Skip to main content
ವಿಡಿಯೋ
1/3
cinema

ಕೆ.ಜಿ.ಎಫ್‌ ಚಾಚಾ ಹರೀಶ್‌ ರಾಯ್‌ ವಿಧಿವಶ...ಖ್ಯಾತ ಖಳನಟನನ್ನು ಕಳೆದುಕೊಂಡ ಚಿತ್ರರಂಗ ಭಾವುಕ!

By Ram Chethan
ಕೆ.ಜಿ.ಎಫ್‌ ಚಾಚಾ ಹರೀಶ್‌ ರಾಯ್‌ ವಿಧಿವಶ...ಖ್ಯಾತ ಖಳನಟನನ್ನು ಕಳೆದುಕೊಂಡ ಚಿತ್ರರಂಗ ಭಾವುಕ!

ಥೈರಾಯ್ಡ್ ಕ್ಯಾನ್ಸರ್ ವಿರುದ್ಧ ದೀರ್ಘ ಹೋರಾಟ ನಡೆಸಿ ನಟ ಹರೀಶ್ ರಾಯ್ ಇಹಲೋಕ ತ್ಯಜಿಸಿದ್ದಾರೆ. ‘ಓಂ’ ರಿಂದ ‘ಕೆಜಿಎಫ್’ ತನಕ ಅನೇಕ ಚಿತ್ರಗಳಲ್ಲಿ ಶಕ್ತಿಯುತ ಪಾತ್ರಗಳೊಂದಿಗೆ ಮೆರೆದ ನಟರ ಅಗಲಿಕೆಯಿಂದ ಕನ್ನಡ ಚಿತ್ರರಂಗ ದುಃಖಿತವಾಗಿದೆ. ಚಿಕಿತ್ಸೆಗಾಗಿ ಯಶ್ ಸೇರಿದಂತೆ ಅನೇಕರು ನೆರವಾಗಿ ನಿಂತಿದ್ದರು.

ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್, ಹಲವು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯೊಂದಿಗೆ ಹೋರಾಡಿ ನಿಧನರಾಗಿದ್ದಾರೆ. ‘ಓಂ’, ‘ನಲ್ಲ’ ಸೇರಿದಂತೆ ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ನಂತಹ ಜನಪ್ರಿಯ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಅವರು ಮನೆಮಾತಾಗಿದ್ದರು.

ಹರೀಶ್ ರಾಯ್ ಅವರು ಥೈರಾಯ್ಡ್ ಕ್ಯಾನ್ಸರ್‌ನಿಂದ ತೀವ್ರವಾಗಿ ಬಳಲುತ್ತಿದ್ದರು. ಕಾಯಿಲೆಯಿಂದ ಅವರ ದೇಹ ಕೃಶಗೊಂಡು ಗುರುತು ಸಿಗದಷ್ಟು ಬದಲಾಗಿತ್ತು. ಚಿಕಿತ್ಸೆಗಾಗಿ ಆರ್ಥಿಕ ಸಹಾಯವನ್ನೂ ಅವರು ಕೋರಿದ್ದರು.

ಅವರ ಸಂಕಷ್ಟದ ಸಮಯದಲ್ಲಿ, ನಟ ಯಶ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್, ದರ್ಶನ್ ಅಭಿಮಾನಿ ಬಳಗ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಮತ್ತು ಕಲಾವಿದರು ಆರ್ಥಿಕ ನೆರವು ನೀಡಿದ್ದರು. ಯಶ್ ಈ ಹಿಂದೆ ತಮಗೆ ಸಹಾಯ ಮಾಡಿದ್ದ ಬಗ್ಗೆ ಹರೀಶ್ ರಾಯ್ ಬಹಿರಂಗವಾಗಿ ಹೇಳಿಕೊಂಡಿದ್ದರು.Arayna Women's Cotton Printed Floral Straight Kurta with Palazzo Pants and Dupatta

ಕಳೆದ ಕೆಲವು ತಿಂಗಳುಗಳಿಂದ ನಿರಂತರ ಚಿಕಿತ್ಸೆ ಪಡೆಯುತ್ತಿದ್ದ ಹರೀಶ್ ರಾಯ್ ಅವರ ನಿಧನದಿಂದ ಚಿತ್ರರಂಗ ಆಘಾತಕ್ಕೊಳಗಾಗಿದೆ. ಅನೇಕ ಸಿನಿಮಾ ಮಂದಿ ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದರು, ಜೊತೆಗಿರುವುದಾಗಿ ಭರವಸೆ ನೀಡಿದ್ದರು.ಇದನ್ನು ಓದಿ:ವೈಯಕ್ತಿಕ ದ್ವೇಷಕ್ಕೆ ರಕ್ಷಿತಾಗೆ ಪತ್ರ ಸಿಗಬಾರದು ಅಂದ್ರಾ ಅಶ್ವಿನಿ? ಹಾಗಾದ್ರೆ ರಾಶಿಕಾ-ರಕ್ಷಿತಾ ಇಬ್ಬರಲ್ಲಿ ಯಾರಿಗೆ ಸಿಕ್ತು ಪತ್ರ?

ಕರಾವಳಿ ಮೂಲದ ಹರೀಶ್ ರಾಯ್, 90ರ ದಶಕದ ಹಲವು ಸಿನಿಮಾಗಳಲ್ಲಿ ಖಳನಾಯಕರಾಗಿ ಗುರುತಿಸಿಕೊಂಡಿದ್ದರು. ಅವರ ವೃತ್ತಿಜೀವನದಲ್ಲಿ ಕೆಲವೊಮ್ಮೆ ವೈಯಕ್ತಿಕ ಸವಾಲುಗಳನ್ನೂ ಎದುರಿಸಿದ್ದರು.

ನಟ ದರ್ಶನ್ ಜೈಲು ಪಾಲಾದ ಸಂದರ್ಭದಲ್ಲಿ, ಹರೀಶ್ ರಾಯ್ ತಮ್ಮ ಜೈಲು ದಿನಗಳನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದರು. ಅವರು ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಹರೀಶ್ ರಾಯ್ ಕನ್ನಡ ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದರು. ‘ಅಂಡರ್‌ ವರ್ಲ್ಡ್’, ‘ಮೀಂದುಮ್ ಒರು ಕಾದಲ್ ಕಧೈ’, ‘ರಾಜ್ ಬಹದ್ದೂರ್’, ‘ಸಂಜು ವೆಡ್ಸ್ ಗೀತಾ’, ‘ಸ್ವಯಂವರ’, ‘ಭೂಗತ’, ‘ನನ್ನ ಕನಸಿನ ಹೂವೆ’, ‘ಜಾಫರ್ ಅಲಿಯಾಸ್ ಮುರ್ಗಿ ಜಾಫರ್’, ‘ಜೋಡಿ ಹಕ್ಕಿ’, ‘ತಾಯವ್ವ’ ಅವರ ಪ್ರಮುಖ ಸಿನಿಮಾಗಳಲ್ಲಿ ಸೇರಿವೆ.