Skip to main content
ವಿಡಿಯೋ
1/3
cinema

ಕನ್ನಡ ಚಿತ್ರರಂಗದಲ್ಲಿ ಶೋಕಲಹರಿ: ತಂದೆಯ ಕೊನೆ ಆಸೆ ಬಿಚ್ಚಿಟ್ಟ ಹರೀಶ್‌ ರಾಯ್‌ ಪುತ್ರ!

By Ram Chethan
ಕನ್ನಡ ಚಿತ್ರರಂಗದಲ್ಲಿ ಶೋಕಲಹರಿ: ತಂದೆಯ ಕೊನೆ ಆಸೆ ಬಿಚ್ಚಿಟ್ಟ ಹರೀಶ್‌ ರಾಯ್‌ ಪುತ್ರ!

ಖ್ಯಾತ ಖಳನಟ ಹರೀಶ್ ರಾಯ್ ನಿಧನದ ದುಃಖದಲ್ಲಿದ್ದ ಕುಟುಂಬ, ಅವರ ಕೊನೆಯ ಬಯಕೆಯನ್ನು ನೆನಪಿಸಿಕೊಂಡಿದೆ. “ದೇಶಕ್ಕಾಗಿ ಕ್ರಿಕೆಟ್ ಆಡು” ಎಂಬ ತಂದೆಯ ಆಶಯವನ್ನು ನೆರವೇರಿಸಲು ಪುತ್ರ ಮಂಜುನಾಥ್ ಸಂಕಲ್ಪ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಖ್ಯಾತ ಖಳನಟ ಹರೀಶ್ ರಾಯ್ ಅವರು ನವೆಂಬರ್ 6 ರಂದು ಅನಾರೋಗ್ಯದಿಂದ ನಿಧನರಾದರು. ತಮ್ಮ ತಂದೆಯ ನಿಧನದಿಂದ ದುಃಖಿತರಾದ ಅವರ ಪುತ್ರ ಮಂಜುನಾಥ ಸಿ. ತಂದೆಯ ಕೊನೆಯ ಆಸೆಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.Armani Exchange Analog Black Dial Men's Watch-AX7163SET

ಮಂಜುನಾಥ್ ಸಿ. ಅವರು ಕಣ್ಣೀರು ಹಾಕುತ್ತಾ, “ಕಳೆದ ತಿಂಗಳು ನನ್ನೊಂದಿಗೆ ಮಾತನಾಡಿದಾಗ, ದೇಶಕ್ಕಾಗಿ ಕ್ರಿಕೆಟ್ ಆಡು ಮಗನೆ ಎಂದಿದ್ದರು” ಎಂದು ಹೇಳಿದರು. ತಂದೆಯ ಆಸೆಯನ್ನು ಈಡೇರಿಸಲು ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಮಂಜುನಾಥ್ ಭಾವುಕರಾಗಿ ತಿಳಿಸಿದ್ದಾರೆ.ಅಭಿನಯಿಸಿದ್ದು 100ಕ್ಕೂ ಹೆಚ್ಚು ಸಿನಿಮಾ...ಬ್ರೇಕ್‌ ಕೊಟ್ಟಿದ್ದು ಕೆಲವು ಮಾತ್ರ! ಇಲ್ಲಿದೆ ಹರೀಶ್‌ ರಾಯ್‌ ಅವರ ಸಿನಿ ಜರ್ನಿ!


ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಹೆಸರುವಾಸಿಯಾಗಿದ್ದ ಹರೀಶ್ ರಾಯ್, ಪತ್ನಿ ಮತ್ತು ಪುತ್ರರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.