Skip to main content
ವಿಡಿಯೋ
1/3
metro

ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಮೂರು ದಿನಗಳ ರೈತ ಸ್ನೇಹಿ ಕಡಲೆಕಾಯಿ ಪರಿಷೆ

By Shravanthi R
ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಮೂರು ದಿನಗಳ ರೈತ ಸ್ನೇಹಿ ಕಡಲೆಕಾಯಿ ಪರಿಷೆ

ಮೂರು ದಿನಗಳ ಕಾಲ ನಗರದ ಮಲ್ಲೇಶ್ವರಂನಲ್ಲಿ ಕಾಡು ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ರೈತಸ್ನೇಹಿ ಕಡಲೆಕಾಯಿ ಪರಿಷೆ ನಡೆಯಲಿದ್ದು, ವಿವಿಧ ಕಾರ್ಯಕ್ರಮಗಳು ಜರುಗಲಿದೆ.

ಬೆಂಗಳೂರು: ಇಲ್ಲಿನ ಮಲ್ಲೇಶ್ವರಂನಲ್ಲಿರುವ ಭ್ರಮರಾಂಬ ಸಮೇತ ಶ್ರೀ ಕಾಡು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ (ನ. 8,9 ಹಾಗೂ 10) ಕಡಲೆಕಾಯಿ ಪರಿಷೆ ನಡೆಯಲಿದೆ. ಒಂಭತ್ತನೇ ವರ್ಷದ ರೈತಸ್ನೇಹಿ ಮಲ್ಲೇಶ್ವರ ಕಡಲೆಕಾಯಿ ಪರಿಷೆಯು ಜನರನ್ನು ತನ್ನತ್ತ ಸೆಳೆದಿದೆ. 

ಈ ಕುರಿತು ಕಾಡುಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷರಾದ ಬಿ.ಕೆ.ಶಿವರಾಂರವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೇವಾಲಯವು ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಾಂಸ್ಕೃತಿಕತೆಯನ್ನು ಉಳಿಸಿ, ಬೆಳೆಸುವಲ್ಲಿ ಶ್ರಮಿಸುತ್ತಿದೆ. ಪರಿಸರ ಸ್ನೇಹಿ ವಾತಾವರಣವನ್ನು ಕಾಪಾಡುವಲ್ಲಿ ಕಾಡುಮಲ್ಲೇಶ್ವರ ಗೆಳಯರ ಬಳಗ ಉತ್ತಮ ಪಾತ್ರವಹಿಸಿದೆ ಎಂದಿದ್ದಾರೆ. 

ಗ್ರಾಮೀಣ ಸಂತೆಯೆಂಬಂತೆ, ಮಧ್ಯವರ್ತಿಗಳು ಇಲ್ಲದೇ ರೈತರಿಂದ ನೇರವಾಗಿ ಗ್ರಾಹಕನಿಗೆ ಮಾರಾಟ ಮಾಡುವ ಅವಕಾಶವನ್ನು ತೆರೆದಿಡಲಾಗಿದೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ ಮೂಲಕ ರೈತರಿಗೆ ಬೀದಿ ಬದಿಯ ವ್ಯಾಪಾರಿಗಳಿಗೆ ಮಾರಾಟ ಮಾಡಲು ಅವಕಾಶ ನೀಡಲಾಗಿದೆ ಎಂದರು.

ಸ್ವಚ್ಛತಾ ಅಭಿಯಾನದ ಭಾಗವಾಗಿ, ಪ್ಲಾಸ್ಟಿಕ್‌ ಮುಕ್ತ ಕಡಲೆಕಾಯಿ ಪರಿಷೆ ಭಾಗವಾಗಿ, ಒಂದು ಲಕ್ಷಕ್ಕೂ ಹೆಚ್ಚು ಬಟ್ಟೆ ಹಾಗೂ ಪೇಪರ್‌ ಬ್ಯಾಗ್‌ಗಳನ್ನು ವಿತರಿಸಲಾಗುತ್ತಿದೆ. ವೆಂಡಿಂಗ್‌ ಮಷಿನ್‌ ಇಟ್ಟು, ವೇಸ್ಟ್‌ ಪ್ಲಾಸ್ಟಿಕ್‌ ಬಾಟಲ್‌ ಹಾಕಿದರೆ ಒಂದು ರುಪಾಯಿ ನೀಡಲಾಗುತ್ತದೆ. The Diary of A Young Girl Paperback – 1 January 2014

ನವೆಂಬರ್ 8 ರಂದು ಸಂಜೆ ಮಲ್ಲಿಕಾರ್ಜುನ ಸ್ವಾಮಿ, ನಂದಿಯ ಮೂರ್ತಿಗೆ ಕಡಲೆಕಾಯಿ ಪ್ರೋಕ್ಷಣೆ ಮಾಡುವ ಮೂಲಕ ಉದ್ಘಾಟನೆ ನೇರವೆರಲಿದೆ. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳು ಹಾಗೂ ಗಣ್ಯರು ಆಗಮಿಸಲಿದ್ದು, ಉದ್ಘಾಟನೆಯನ್ನು ಮಾಡಲಿದ್ದಾರೆ ಎಂದು ತಿಳಿಸಲಾಗಿದೆ. 

ದೈವದ ಮೇಲೆ ನಂಬಿಕೆ ಇರಲಿ, ಮೂಢನಂಬಿಕೆ ಅಲ್ಲ. ಸಂಜೆ ಕಾರ್ಯಕ್ರಮಗಳು ಜರುಗಲಿದ್ದು, ನವೆಂವರ್ 9 ರಂದು ಹುಣ್ಣಿಮೆ ಹಾಡು ವಾರ್ಷಿಕ ಪ್ರಶಸ್ತಿಯನ್ನು ಗರ್ತಿಕೆರೆ ರಾಘಣ್ಣರವರಿಗೆ ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿಯು 10, 000 ನಗದು ಪುರಸ್ಕಾರ ಹೊಂದಿರುತ್ತದೆʼ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ‘ಹೈಡ್ರೋಜನ್ ಬಾಂಬ್’ ಸುದ್ದಿಗೋಷ್ಠಿ: ಚುನಾವಣಾ ಆಯೋಗ-ಬಿಜೆಪಿ ಸಂಚು ಆರೋಪಕ್ಕೆ ಬೃಹತ್ ಸಾಕ್ಷ್ಯ..!!