Skip to main content
ವಿಡಿಯೋ
1/3
business

ಟಾಟಾ ಟ್ರಸ್ಟ್‌ನಿಂದ ಹೊರಬಂದ ರತನ್ ಟಾಟಾ ಆಪ್ತ ಮೆಹ್ಲಿ ಮಿಸ್ತ್ರಿ ಟ್ರಸ್ಟೀ ಸ್ಥಾನಕ್ಕೆ ರಾಜೀನಾಮೆ!

By Shravanthi R
ಟಾಟಾ ಟ್ರಸ್ಟ್‌ನಿಂದ ಹೊರಬಂದ ರತನ್ ಟಾಟಾ ಆಪ್ತ ಮೆಹ್ಲಿ ಮಿಸ್ತ್ರಿ ಟ್ರಸ್ಟೀ ಸ್ಥಾನಕ್ಕೆ ರಾಜೀನಾಮೆ!

ಟಾಟಾ ಗ್ರೂಪ್‌ನ ಮಾಜಿ ಚೇರ್ಮನ್‌ ದಿವಗಂತ ರತನ್‌ ಟಾಟಾ ಅವರ ಕನಸನ್ನು ಉಳಿಸಿ ಎಂದು ಸಂದೇಶ ನೀಡಿರುವ ಉದ್ಯಮಿ ಹಾಗೂ ಟಾಟಾ ಅವರ ಆಪ್ತ ಮೆಹ್ಲಿ ಮಿಸ್ತ್ರಿ, ಟಾಟಾ ಟ್ರಸ್ಟ್‌ ಟ್ರಸ್ಟೀ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿ ತಿಳಿಸಿದೆ.

ಟಾಟಾ ಟ್ರಸ್ಟ್‌ನಲ್ಲಿ ಮಹತ್ವದ ಬದಲಾವಣೆಯಾಗಿದೆ. ರತನ್ ಟಾಟಾ ಅವರ ಆಪ್ತ ಸ್ನೇಹಿತ ಮೆಹ್ಲಿ ಮಿಸ್ತ್ರಿ ಅವರು ಟ್ರಸ್ಟಿ ಸ್ಥಾನಕ್ಕೆ ತಮ್ಮ ರಾಜೀನಾಮೆ ನೀಡಿದ್ದಾರೆ. ಟ್ರಸ್ಟ್‌ನ ಅಧ್ಯಕ್ಷ ನೋಯೆಲ್ ಟಾಟಾ ಅವರಿಗೆ ಪತ್ರ ಬರೆದು ಈ ನಿರ್ಧಾರ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಅವರು, "ರತನ್ ಟಾಟಾ ಅವರ ಕನಸನ್ನು ಉಳಿಸಿ" ಎಂದು ಟ್ರಸ್ಟ್‌ನ ಭವಿಷ್ಯದ ಬಗ್ಗೆ ಸಲಹೆ ನೀಡಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಟಾಟಾ ಗ್ರೂಪ್‌ನ ನಿರ್ವಹಣೆಯಲ್ಲಿ ಹೊಸ ಚರ್ಚೆಗಳು ಆರಂಭಗೊಂಡಿವೆ ಎನ್ನಲಾಗಿದೆ.

ಅವರ ಅಧಿಕಾರವಧಿ ಅ. 27 ಕ್ಕೆ ಕೊನೆಗೊಂಡಿತ್ತು. ಆದರೆ, ಅವರ ಮರುನೇಮಕ ಕುರಿತ ಆಲೋಚನೆಗೆ ವಿರೋಧಗಳು ಕೇಳಿಬಂದಿದ್ದವು. ಟಾಟಾ ಟ್ರಸ್ಟ್‌ಗಳ ಅಧ್ಯಕ್ಷ ನೋಯೆಲ್ ಟಾಟಾ ಸೇರಿದಂತೆ ಎಲ್ಲಾ ಟ್ರಸ್ಟಿಗಳನ್ನು ಉದ್ದೇಶಿಸಿ ಪತ್ರ ಬರೆದಿದ್ದಾರೆ. ತಮ್ಮ ಟ್ರಸ್ಟೀಷಿಪ್‌ನಿಂದ ಕೆಳಗಿಳಿದ ಅವರು, ಸಂಸ್ಥೆಯನ್ನು ವಿವಾದಗಳಿಂದ ರಕ್ಷಿಸುವ ಹಾಗೂ ಅದರ ಮೌಲ್ಯಗಳನ್ನು ಎತ್ತಿಹಿಡಿಯುವ ಅಗತ್ಯದ ಕುರಿತು ಒತ್ತಿಹೇಳಿರುವರು. The Mountain Is You: Transforming Self-Sabotage Into Self-Mastery (English) Paperback – 25 November 2023

ರತನ್‌ ಟಾಟಾ ಅವರ ದೃಷ್ಟಿಕೋನಕ್ಕೆ ನನ್ನ ಬದ್ದತೆಯಿದೆ. ಅವರು ನನಗೆ ಹೇಳುತ್ತಿದ್ದ ಮಾತು ಯಾರೂ ಸಂಸ್ಥೆಗಿಂತ ದೊಡ್ಡವರಲ್ಲ. ಹೀಗೆ ಉಲ್ಲೇಖಿಸಿದ ಅವರು, ನಾನು ಸಂಸ್ಥೆಯಿಂದ ಬೇರಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಟಾಟಾ ಅವರು ಸಾರ್ವಜನಿಕ ಹಿತಾಸಕ್ತಿಯನ್ನು ತಮ್ಮ ಸ್ವಂತ ಹಿತಾಸಕ್ತಿಗಿಂತ ಹೆಚ್ಚಾಗಿ ತೋರುತ್ತಿದ್ದರು. ಟ್ರಸ್ಟಿಗಳ ಕ್ರಮಗಳು ಪಾರದರ್ಶಕತೆ, ಉತ್ತಮ ಆಡಳಿತ ಮತ್ತು ಸಾರ್ವಜನಿಕ ಹಿತಾಸಕ್ತಿಯ ತತ್ವಗಳಿಂದ ಮಾರ್ಗದರ್ಶಿಸಲ್ಪಡುತ್ತವೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಪಾಕ್‌ ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ಸ್ಪೋಟ - ನಾಲ್ವರಿಗೆ ಗಂಭೀರ ಗಾಯ, ದೌಡಾಯಿಸಿದ ಭದ್ರತಾ ಸಿಬ್ಬಂದಿ!