ಭಾರತೀಯ - ಅಮೆರಿಕನ್ ಪ್ರಜೆ ಜೋರ್ಹಾನ್ ಮಮ್ದಾನಿ ಅವರು, ನ್ಯೂಯಾರ್ಕ್ ನಗರದ ಮೇಯರ್ ಆಗಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಮತ್ತು ರಿಪಬ್ಲಿಕನ್ ಕರ್ಟಿಸ್ ಸ್ಲಿವಾ ಅವರ ವಿರುದ್ದ ಸ್ಪರ್ಧಿಸಿ ಐತಿಹಾಸಿಕ ಗೆಲುವು ಪಡೆದಿದ್ದಾರೆ. ರಾಜ್ಯ ವಿಧಾನಸಭಾ ಸದಸ್ಯ ಹಾಗೂ ಸ್ವಯಂ-ಪ್ರಜಾಪ್ರಭುತ್ವವಾದಿಯಾಗಿರುವ ಅವರು, ನಗರದ ಅತ್ಯಂತ ಕಿರಿಯ ಹಾಗೂ ಮೊದಲ ಮುಸ್ಲಿಂ ಮೇಯರ್ ಆಗಿ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ.
ಇದೇ ಜನವರಿ 1 ರಿಂದ ಅವರು ಅಧಿಕಾರವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ. ವಿಶೇಷ ಗಮನ ಸೆಳೆದಿರುವಂತೆ, ಟ್ರಂಪ್ ದ್ವೇಷಿಯಾದ ಈ ಸೋಷಿಯಲಿಸ್ಟ್ ಅಭ್ಯರ್ಥಿಯು, ಟ್ರಂಪ್‌ಗೆ ಎದುರಾಗಿ ನಿಲ್ಲುವ ಹೇಳಿಕೆಯೊಂದನ್ನು ನೀಡಿದ್ದಾರೆ. ತಮ್ಮ ವಿಜಯ ಭಾಷಣದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಾಜಕೀಯ ಮೋಸ ಮಾಡಿದ ಅವರಿಗೆ, ಅವರ ಸೋಲನ್ನು ಅವರೇ ನಡೆಸಿದ ದಾಳಿಯಿಂದ ಪರಿಚಯಿಸಲಾಗುವುದು ಎಂದು ಹೇಳಿದ್ದಾರೆ ಎನ್ನಲಾಗಿದೆ. Ikigai: The Japanese Secret to a Long and Happy Life | A Global Self-Help Phenomenon that Guides You Towards a Joyful, Balanced, and Meaningful Life Hardcover – 7 September 2017
ಗೆಲುವಿಗೆ ಒಬಾಮಾ ಅಭಿನಂದನೆ -
ಅವರ ಗೆಲುವನ್ನು ಅಭಿನಂದಿಸಿರುವ ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, “ನಾವು ಮತ್ತು ನಮ್ಮ ಮಧ್ಯೆ ಕಾಳಜಿ ವಹಿಸುವ ಬಲವಾದ ಮತ್ತು ದೂರದೃಷ್ಟಿಯ ನಾಯಕರು ನಮ್ಮೊಡನೆ ಇದ್ದಾಗ, ನಾವು ಗೆಲ್ಲಬಹುದು. ನಮಗೆ ಇನ್ನೂ ಬಹಳಷ್ಟು ಕೆಲಸಗಳಿವೆ, ಜೊತೆಗೆ ಭವಿಷ್ಯವು ಉಜ್ವಲವಾಗಿ ಕಾಣುತ್ತದೆ.” ಎಂದು ತಮ್ಮ ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.
ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅವರ ಈ ಗೆಲುವು ಅಮೆರಿಕಾದ ರಾಜಕೀಯದಲ್ಲಿ, ಪ್ರಗತಿಪರ ಶಕ್ತಿಗೆ ಬಲತುಂಬಲಿದೆ. ಟ್ರಂಪ್ ಅಧ್ಯಕ್ಷತೆಯ ಎರಡನೇಯ ಅವಧಿಯಲ್ಲಿ ಡೆಮಾಕ್ರಟ್‌ಗಳಿಗೆ ಸಿಕ್ಕ ದೊಡ್ಡ ಗೆಲುವು ಇದಾಗಿದ್ದು, ಮುಂದಿನ ದಿನಗಳಲ್ಲಿ ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಹಾಗೂ ಪರಿಸರ ಸಂರಕ್ಷಣೆಗೆ ಒತ್ತು ನೀಡುವ ಮಾತು ಕೇಳಿಬಂದಿದೆ. ಇದನ್ನೂ ಓದಿ: ʻಭಾರತೀಯ ಸೇನೆಯಲ್ಲಿ ಮೇಲ್ವರ್ಗದವರ ನಿಯಂತ್ರಣʼ - ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ!