರನಾದ ಫಣಿರಾಜ್‌ಗೆ ಕರೆ ಮಾಡಿ, "ನನ್ನ ಹೆಂಡತಿ ಶ್ರೀಲಕ್ಷ್ಮಿ ಮಧ್ಯಾಹ್ನದಿಂದ ಫೋನ್ ತೆಗೆದುಕೊಳ್ಳುತ್ತಿಲ್ಲ, ದಯವಿಟ್ಟು ಒಮ್ಮೆ ಮನೆಗೆ ಹೋಗಿ ನೋಡುವಂತೆ" ಮನವಿ ಮಾಡಿದ್ದಾರೆ

 

ಬೆಂಗಳೂರಿನ ಉತ್ತರಹಳ್ಳಿ ಸಮೀಪದ ನ್ಯೂ ಮಿಲಿನಿಯಂ ಸ್ಕೂಲ್ ರಸ್ತೆಯಲ್ಲಿ ವಾಸವಿದ್ದ 65 ವರ್ಷದ ಶ್ರೀಲಕ್ಷ್ಮಿ ಎಂಬ

ವೃದ್ಧೆಯನ್ನು ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಪ್ರಮುಖವಾಗಿ ಅವರ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಳ್ಳತನ ಮಾಡುವ ಉದ್ದೇಶದಿಂದ ಕೃತ್ಯ ಎಸಗಲಾಗಿದೆ ಎಂದು ಶಂಕಿಸಲಾಗಿದೆ.

ನವಂಬರ್ 4 ರಂದು ಬೆಳಿಗ್ಗೆ 9.30ಕ್ಕೆ ಶ್ರೀಲಕ್ಷ್ಮಿ ಅವರ ಪತಿ ಅಶ್ವತ್ಥ ನಾರಾಯಣ್ ಅವರು ಎಂದಿನಂತೆ ಕೆಲಸಕ್ಕೆ ತೆರಳಿದ್ದರು.

ಮಧ್ಯಾಹ್ನ 2.15 ಗಂಟೆಗೆ ಪತಿ ಅಶ್ವತ್ಥ ನಾರಾಯಣ್ ಅವರು ಮನೆಗೆ ಕರೆ ಮಾಡಿದಾಗ, ಶ್ರೀಲಕ್ಷ್ಮಿ ಅವರು ಕರೆ ಸ್ವೀಕರಿಸಿಲ್ಲ.

ಸಂಜೆ ಸಾಕಷ್ಟು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಬಾರದ ಕಾರಣ, ಸಂಜೆ ಸುಮಾರು 5.30ಕ್ಕೆ ಅಶ್ವತ್ಥ ನಾರಾಯಣ್ ಅವರು ತಮ್ಮ ಮನೆಯ ಬಾಡಿಗೆದಾರನಾದ ಫಣಿರಾಜ್ಗೆ ಕರೆ ಮಾಡಿ, "ನನ್ನ ಹೆಂಡತಿ ಶ್ರೀಲಕ್ಷ್ಮಿ ಮಧ್ಯಾಹ್ನದಿಂದ ಫೋನ್ ತೆಗೆದುಕೊಳ್ಳುತ್ತಿಲ್ಲ, ದಯವಿಟ್ಟು ಒಮ್ಮೆ ಮನೆಗೆ ಹೋಗಿ ನೋಡುವಂತೆ" ಮನವಿ ಮಾಡಿದ್ದಾರೆ. ಕೆಲಸದಾಕೆ ಸುಂದರಿ ಬೀಬಿ ಮೇಲೆ ಪೊಲೀಸರಿಂದ ಹಲ್ಲೆ; ಮೂವರು ಕ್ರೈಂ ಸಿಬ್ಬಂದಿ ಅಮಾನತು

ಸಮಯದಲ್ಲಿ ಹೊರಗಡೆ ಇದ್ದ ಫಣಿರಾಜ್, ತನ್ನ ಹೆಂಡತಿಗೆ ತಿಳಿಸಿ ಮನೆಗೆ ಹೋಗಿ ನೋಡಲು ಹೇಳುವುದಾಗಿ ಅಶ್ವತ್ಥ ನಾರಾಯಣ್ಗೆ ತಿಳಿಸಿದ್ದಾರೆ. ಮತ್ತೆ ಸಂಜೆ 6 ಗಂಟೆಗೆ, ಫಣಿರಾಜ್ ಅವರು ಅಶ್ವತ್ಥ ನಾರಾಯಣ್ಗೆ ಕರೆ ಮಾಡಿ, "ನಿಮ್ಮ ಹೆಂಡತಿ ಶ್ರೀಲಕ್ಷ್ಮಿ ನೆಲದ ಮೇಲೆ ಬಿದ್ದಿದ್ದಾರೆ, ಅವರಿಗೆ ಉಸಿರಾಟ ನಿಂತಿರುವಂತೆ ಕಾಣುತ್ತಿದೆ" ಎಂದು ತಿಳಿಸಿದ್ದಾರೆ.

ತಕ್ಷಣವೇ ಓಡೋಡಿ ಮನೆಗೆ ಬಂದ ಪತಿ ಅಶ್ವತ್ಥ ನಾರಾಯಣ್ ಅವರು ಶ್ರೀಲಕ್ಷ್ಮಿ ನೆಲದ ಮೇಲೆ ಬಿದ್ದಿರುವುದನ್ನು ಕಂಡು, ಅವರನ್ನು ಬೆಡ್ ಮೇಲೆ ಮಲಗಿಸಿ ಪರೀಕ್ಷಿಸಿದ್ದಾರೆ. ಪರೀಕ್ಷಿಸಿದಾಗ, ಮೃತ ಶ್ರೀಲಕ್ಷ್ಮಿ ಅವರ ಕುತ್ತಿಗೆಯ ಬಲಭಾಗದಲ್ಲಿ ಮತ್ತು ತುಟಿಯ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಅಲ್ಲದೆ, ಅವರ ಮುಖದ ಮೇಲೆ ಪರಚಿದ ಗಾಯಗಳು ಸಹ ಕಂಡುಬಂದಿವೆ. ಗಾಯಗಳು ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಸಾಧ್ಯತೆಯನ್ನು ಬಲಪಡಿಸುತ್ತವೆ. Shining Diva Fashion Crystal Tiara and Crown for Women Stylish Headband Crowns with Comb Tiaras for Girls Kids Queen Princess Wedding Bridal Birthday Gift Hair Accessories

ಅತ್ಯಂತ ಮುಖ್ಯವಾಗಿ, ಅವರ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವು ಕಳುವಾಗಿದೆ. ಯಾರೋ ಪರಿಚಿತ ವ್ಯಕ್ತಿಗಳೇ ಮನೆಯೊಳಗೆ ಪ್ರವೇಶಿಸಿ, ಶ್ರೀಲಕ್ಷ್ಮಿ ಅವರನ್ನು ಹತ್ಯೆ ಮಾಡಿ, ಮಾಂಗಲ್ಯ ಸರವನ್ನು ಕದ್ದು ಪರಾರಿಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹಂತಕರು ಕೊಲೆ ಮಾಡುವ ಮುನ್ನ ಪ್ರತಿರೋಧ ಎದುರಿಸಿರುವ ಲಕ್ಷಣಗಳು ಗಾಯಗಳಾಗಿವೆ.

ಪತಿ ಅಶ್ವತ್ಥ ನಾರಾಯಣ್ ಅವರು ಬಗ್ಗೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಪರಿಚಿತ ವ್ಯಕ್ತಿಗಳ ಬಗ್ಗೆ ತನಿಖೆ ಮುಂದುವರೆದಿದೆ.