Skip to main content
ವಿಡಿಯೋ
1/3
politics

ʻಭಾರತೀಯ ಸೇನೆಯಲ್ಲಿ ಮೇಲ್ವರ್ಗದವರ ನಿಯಂತ್ರಣʼ - ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ!

By Shravanthi R
ʻಭಾರತೀಯ ಸೇನೆಯಲ್ಲಿ ಮೇಲ್ವರ್ಗದವರ ನಿಯಂತ್ರಣʼ - ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ!

ಬಿಹಾರದಲ್ಲಿ ಮತಪ್ರಚಾರದ ವೇಳೆ ಮತ್ತೊಂದು ಕಾಂಟ್ರಾವರ್ಸಿಗೆ ಗುರಿಯಾಗಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ. ಭಾರತೀಯ ಸೇನೆಯನ್ನುದ್ದೇಶಿಸಿ, ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಬಿಹಾರದ ಔರಂಗಬಾದ್‌ನಲ್ಲಿ ರ್ಯಾಲಿ ನಡೆಸಿದ ಸಂದರ್ಭದಲ್ಲಿ, ಮಾತನಾಡಿರುವ ಅವರು, ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಪ್ರಬಲ ಹಾಗೂ ಮೇಲ್ಜಾತಿ ವ್ಯಕ್ತಿಗಳು ಮುಖ್ಯಸ್ಥರಾಗಿದ್ದಾರೆ. ಎಲ್ಲಾ ನೌಕರಿ, ಅಧಿಕಾರಶಾಹಿಯಲ್ಲಿ ಅವರೇ ಸಿಗುತ್ತಾರೆ, ನ್ಯಾಯಾಂಗವನ್ನು ನೋಡಿ ಅಲ್ಲೂ ಅವಕಾಶಗಳನ್ನು ಪಡೆಯುತ್ತಾರೆ. ಜನಸಂಖ್ಯೆ ಶೇ.10 ರಷ್ಟು ಭಾರತೀಯ ಸೇನೆಯಿಂದ ನಿಯಂತ್ರಿಸಲ್ಪಡುವುದು ಎನ್ನುವ ಮೂಲಕ ಟೀಕೆಗೊಳಗಾಗಿದ್ದಾರೆ. 

ಭಾರತದಲ್ಲಿ ನೆಲೆಸಿರುವ ಶೇ. 90 ರಷ್ಟು ಹಿಂದುಳಿದ, ಪರಿಶಿಷ್ಟ ಹಾಗೂ ದಲಿತ, ಅಲ್ಪಸಂಖ್ಯಾತ ಸಮುದಾಯಗಳು ಅವಕಾಶವಂಚಿತವಾಗಿ ಪ್ರಮುಖ ಹುದ್ದೆಗಳಿಂದ ಹೊರಗುಳಿದಿದೆ. ಜಾತಿ ತಿಕ್ಕಾಟ ಸಶ್ತ್ರಾಸ್ತ್ರ ಪಡೆಗಳಲ್ಲೂ ಇದೆ ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಇದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ ಅಲ್ಲದೇ ಈ ಹಿಂದಿನ ಷಡ್ಯಂತ್ರದ ಕುರಿತು ಚರ್ಚೆಗೆ ಮನೆಮಾಡಿದೆ. ಚುನಾವಣೆಗೆ ಒಂದು ದಿವಸ ಬಾಕಿ ಇರುವಾಗ, ಅಲ್ಲಿನ ಚುನಾವಣಾ ನಿರ್ಣಾಯಕ ಹಂತದಲ್ಲಿರುವ ಸಂದರ್ಭದಲ್ಲಿ ಮತ್ತು ರಾಜಕೀಯ ತೀವ್ರತೆ ಹೆಚ್ಚಿರುವ ನಡುವೆ, ಮತದಾರರ ಗಮನ ಸೆಳೆಯಲು ಕಸರತ್ತು ನಡೆದಿದೆ. Atomic Habits: The life-changing million copy bestseller Paperback – 18 October 2018

ರಾಹುಲ್‌ ಅವರ ಈ ಹೇಳಿಕೆಗೆ ಕುಟುಕಿರುವ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು, ಅವರು ಪ್ರಚಾರ ಮಾಡಿದಷ್ಟು ಎನ್‌ಡಿಎಗೆ ಲಾಭವೇ ಎಂದು ಅಣಕಿಸಿದ್ದಾರೆ ಎನ್ನಲಾಗಿದೆ. ದಶಕಗಳ ಕಾಲ ನಿತೀಶ್‌ ಕುಮಾರ್‌ ಅವರ ಅಧಿಕಾರಯುತ ಬಿಹಾರ ರಾಜ್ಯದ ವಿಧಾನ ಸಭಾ ಚುನಾವಣೆಯು ಮಹತ್ವದ ಘಟ್ಟ ತಲುಪಿದೆ. ಈ ಸಂದರ್ಭದಲ್ಲಿ ಅವರ ಈ ಹೇಳಿಕೆ ಯಾವ ಪರಿಣಾಮ ಬೀರಲಿದೆ ಎಂದು ಕುತೂಹಲ ಉಂಟಾಗಿಸಿದೆ. ಇದನ್ನೂ ಓದಿ: ಬಿಹಾರ ಚುನಾವಣೆ: ತೇಜಸ್ವಿ ಯಾದವ್‌ರ 'ಮಾಯಿ-ಬೆಹನ್‌' ಮಹಾಘೋಷಣೆ; ಮಹಿಳೆಯರಿಗೆ ₹30,000, ರೈತರಿಗೆ ಉಚಿತ ವಿದ್ಯುತ್!