'Afro Tapaang' ಹಾಡು ಬಿಡುಗಡೆಯಾಗಿ ವೈರಲ್ ಆಗುತ್ತಿರುವ ಬೆನ್ನಲ್ಲೇ, ನಟ ಶಿವರಾಜ್‌ಕುಮಾರ್ ಅವರು ಹಾಡಿನ ಚಿತ್ರೀಕರಣದ ಅನುಭವ ಮತ್ತು ನಿರ್ದೇಶಕ ಅರ್ಜುನ್ ಜನ್ಯ ಅವರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಚಿತ್ರದ ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.
ಶಿವಣ್ಣನ ಡ್ಯಾನ್ಸ್ ಅನುಭವ -
ಹಾಡಿನಲ್ಲಿನ ತಮ್ಮ ನೃತ್ಯದ ಬಗ್ಗೆ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವಣ್ಣ, ಇದು ತಮಗೆ ಹೊಸ ಅನುಭವ ನೀಡಿದೆ ಎಂದಿದ್ದಾರೆ. "ನಾನು ಇಷ್ಟು ವೇಗವಾಗಿ ಡ್ಯಾನ್ಸ್ ಮಾಡಿದ್ದು ಇದು ಮೊದಲ ಬಾರಿ. ನನಗೆ ತುಂಬಾ ಖುಷಿಯಾಗಿದೆ. ಚೆನ್ನಾಗಿ ಮಾಡಿದ್ದಾರೆ, ಸಣ್ಣ ಸಣ್ಣ ಪ್ರಾಪರ್ಟೀಸ್ (props) ಎಲ್ಲವೂ ಚೆನ್ನಾಗಿವೆ. ಇದು ನನಗೆ ಒಂದೊಳ್ಳೆ ಅನುಭವ, ಮತ್ತೊಮ್ಮೆ ನನ್ನ ಶಕ್ತಿಯ ಬಗ್ಗೆ ಗೊತ್ತಾಗಿದೆ.” ಎಂದು ಹೇಳಿದ್ದಾರೆ. How to Win Friends and Influence People: Original Classic Edition | Premium Paperback Paperback – Big Book, 1 January 2021
ಶಿವಣ್ಣ ಹಾಡಿನ ನಿರ್ದೇಶಕ ಅರ್ಜುನ್ ಜನ್ಯ ಅವರ ಕೆಲಸವನ್ನು ಶ್ಲಾಘಿಸಿ, ಅವರೊಂದಿಗಿನ ಒಡನಾಟದ ಬಗ್ಗೆ ಹೇಳಿದ್ದಾರೆ. "ಈ ಸ್ಥಳ (ಲೊಕೇಶನ್) ನಮಗೆ ಲಕ್ಕಿ ಸ್ಪಾಟ್. ಇಲ್ಲೇ, ಭಜರಂಗಿ, ಭಜರಂಗಿ 2, ವಜ್ರಕಾಯ ಚಿತ್ರಗಳ ಮಾಸ್ ಸಾಂಗ್ಸ್‌ಗಳನ್ನು ಕೂಡ ಮಾಡಿದ್ದು," ಎಂದು ನೆನಪಿಸಿಕೊಂಡಿದ್ದಾರೆ.
'Afro Tapaang' ಹಾಡು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದ್ದು, ಶಿವಣ್ಣನವರ ಡ್ಯಾನ್ಸ್ ಮತ್ತು ಹಾಡಿನ ವಿಶಿಷ್ಟ ಶೈಲಿ ಅಭಿಮಾನಿಗಳನ್ನು ಆಕರ್ಷಿಸಿದೆ ಎನ್ನಲಾಗಿದೆ. ಇದನ್ನೂ ಓದಿ: 25 ವರ್ಷಗಳ ಬಳಿಕ ʻಯಜಮಾನʼನ ಮರುಆಗಮನ - ಕೌಟುಂಬಿಕ ಚಿತ್ರಕ್ಕೆ ಟೆಕ್ನಾಲಜಿಕಲ್ ಟಚ್!?