ಬೆಳಗಾವಿ; ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿನ ಬೆಲೆ ನಿಗದಿಗಾಗಿ ನಡೆಯುತ್ತಿರುವ ರೈತರ ಹೋರಾಟವು ಪ್ರಸ್ತುತ ಸಾಕಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಇದು ಇಡೀ ಉತ್ತರ ಕರ್ನಾಟಕದಲ್ಲಿ ಒಂದು ಪ್ರಮುಖ ಕೃಷಿ ಸಂಘರ್ಷವಾಗಿ ಬೆಳೆಯುತ್ತಿದೆ.BULLMER Striped Textured Printed Polo Neck Fullsleeve T-Shirt with Rib for Men
ಕಬ್ಬಿನ ಬೆಲೆ ನಿಗದಿಗಾಗಿ ಬೆಳಗಾವಿ ಜಿಲ್ಲೆಯ ಬೈಲಹೂಂಗಲ ಪಟ್ಟಣದಲ್ಲಿ ಚೆನ್ನಮ್ಮ ಸರ್ಕಲ್ ಬಳಿ ಕಳೆದ 3 ನೇ ದಿನದಿಂದ ರೈತರು ರಸ್ತ ತಡೆದು, ನಡೆಸುತ್ತಿರುವ ಅಹೋರಾತ್ರಿ ಧರಣಿ ಪ್ರತಿಭಟನೆಯಲ್ಲಿ ಇಂದು ಪಾಲ್ಗೊಂಡು, ರೈತರಿಗೆ ಬೆಂಬಲ ಸೂಚಿಸಿ ಮಾತನಾಡಿ ಪ್ರತಿ ಟನ್ ಕಬ್ಬಿಗೆ 3500 ರೂ. ಕೊಡಬೇಕೆಂದು ಜಾತ್ಯಾತೀತ ಜನತಾದಳ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀ ಶಂಕರ ಭ ಮಾಡಲಗಿ ಅವರು ಸರ್ಕಾರಕ್ಕೆ ಒತ್ತಾಯಿಸಲಾಯಿತು.ಇದನ್ನು ಓದಿ; ಬಿಹಾರದಲ್ಲಿ ಎಡಪಕ್ಷಗಳು(INDIA Alliance) ನೆಲೆಯನ್ನು ಕಳೆದುಕೊಳ್ಳಲು ಕಾರಣ ಹಾಗೂ ಬಿಜೆಪಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತಿರುವ ಗುಟ್ಟು ಇಲ್ಲಿದೆ
ಹೋರಾಟದ ಪ್ರಮುಖ ಬೇಡಿಕೆಗಳು ಮತ್ತು ಅಂಶಗಳು:.
ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹3,500 ರೂಪಾಯಿ ಬೆಂಬಲ ಬೆಲೆಯನ್ನು (Minimum Support Price - MSP) ನಿಗದಿಪಡಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.
- ಸಕ್ಕರೆ ಕಾರ್ಖಾನೆಗಳು ಕಬ್ಬಿನ ಕಟಾವು (harvesting) ಮತ್ತು ಸಾಗಾಣಿಕೆ (transportation) ವೆಚ್ಚವನ್ನು ಕಡಿತಗೊಳಿಸದೆ ಈ ಬೆಲೆಯನ್ನು ಘೋಷಿಸಬೇಕು ಎಂಬುದು ಅವರ ಮುಖ್ಯ ಆಗ್ರಹವಾಗಿದೆ.
- ಮಹಾರಾಷ್ಟ್ರದಲ್ಲಿ ಜಾರಿಯಲ್ಲಿರುವ ಮಾದರಿಯಲ್ಲಿ ನ್ಯಾಯಯುತ ಮತ್ತು ಸಕಾಲಿಕವಾಗಿ ಹಣ ಪಾವತಿಸುವ ವ್ಯವಸ್ಥೆಯನ್ನು ಕರ್ನಾಟಕದಲ್ಲಿಯೂ ಅಳವಡಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
- ಕಳೆದ ವರ್ಷದ ಕಬ್ಬಿನ ಬಾಕಿ ಪಾವತಿಗಳನ್ನು ಕೂಡಲೇ ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಲಾಗಿದೆ.
ಜಾತ್ಯಾತೀತ ಜನತಾದಳ ಬೈಲಹೂಂಗಲ ತಾಲೂಕು ಅಧ್ಯಕ್ಷರಾದ ಶ್ರೀ ಸುಭಾಷ ಎಸ್ ಬಾಗೆವಾಡಿ ಯುವ ಜನತಾದಳ ಜಾತ್ಯಾತೀತ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ರಾಮು ರಜಪೂತ ಹಾಜರಿದ್ದರು.