Skip to main content
ವಿಡಿಯೋ
1/3
general

ಚಾಟ್‌ಜಿಪಿಟಿ ಗೋ ಭಾರತೀಯರಿಗೆ 1 ವರ್ಷ ಉಚಿತ: ಓಪನ್‌ಎಐ ಬಂಪರ್ ಆಫರ್ ಘೋಷಣೆ..!!

By Pavitra Ganapathi Baradavalli
ಚಾಟ್‌ಜಿಪಿಟಿ ಗೋ ಭಾರತೀಯರಿಗೆ 1 ವರ್ಷ ಉಚಿತ: ಓಪನ್‌ಎಐ ಬಂಪರ್ ಆಫರ್ ಘೋಷಣೆ..!!

ಕೃತಕ ಬುದ್ಧಿಮತ್ತೆ (ಎಐ) ದಿಗ್ಗಜ ಕಂಪನಿ ಓಪನ್‌ಎಐ, ಭಾರತೀಯ ಬಳಕೆದಾರರಿಗೆ ಬಂಪರ್ ಕೊಡುಗೆ ನೀಡಲು ಮುಂದಾಗಿದೆ. ಹೆಚ್ಚಿನ ಬಳಕೆ ಮಿತಿ ಮತ್ತು ಚಿತ್ರ ರಚನಾ ಸಾಮರ್ಥ್ಯ ಹೊಂದಿರುವ ಚಾಟ್‌ಜಿಪಿಟಿ ಗೋ ಮಾಡೆಲ್ ಅನ್ನು ಒಂದು ವರ್ಷ ಕಾಲ ಸಂಪೂರ್ಣ ಉಚಿತವಾಗಿ ಒದಗಿಸಲಾಗುವುದು ಎಂದು ಮಂಗಳವಾರ ಘೋಷಿಸಿದೆ.

ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ದಿಗ್ಗಜ ಕಂಪನಿ ಓಪನ್ಎಐ, ಭಾರತೀಯ ಬಳಕೆದಾರರಿಗೆ ಬಂಪರ್ ಕೊಡುಗೆ ನೀಡಲು ಮುಂದಾಗಿದೆ. ಹೆಚ್ಚಿನ ಬಳಕೆ ಮಿತಿ ಮತ್ತು ಚಿತ್ರ ರಚನಾ ಸಾಮರ್ಥ್ಯ ಹೊಂದಿರುವ ಚಾಟ್ಜಿಪಿಟಿ ಗೋ ಮಾಡೆಲ್ ಅನ್ನು ಒಂದು ವರ್ಷ ಕಾಲ ಸಂಪೂರ್ಣ ಉಚಿತವಾಗಿ ಒದಗಿಸಲಾಗುವುದು ಎಂದು ಮಂಗಳವಾರ ಘೋಷಿಸಿದೆ.ಇದನ್ನೂ ಓದಿ: ಶ್ವೇತಭವನದ ದೀಪಾವಳಿ ಆಚರಣೆ: ಮೋದಿಯನ್ನು ಮಹಾನ್ ಸ್ನೇಹಿತ ಎಂದು ಮೆಚ್ಚಿಕೊಂಡ ಟ್ರಂಪ್‌..!!

ಇತ್ತೀಚೆಗೆ ರಿಲಯನ್ಸ್ ಜಿಯೋ ಮತ್ತು ಏರ್ಟೆಲ್ ತಮ್ಮ ಎಐ ಸೇವೆಗಳಿಗೆ ಉಚಿತ ಆಫರ್ ಘೋಷಿಸಿದ್ದವು. ಇದರ ಬೆನ್ನಲ್ಲೇ ಓಪನ್ಎಐ ಕೂಡ ಆಕರ್ಷಕ ಯೋಜನೆ ತಂದಿದೆ.ಇದನ್ನೂ ಓದಿ: ಹರಿಯಾಣ ಗ್ರಾಮದಿಂದ ಭಾರತದ 53ನೇ ಮುಖ್ಯ ನ್ಯಾಯಮೂರ್ತಿ: ಇದು ಸಿಜೆಐ ಸೂರ್ಯ ಕಾಂತ್‌ ಪಯಣ

ನವೆಂಬರ್ 4ರಿಂದ ಆರಂಭವಾಗಲಿರುವ ಆಫರ್, ಮುಂದಿನ ವರ್ಷ ನವೆಂಬರ್ 4ರವರೆಗೆ ಚಾಲ್ತಿಯಲ್ಲಿರಲಿದೆ. ಅವಧಿಯಲ್ಲಿ ನೋಂದಣಿ ಮಾಡಿಕೊಳ್ಳುವ ಎಲ್ಲ ಭಾರತೀಯ ಬಳಕೆದಾರರಿಗೆ ಚಾಟ್ಜಿಪಿಟಿ ಗೋ ಒಂದು ವರ್ಷ ಉಚಿತವಾಗಿ ಲಭ್ಯವಾಗಲಿದೆ.ಇದನ್ನೂ ಓದಿ: ಬೋಸ್ಟನ್ ಗ್ಲೋಬಲ್ ಫೋರಂನಿಂದ ಶ್ರೀ ಶ್ರೀ ರವಿಶಂಕರ ಗುರೂಜಿಗೆ ಪ್ರತಿಷ್ಠಿತ 'ವಿಶ್ವ ಶಾಂತಿ ಮತ್ತು ಭದ್ರತಾ ನಾಯಕ ಪ್ರಶಸ್ತಿ'


ಆದರೆ ಭಾರತದಲ್ಲಿ ವಾಸಿಸುತ್ತಿರುವ ಬಳಕೆದಾರರು ಮಾತ್ರ ಇದಕ್ಕೆ ಅರ್ಹರು ಎಂದು ಕಂಪನಿ ಸ್ಪಷ್ಟಪಡಿಸಿದೆ.

ಕಳೆದ ಆಗಸ್ಟ್ನಲ್ಲಿ ಭಾರತದಲ್ಲಿ ಬಿಡುಗಡೆಯಾದ ಚಾಟ್ಜಿಪಿಟಿ ಗೋ, ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸುವ ಮತ್ತು ಹೆಚ್ಚಿನ ಸಂಖ್ಯೆಯ ಚಿತ್ರಗಳನ್ನು ರಚಿಸುವ ಸಾಮರ್ಥ್ಯ ಹೊಂದಿದೆ.SGF11 Women's Kanjivaram Pure Soft Silk Saree For Women Pure Golden Zari With Blouse Piece