ಖ್ಯಾತ ನಟ ಹರೀಶ್ ರಾಯ್ ನಿಧನರಾಗಿದ್ದಾರೆ. "ಕೆಜಿಎಫ್ ಚಾಚಾ" ಎಂದೇ ಚಿರಪರಿಚಿತರಾಗಿದ್ದ ಅವರು, ನವೆಂಬರ್ 6 ರಂದು ಕೊನೆಯುಸಿರೆಳೆದಿದ್ದಾರೆ. 100ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಹರೀಶ್ ರಾಯ್, ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ನಟನಾ ಪಯಣದಲ್ಲಿನ ಕೆಲವು ಪ್ರಮುಖ ಪಾತ್ರಗಳ ವಿವರ ಇಲ್ಲಿದೆ.
ಕೆಜಿಎಫ್ ಚಲನಚಿತ್ರದ ನಂತರ ಹರೀಶ್ ರಾಯ್ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಈ ಚಿತ್ರದಲ್ಲಿ ರಾಕಿ ಭಾಯ್‌ಗೆ ನಿಷ್ಠಾವಂತ ಸಹಾಯಕ "ಚಾಚಾ" ಅಥವಾ "ಖಾಸಿಂ" ಪಾತ್ರದಲ್ಲಿ ಅವರು ಅಭಿನಯಿಸಿದ್ದರು. ಈ ಪಾತ್ರದಿಂದಾಗಿಯೇ ಅವರು "ಕೆಜಿಎಫ್ ಚಾಚಾ" ಎಂದೇ ಜನಪ್ರಿಯರಾದರು.Titan Workwear Quartz Multifunction Black Dial Black Metal Strap Watch for Men - NT1805NM02
"ಓಂ" ಚಿತ್ರದಲ್ಲಿ ಡಾನ್ ಆಗಿ ಮಿಂಚಿದ್ದ ಹರೀಶ್ ರಾಯ್, ಶಿವರಾಜ್‌ಕುಮಾರ್ ಅಭಿನಯದ, ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಈ ಚಿತ್ರದಲ್ಲಿ 'ಡಾನ್ ರಾಯ್' ಪಾತ್ರ ನಿರ್ವಹಿಸಿದ್ದರು. ಈ ಚಿತ್ರವು ಸೂಪರ್‌ಹಿಟ್ ಆಗಿದ್ದು, ಅವರ ನಟನೆ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು.
ದರ್ಶನ್ ನಟನೆಯ 'ಮೆಜೆಸ್ಟಿಕ್' ಚಿತ್ರದಲ್ಲೂ ಹರೀಶ್ ರಾಯ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ನಿರ್ದೇಶಕ ಪಿ.ಎನ್.ಸತ್ಯ ಅವರ ಈ ಚಿತ್ರದಲ್ಲಿ 'ನಾಗ' ಎಂಬ ಪಾತ್ರದ ಮೂಲಕ ಅವರು ಗಮನ ಸೆಳೆದಿದ್ದರು. ಈ ಪಾತ್ರ ಕೂಡ ಅವರ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲು ಮೂಡಿಸಿದೆ.ಇದನ್ನು ಓದಿ:ಕೆ.ಜಿ.ಎಫ್ ಚಾಚಾ ಹರೀಶ್ ರಾಯ್ ವಿಧಿವಶ...ಖ್ಯಾತ ಖಳನಟನನ್ನು ಕಳೆದುಕೊಂಡ ಚಿತ್ರರಂಗ ಭಾವುಕ!
"ಸಂಜು ವೆಡ್ಸ್ ಗೀತಾ" ಮತ್ತೊಂದು ಜನಪ್ರಿಯ ಕನ್ನಡ ಚಿತ್ರ. ರಮ್ಯಾ ಮತ್ತು ಶ್ರೀನಗರ ಕಿಟ್ಟಿ ನಟಿಸಿದ್ದ ಈ ಸೂಪರ್‌ಹಿಟ್ ಚಿತ್ರದಲ್ಲಿ ಹರೀಶ್ ರಾಯ್ ಕೈದಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ನಟನೆ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿತ್ತು.
ಅವರ ಸುದೀರ್ಘ ನಟನಾ ಜೀವನದಲ್ಲಿ "ರಾಜ್ ಬಹದ್ದೂರ್", "ಸ್ವಯಂವರ", "ಭೂಗತ", "ನನ್ನ ಕನಸಿನ ಹೂವೆ", "ನಲ್ಲ" ಮುಂತಾದ ಅನೇಕ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. 100ಕ್ಕೂ ಹೆಚ್ಚು ಚಿತ್ರಗಳಲ್ಲಿನ ಅವರ ಬಹುಮುಖಿ ಅಭಿನಯದ ಮೂಲಕ ಕನ್ನಡ ಚಿತ್ರರಂಗಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ.
ಹರೀಶ್ ರಾಯ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಮತ್ತು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕನ್ನಡ ಚಿತ್ರರಂಗದ ಹಲವು ನಟರು, ಶಿವರಾಜ್‌ಕುಮಾರ್, ಯಶ್, ದರ್ಶನ್, ಧ್ರುವ ಸರ್ಜಾ ಸೇರಿದಂತೆ ಅನೇಕರು ಅವರಿಗೆ ಆರ್ಥಿಕ ನೆರವು ನೀಡಿದ್ದರು.