ಎಸ್.ಎಸ್. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಲನಚಿತ್ರವು ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿತ್ತು. ಇದರ ಎರಡೂ ಭಾಗಗಳು ವಿಭಿನ್ನ ದಾಖಲೆಗಳನ್ನು ನಿರ್ಮಿಸಿ, ದಕ್ಷಿಣ ಭಾರತದ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಸಿದ್ಧಗೊಳಿಸಿದವು. ಈಗ ಈ ಚಿತ್ರ ಬಿಡುಗಡೆಯಾಗಿ ಹತ್ತು ವರ್ಷಗಳು ಕಳೆದಿವೆ.
ಈ ವಾರ್ಷಿಕೋತ್ಸವದ ನೆನಪಿಗಾಗಿ, 'ಬಾಹುಬಲಿ: ದಿ ಎಪಿಕ್' ಹೆಸರಿನಲ್ಲಿ ಎರಡೂ ಭಾಗಗಳನ್ನು ಒಟ್ಟುಗೂಡಿಸಿ ಹೊಸದಾಗಿ ಬಿಡುಗಡೆ ಮಾಡಲಾಯಿತು. ಅಕ್ಟೋಬರ್ 31 ರಂದು 3 ಗಂಟೆ 44 ನಿಮಿಷಗಳ ಈ ಚಿತ್ರ ವಿಶ್ವಾದ್ಯಂತ ರಿಲೀಸ್ ಕಂಡಿತು.Titan Zeal 1.85" AMOLED Metal Case Smart Watch with BT Calling, SpO2, 100+ Sports Modes, Auto Sports Recognition, Fast Charging Smartwatch for Men & Women with – Brown Leather Strap (Rose Gold)
ಮೊದಲ ಎರಡು ದಿನಗಳಲ್ಲಿ ಚಿತ್ರದ ಗಳಿಕೆ ಉತ್ತಮವಾಗಿದ್ದರೂ, ನಂತರದ ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಕುಸಿತ ಕಂಡಿದೆ. ಇದು ರಾಜಮೌಳಿ ಮತ್ತು ಅವರ ತಂಡಕ್ಕೆ ಸ್ವಲ್ಪ ನಿರಾಶೆ ತಂದಿದೆ ಎನ್ನಬಹುದು. ಅರ್ಕಾ ಮೀಡಿಯಾ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಸರಣಿಯನ್ನು ಶೋಬು ಯಾರ್ಲಗಡ್ಡ ಮತ್ತು ಪ್ರಸಾದ್ ದೇವಿನ್ನೇನಿ ನಿರ್ಮಿಸಿದ್ದಾರೆ.
ಪ್ರಭಾಸ್, ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ, ಮತ್ತು ತಮನ್ನಾ ಭಾಟಿಯಾ ಮುಖ್ಯ ಭೂಮಿಕೆಯಲ್ಲಿದ್ದರೆ, ರಮ್ಯಾಕೃಷ್ಣ, ನಾಸರ್, ಸತ್ಯರಾಜ್, ಆದಿವಿ ಶೇಷ್ ಸೇರಿದಂತೆ ಹಲವು ನಟರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈಗ ಚಿತ್ರ ಮರು-ಬಿಡುಗಡೆಯಾಗಿ ಐದನೇ ದಿನಕ್ಕೆ ಕಾಲಿಟ್ಟಿದ್ದು, ಸಂಗ್ರಹದ ಕುರಿತು ಹೆಚ್ಚಿನ ಮಾಹಿತಿ ಹೀಗಿದೆ.ʼಡೆವಿಲ್ʼನಲ್ಲಿ ಗಿಲ್ಲಿ ನಟನ ಸರ್ಪ್ರೈಸ್ ಎಂಟ್ರಿ...ದರ್ಶನ್ ಸಿನಿಮಾದಲ್ಲಿ ದೊಡ್ಡ ಪಾತ್ರ! ಈ ಸುದ್ದಿ ನಿಜನಾ?
ರಾಜಮೌಳಿಯ ಈ ಹೊಸ ಪ್ರಯತ್ನವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರೂ, ಬಾಕ್ಸಾಫೀಸ್‌ನಲ್ಲಿನ ಕುಸಿತ ಗಮನಾರ್ಹವಾಗಿದೆ. ಆರಂಭಿಕ ದಿನಗಳಲ್ಲಿ ಒಳ್ಳೆಯ ಗಳಿಕೆ ಕಂಡಿದ್ದ ಚಿತ್ರ ನಾಲ್ಕನೇ ದಿನದಿಂದ ಶೇ.72ರಷ್ಟು ಕುಸಿತ ದಾಖಲಿಸಿದೆ. ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಐದನೇ ದಿನವೂ ಗಳಿಕೆ ತೀವ್ರವಾಗಿ ಇಳಿದಿದ್ದು, ಕೇವಲ ₹1.50 ಕೋಟಿ ಗಳಿಸಿದೆ.
ಕನ್ನಡ ಅವತರಣಿಕೆಯು ನಿರೀಕ್ಷಿತ ಪ್ರತಿಕ್ರಿಯೆ ಪಡೆಯುವಲ್ಲಿ ವಿಫಲವಾಗಿದೆ. ಕರ್ನಾಟಕದಲ್ಲಿ ಬಿಡುಗಡೆಯಾದ ಕನ್ನಡ ಡಬ್ಡ್ ಆವೃತ್ತಿಯು ಮೊದಲ ದಿನ ₹2 ಲಕ್ಷ, ಎರಡನೇ ದಿನ ₹3 ಲಕ್ಷ, ಮೂರನೇ ದಿನ ₹3 ಲಕ್ಷ, ಮತ್ತು ನಾಲ್ಕನೇ ದಿನ ₹1 ಲಕ್ಷ ಮಾತ್ರ ಗಳಿಸಿದೆ. ಒಟ್ಟಾರೆ ಐದು ದಿನಗಳಲ್ಲಿ ₹10 ಲಕ್ಷದ ಅಂದಾಜು ಗಳಿಕೆ ಕಂಡಿದೆ.
'ಬಾಹುಬಲಿ: ದಿ ಎಪಿಕ್' ಚಿತ್ರದಿಂದ ನಿರೀಕ್ಷಿಸಿದಷ್ಟು ಸಂಗ್ರಹವಾಗಿಲ್ಲ. ಹತ್ತು ವರ್ಷಗಳ ನಂತರ ಮರು-ಬಿಡುಗಡೆ ಆಗಿದ್ದರಿಂದ ಉತ್ತಮ ಗಳಿಕೆಯ ನಿರೀಕ್ಷೆ ಇತ್ತು. ಆದರೆ, ಈ ನಿರೀಕ್ಷೆ ಹುಸಿಯಾಗಿದೆ. "ರಾಜಮೌಳಿ ಮರು-ಬಿಡುಗಡೆ ಮಾಡುವ ಮೂಲಕ ತಪ್ಪು ಮಾಡಿದರೇ?" ಎಂಬ ಪ್ರಶ್ನೆ ಮೂಡಿದೆ. ವಿಶ್ವದಾದ್ಯಂತ ಈ ಚಿತ್ರ ₹50 ಕೋಟಿ ಗಳಿಸಲು ಹೆಣಗಾಡುತ್ತಿದೆ.
ಭಾರತದಲ್ಲಿ 'ಬಾಹುಬಲಿ: ದಿ ಎಪಿಕ್' ಚಿತ್ರದ ಸಂಗ್ರಹ ವಿವರ ಹೀಗಿದೆ: ತೆಲುಗು ₹19.8 ಕೋಟಿ, ಹಿಂದಿ ₹5.49 ಕೋಟಿ, ಕನ್ನಡ ₹10 ಲಕ್ಷ, ತಮಿಳು ₹1.78 ಕೋಟಿ, ಮಲಯಾಳಂ ₹59 ಲಕ್ಷ. ಒಟ್ಟು ನಿವ್ವಳ ಗಳಿಕೆ ₹27.75 ಕೋಟಿ ಆಗಿದ್ದರೆ, ವಿಶ್ವಾದ್ಯಂತ ಒಟ್ಟು ₹41.85 ಕೋಟಿ ಗಳಿಸಿದೆ.