ಯಶ್ ನಟನೆಯ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್' ಭಾರತದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಮುಂದಿನ ವರ್ಷ ಮಾರ್ಚ್‌ನಲ್ಲಿ ತೆರೆಕಾಣಲಿರುವ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಈಗಾಗಲೇ ಘೋಷಿಸಲಾಗಿದೆ. 'ಟಾಕ್ಸಿಕ್' ಕಾರಣದಿಂದಾಗಿ ಹಲವು ದೊಡ್ಡ ಚಿತ್ರಗಳು ತಮ್ಮ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿವೆ. ಆದರೆ, ತೆಲುಗು ನಟ ಅಡವಿ ಶೇಷ್, 'ಟಾಕ್ಸಿಕ್' ಜೊತೆಗೇ ತಮ್ಮ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.
ಜನಪ್ರಿಯ ನಟ ಅಡವಿ ಶೇಷ್ 'ಮೇಜರ್', 'ಗೂಢಚಾರಿ' ಮುಂತಾದ ಸಿನಿಮಾಗಳ ಮೂಲಕ ಗಮನ ಸೆಳೆದವರು. ಸದ್ಯ, ಮೃಣಾಲ್ ಠಾಕೂರ್ ನಾಯಕಿಯಾಗಿರುವ ಮತ್ತು ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಖಳನಾಯಕರಾಗಿರುವ 'ಡಕೈಟ್' ಚಿತ್ರದಲ್ಲಿ ಅವರು ನಟಿಸಿದ್ದಾರೆ. ಈ ಚಿತ್ರವೂ 'ಟಾಕ್ಸಿಕ್' ಜೊತೆಗೆ ಮಾರ್ಚ್ 19 ರಂದೇ ತೆರೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಯುಗಾದಿ, ಗುಡಿ ಪಡ್ವಾ, ಮತ್ತು ಈದ್ ಹಬ್ಬಗಳು ಅದೇ ಸಮಯದಲ್ಲಿ ಇರುವುದರಿಂದ, 'ಡಕೈಟ್' ಚಿತ್ರ ತಂಡ ಈ ನಿರ್ಧಾರ ಕೈಗೊಂಡಿದೆ. 'ಟಾಕ್ಸಿಕ್' ಜೊತೆಗಿನ ಸ್ಪರ್ಧೆಯಿಂದ ಚಿತ್ರಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ಅಡವಿ ಶೇಷ್ ಹೀಗೆ ಉತ್ತರಿಸಿದ್ದಾರೆ: "ನಮಗೆ 'ಟಾಕ್ಸಿಕ್' ಬಗ್ಗೆ ಭಯವಿಲ್ಲ. ನಾನು ಯಾವಾಗಲೂ ಅಂಡರ್‌ಡಾಗ್ ಆಗಿ ಗೆದ್ದಿದ್ದೇನೆ ಮತ್ತು ಜನರಿಗೆ ಸರ್ಪ್ರೈಸ್ ನೀಡಿದ್ದೇನೆ."Titan Zeal 1.85" AMOLED Metal Case Smart Watch with BT Calling, SpO2, 100+ Sports Modes, Auto Sports Recognition, Fast Charging Smartwatch for Men & Women with – Brown Leather Strap (Rose Gold)
ಅವರು 2018ರ ಘಟನೆಯನ್ನು ನೆನಪಿಸಿಕೊಂಡರು. "ಕೆಜಿಎಫ್ ಚಾಪ್ಟರ್ 1' ಶಾರುಖ್ ಖಾನ್ ಅವರ 'ಜೀರೋ' ಚಿತ್ರದ ಎದುರು ಬಿಡುಗಡೆಯಾಗಿ, ಸಿನಿಮಾ ವ್ಯಾಕರಣವನ್ನೇ ಬದಲಾಯಿಸಿತು" ಎಂದು ಅವರು ಉದಾಹರಿಸಿದರು. ಇದರ ಮೂಲಕ, 'ಟಾಕ್ಸಿಕ್' ವಿರುದ್ಧವೂ ತಮ್ಮ ಚಿತ್ರ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಿಗೆ ಚಿತ್ರಗಳು ಬಿಡುಗಡೆಯಾದರೆ ವಿಫಲವಾಗುತ್ತವೆ ಎಂಬುದು ಸುಳ್ಳು ಎಂದು ಶೇಷ್ ಅಭಿಪ್ರಾಯಪಟ್ಟಿದ್ದಾರೆ. "ಲಗಾನ್' ಮತ್ತು 'ಗದರ್' ಚಿತ್ರಗಳು ಒಟ್ಟಿಗೆ ಬಿಡುಗಡೆಯಾಗಿ ಎರಡೂ ಬ್ಲಾಕ್ಬಸ್ಟರ್ ಆದವು. ಈ ಬಾಕ್ಸ್ ಆಫೀಸ್ ಕ್ಲ್ಯಾಶ್ ಎಂಬುದು ಮಾಧ್ಯಮಗಳ ಸೃಷ್ಟಿ ಅಷ್ಟೆ. ಜನರಿಗೆ ಅದರ ಅರಿವಿಲ್ಲ" ಎಂದು ಅವರು ಹೇಳಿದರು.ಇದನ್ನು ಓದಿ:ಬಾಹುಬಲಿ ಸಿನಿಮಾ ರೀ-ರಿಲೀಸ್...ಅಂದುಕೊಂಡಿದ್ದೇನು, ಆಗಿದ್ದೇನು ರಾಜಮೌಳಿ! ಇಲ್ಲಿದೆ ಕಲೆಕ್ಷನ್ ಮಾಹಿತಿ
ಜನರು ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವುದನ್ನಷ್ಟೇ ಬಯಸುತ್ತಾರೆ. ಸಿನಿಮಾ ಚೆನ್ನಾಗಿದ್ದರೆ ಗೆದ್ದೇ ಗೆಲ್ಲುತ್ತದೆ ಎಂಬುದು ಅವರ ನಂಬಿಕೆ. 'ಡಕೈಟ್' ಚಿತ್ರದಲ್ಲಿ ಅಡವಿ ಶೇಷ್, ಮೃಣಾಲ್ ಠಾಕೂರ್ ಮತ್ತು ಅನುರಾಗ್ ಕಶ್ಯಪ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಪೋಸ್ಟರ್ ಈಗಾಗಲೇ ಜನಮನ ಸೆಳೆದಿದೆ.
ಮೊದಲು ಶ್ರುತಿ ಹಾಸನ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು, ಆದರೆ ನಂತರ ಮೃಣಾಲ್ ಠಾಕೂರ್ ಅವರ ಸ್ಥಾನವನ್ನು ಪಡೆದರು. ಚಿತ್ರೀಕರಣದ ವೇಳೆ ಅಡವಿ ಶೇಷ್ ಅವರಿಗೆ ಗಾಯವಾದ ಕಾರಣ, ಚಿತ್ರದ ಬಿಡುಗಡೆ ವಿಳಂಬವಾಗಿ ಮುಂದಿನ ವರ್ಷಕ್ಕೆ ನಿಗದಿಯಾಗಿದೆ. ಇದು ನವೆಂಬರ್ 25ರಂದು ಪ್ರಕಟಗೊಂಡ ಮಾಹಿತಿ.