Skip to main content
ವಿಡಿಯೋ
1/3
general

ನಕಲಿ ಶೇರು ಮಾರಾಟ - ಫೇಸ್‌ಬುಕ್‌ ಟ್ರೇಡಿಂಗ್‌ ಫ್ರೆಂಡ್‌ನ ನಂಬಿ; ಹೂಡಿಕೆ ಹೆಸರಲ್ಲಿ ಕೈ ಸುಟ್ಟುಕೊಂಡ ಯುವಕ!

By Shravanthi R
ನಕಲಿ ಶೇರು ಮಾರಾಟ - ಫೇಸ್‌ಬುಕ್‌ ಟ್ರೇಡಿಂಗ್‌ ಫ್ರೆಂಡ್‌ನ ನಂಬಿ; ಹೂಡಿಕೆ ಹೆಸರಲ್ಲಿ ಕೈ ಸುಟ್ಟುಕೊಂಡ ಯುವಕ!

ಫೇಸ್‌ಬುಕ್‌ ಪರಿಚಿತ ಹುಡುಗಿಯ ಮಾತು ಕೇಳಿ, ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡುವಲ್ಲಿ ನಂಬಿದ್ದನು. ಲಾಭಾಂಶದ ಆಸೆಯಿಂದ ಹಣ ಕಳೆದುಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಮಂಗಳೂರಿನಲ್ಲಿ 35 ವರ್ಷದ ಯುವಕನೊಬ್ಬನು, ಷೇರು ಮಾರುಕಟ್ಟೆಯನ್ನು ನಂಬಿ ಹೂಡಿಕೆ ಮಾಡಲು ಮುಂದಾಗಿದ್ದನು. ಫೇಸ್‌ಬುಕ್‌ನಲ್ಲಿ ಪರಿಚಯವಿದ್ದ ಸ್ನೇಹಿತೆಯು ತಾನು ಮುಂಬೈನಲ್ಲಿ ಷೇರ್‌ ಟ್ರೇಡಿಂಗ್‌ ಕೆಲಸ ಮಾಡಿಕೊಂಡಿರುವುದಾಗಿ ತಿಳಿಸಿದ್ದಾಳೆ. ಇದರಿಂದ ಹೆಚ್ಚಿನ ಲಾಭಾಂಶ ಬರುವುದೆಂದು ಹೇಳಿ ನಂಬಿಸಿದ್ದಾಳೆ. ಆಕೆ ವಾಟ್ಯ್ಸಾಪ್‌ ನಂಬರ್‌ನಿಂದ ಬಂದ ಲಿಂಕ್‌ ಒತ್ತಿ ಟ್ರೇಡಿಂಗ್‌ ಆಪ್‌ ಜಾಯಿನ್‌ ಆಗಿದ್ದ ಯುವಕ ತನ್ನೆಲ್ಲಾ ವಿವರಗಳನ್ನು ನಮೂದಿಸಿದ್ದಾನೆ. 

ಟ್ರೇಡಿಂಗ್‌ನಲ್ಲಿ ಸೇರಿದ ಬಳಿಕ, ಶೇರು ಖರೀದಿಸಲು 40,000 ಪಾವತಿಸಿದ್ದನು. ಇದಕ್ಕೆ ಲಾಭಾಂಶವಾಗಿ, 9,504 ಜಮೆಯಾಗಿತ್ತು ಎನ್ನಲಾಗಿದೆ. ನಂತರ, 2 ಲಕ್ಷ ಹಣ ಹಾಕಿದಾಗ 23,760 ರೂ. ಜಮೆಯಾಗಿದೆ ಎನ್ನಲಾಗಿದೆ. ಇದಾದ ಬಳಿಕ ಹಂತ ಹಂತವಾಗಿ ಲಾಭ ಪಡೆವ ಉದ್ದೇಶದಿಂದ ಒಟ್ಟು, 32 ಲಕ್ಷ ಹಣ ವರ್ಗಾವಣೆ ಮಾಡಲಾಗಿದೆ. The Book You Wish Your Parents Had Read (and Your Children Will Be Glad That You Did) : THE #1 SUNDAY TIMES BESTSELLER Paperback – 14 January 2021

ಇದಾದ ಬಳಿಕ ವಂಚನೆಯ ಬಗ್ಗೆ ತಿಳಿದುಕೊಂಡ ಮೇಲೆ, ಆನ್‌ಲೈನ್‌ ಮೂಲಕ ಮೋಸದಿಂದ ಹಣ ವರ್ಗಾಯಿಸಿಕೊಳ್ಳಲಾಗಿದೆ ಎಂದು ಆರೋಪಿಸಿ, ದೂರು ನೀಡಿದ್ದಾರೆ ಎನ್ನಲಾಗಿದೆ. ನಗರದ ಸೈಬರ್‌ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ತನಿಖೆ ನಡೆಸಲಾಗಿದೆ ಎನ್ನುವ ಮಾಹಿತಿ ತಿಳಿಸಲಾಗಿದೆ. ಇದನ್ನೂ ಓದಿ: ಟಾಟಾ ಟ್ರಸ್ಟ್‌ನಿಂದ ಹೊರಬಂದ ರತನ್ ಟಾಟಾ ಆಪ್ತ ಮೆಹ್ಲಿ ಮಿಸ್ತ್ರಿ ಟ್ರಸ್ಟೀ ಸ್ಥಾನಕ್ಕೆ ರಾಜೀನಾಮೆ!