ಬೆಂಗಳೂರು - ಉದ್ಯಾನನಗರಿ ಬೆಂಗಳೂರಿನಲ್ಲಿ ಈ ನವೆಂಬರ್‌ನಲ್ಲಿ ಡಬಲ್ ಧಮಾಕ ಆಗಲಿದೆ . ಸಾಂಪ್ರದಾಯಿಕ ಕಡಲೆಕಾಯಿ ಪರಿಷೆಗಾಗಿ ಸಿದ್ಧತೆಗಳು ನಡೆದಿವೆ. ಈ ವರ್ಷ ಎರಡು ಕಡೆಗಳಲ್ಲಿ ಪರಿಷೆ ನಡೆಯಲಿದೆ.
ಎಲ್ಲಿ? ಯಾವಾಗ?
ಈ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಎರಡು ಕಡಲೆಕಾಯಿ ಪರಿಷೆಗಳ ಹೆಚ್ಚು ಮೆರಗು ತರಲಿದೆ. ಮಲ್ಲೇಶ್ವರಂ ನ. 8 ರಿಂದ 10 ರವರೆಗೂ 3 ದಿನ ನವೆಂಬರ್‌ನ ಮೊದಲ ಪರಿಷೆ ನಡೆಯಲಿದೆ. ಬಸವನಗುಡಿ ನ. 17 ರಿಂದ 21 5 ದಿನಗಳು ಐತಿಹಾಸಿಕ ಪರಿಷೆ ಈ ಬಾರಿ 5 ದಿನಕ್ಕೆ ವಿಸ್ತರಣೆ ಆಗಿದೆ. 'ನವೆಂಬರ್ ಕ್ರಾಂತಿ' ಊಹಾಪೋಹದ ನಡುವೆ ಡಿ.ಕೆ. ಶಿವಕುಮಾರ್ ದೆಹಲಿ ಭೇಟಿ: ಹೈಕಮಾಂಡ್ ಭೇಟಿ ನಿರಾಕರಣೆ
ಬಸವನಗುಡಿ ಪರಿಷೆಗೆ ಸಿಎಂ ಚಾಲನೆ!
ಬಹುನಿರೀಕ್ಷಿತ ಬಸವನಗುಡಿ ಕಡಲೆಕಾಯಿ ಪರಿಷೆಯು ನವೆಂಬರ್ 17 ರಂದು ಆರಂಭವಾಗಲಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕಳೆದ ವರ್ಷ ಈ ಪರಿಷೆಯಲ್ಲಿ ಸುಮಾರು 5 ಲಕ್ಷ ಜನರು ಪಾಲ್ಗೊಂಡಿದ್ದರು.
ಪರಿಸರ ಸ್ನೇಹಿ ಮತ್ತು ಪ್ಲಾಸ್ಟಿಕ್ ಮುಕ್ತ ಪರಿಷೆ!
ಪರಿಷೆಗೆ ಬರುವವರು ಕಡಲೆಕಾಯಿ ಕೊಂಡೊಯ್ಯಲು ಮನೆಗಳಿಂದಲೇ ಬಟ್ಟೆಯ ಚೀಲಗಳು ಅಥವಾ ಇತರ ಪರಿಸರ ಸ್ನೇಹಿ ಕೈ ಚೀಲಗಳನ್ನು ಕಡ್ಡಾಯವಾಗಿ ತರಬೇಕು. ಕಬ್ಬಿನ ಬೆಲೆ ನಿಗದಿಗಾಗಿ ಹೋರಾಟ ವಿಚಾರ; ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀ ಶಂಕರ ಭ ಮಾಡಲಗಿ ನೇತೃತ್ವದಲ್ಲಿ ಸರ್ಕಾರಕ್ಕೆ ಒತ್ತಾಯ
ಭದ್ರತೆ ಮತ್ತು ಸಿದ್ಧತೆಗೆ ಹೈ ಅಲರ್ಟ್!
ಜನಸಂದಣಿ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ಸಕಲ ಸಿದ್ಧತೆ ನಡೆಸಿದೆ. ಭದ್ರತೆಗಾಗಿ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಿ.ಸಿ.ಟಿ.ವಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಗಿದೆ. ಅಗ್ನಿಶಾಮಕ ವಾಹನ, ತುರ್ತು ಚಿಕಿತ್ಸಾ ವಾಹನ ಮತ್ತು ಮಾರ್ಷಲ್‌ಗಳ ನಿಯೋಜನೆ ಆಗಿದೆ. ನಿರಂತರ ವಿದ್ಯುತ್, ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಮತ್ತು ಸ್ವಚ್ಛತೆಗೆ ಒತ್ತು ನೀಡಲಾಗಿದೆ.
ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಆರಂಭವಾಗುವ ಈ ಸಾಂಪ್ರದಾಯಿಕ ಪರಿಷೆಯಲ್ಲಿ ಬಸವನಗುಡಿ ದೊಡ್ಡ ಬಸವನ ನಡೆದಾಡುವವನು ಎನ್ನುವ ನಂಬಿಕೆಯೂ ಇದೆ.